Tag: Srirangapatna

ಮುಂದುವರೆದ ಗಣಿಗಾರಿಕೆ ಮೇಲಿನ ದಾಳಿ
ಮಂಡ್ಯ

ಮುಂದುವರೆದ ಗಣಿಗಾರಿಕೆ ಮೇಲಿನ ದಾಳಿ

July 7, 2018

ಮಂಡ್ಯ:  ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ, ಕ್ರಷರ್ ಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರವೂ ದಾಳಿ ನಡೆಸಿ 19 ಅಕ್ರಮ ಜಲ್ಲಿ ಕ್ರಷರ್‍ಗಳಿಗೆ ಬೀಗ ಜಡಿದಿದ್ದಾರೆ. ನಿನ್ನೆ ಅರಕೆರೆ ವ್ಯಾಪ್ತಿಯ ಹಲವು ಅಕ್ರಮ ಕ್ರಷರ್‍ಗಳಿಗೆ ಬೀಗ ಜಡಿದಿದ್ದರು. ಇಂದು ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಗಣಂಗೂರು, ಗೌಡಹಳ್ಳಿ, ಟಿ.ಎಂ.ಹೂಸೂರು, ಕಾಳೇನಹಳ್ಳಿ ಮತ್ತು ಜಕ್ಕನಹಳ್ಳಿ ವ್ಯಾಪ್ತಿ ಗಳಲ್ಲಿ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ನಡೆಸುತ್ತಿದ್ದ…

ದಲಿತರೊಂದಿಗೆ ಬಹಿರಂಗ ಸಂವಾದ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ
ಮಂಡ್ಯ

ದಲಿತರೊಂದಿಗೆ ಬಹಿರಂಗ ಸಂವಾದ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ

July 2, 2018

ಮಂಡ್ಯ: ಇದೇ ಪ್ರಥಮ ಬಾರಿಗೆ ಪರಿಶಿಷ್ಠ ಜಾತಿ ಮತ್ತು ಪಂಗಡದವರೊಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ನಡೆಸಿದ ಸಂವಾದದಲ್ಲಿ ಸಮಸ್ಯೆಗಳ ಮಹಾ ಪೂರವೇ ಹರಿದು ಬಂತು..! ನಗರದ ಗಾಂಧಿ ಭವನದಲ್ಲಿಂದು ಆಯೋ ಜಿಸಲಾಗಿದ್ದ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದವರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಕಾವೇರಿ ನದಿ ದಡದಲ್ಲಿದ್ದರೂ ಮಹದೇವಪುರಕ್ಕೆ ಶುದ್ಧ ಕುಡಿಯುವ ನೀರೇ ಇಲ್ಲಾ…. ಸ್ಮಶಾನ ಒತ್ತುವರಿಯಾಗಿದ್ದು ಹೆಣ ಹೂಳಲು ಜಾಗವೇ ಇಲ್ಲ…ರಸ್ತೆ, ಚರಂಡಿ ಮಾಡಿಸಿ ಕೊಡಿ… ನಿರಂತರ ದೌರ್ಜನ್ಯ…

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ

June 28, 2018

ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ, ಎಲ್ಲೆಡೆ ಬೆಂಗಳೂರು ನಿರ್ಮಾತೃವಿನ ಗುಣಗಾನ ಮಂಡ್ಯ:  ಜಿಲ್ಲಾದ್ಯಂತ ಬುಧ ವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೆಂಗಳೂರು ನಿರ್ಮಾತೃ ವಿನ ಗುಣಗಾನ ನಡೆಯಿತು. ಸಾಧನೆಗೆ ಇತಿಹಾಸದ ಅರಿವು ಅಗತ್ಯ: ‘ಜೀವನದಲ್ಲಿ ಯಾರಾದರೂ ಸಾಧನೆ ಮಾಡ ಬೇಕಾದರೆ ಇತಿಹಾಸದ ಅರಿವು ಅಗತ್ಯ. ಕೆಂಪೇಗೌಡರು ತಮ್ಮ ಜೀವನದಲ್ಲಿ ಇತಿ ಹಾಸ ಸೃಷ್ಟಿಸಿದ ವೀರವ್ಯಕ್ತಿ’ ಎಂದು ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ.ಶಂಕರೇಗೌಡ ಹೇಳಿದರು….

ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು 
ಮಂಡ್ಯ

ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು 

June 19, 2018

ಶ್ರೀರಂಗಪಟ್ಟಣ:  ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಆಯೋಜಿಸಿದ್ದ ಧಾರವಾಡ ಇಂಡಿಯನ್ ವರ್ಚುಯಲ್ ಫಾರ್ ಪೀಸ್ & ಎಜುಕೇಷನ್ ಸಂಸ್ಥೆ, ಭಾರತ ಸರ್ಕಾರ ದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದ ಶ್ರೀಗಳಿಗೆ ಗುರುವಂದನಾ ಸಮಾರಂಭ ಹಾಗೂ ಗಣ್ಯರಿಗೆ ಗೌರವ, 11ನೇ ಸಮೃದ್ಧ ಜೀವನ ಶಿಬಿರ ಮತ್ತು ಶ್ರೀ ತ್ರಿನೇತ್ರ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯೋಗಿಕ್ ಸೈನ್ಸ್ & ರಿಸರ್ಚ್ ಸೆಂಟರ್‍ನ ಸಮಾ ರೋಪ…

ತಾಲೂಕು ಕಚೇರಿಗೆ ರೈತರ ಮುತ್ತಿಗೆ: ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಮಂಡ್ಯ

ತಾಲೂಕು ಕಚೇರಿಗೆ ರೈತರ ಮುತ್ತಿಗೆ: ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

June 15, 2018

ಶ್ರೀರಂಗಪಟ್ಟಣ: ಎಲ್ಲಾ ವರ್ಗದ ರೈತರ ಸಂಪೂರ್ಣ ಸಾಲಮನ್ನಾ, ಬೆಳೆ ನಷ್ಟದ ಪರಿಹಾರಕ್ಕೆ ಆಗ್ರಹಿಸಿ, ಹಾಲಿನ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ಪಟ್ಟಣದ ತಾಲೂಕು ಕಚೇರಿ ಎದುರು ಸಮಾವೇಶಗೊಂಡ ಪ್ರತಿ ಭಟನಾಕಾರರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 2 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಮಾತನಾಡಿದ ರೈತ…

ನಿಮಿಷಾಂಬ ದೇವಾಲಯದ ಹುಂಡಿ ಎಣಿಕೆ
ಮಂಡ್ಯ

ನಿಮಿಷಾಂಬ ದೇವಾಲಯದ ಹುಂಡಿ ಎಣಿಕೆ

June 15, 2018

ಶ್ರೀರಂಗಪಟ್ಟಣ:  ಶ್ರೀರಂಗ ಪಟ್ಟಣದ ಹೊರವಲಯದಲ್ಲಿರುವ ಗಂಜಾಂನ ಪ್ರಸಿದ್ಧ ನಿಮಿಷಾಂಬ ದೇವಾ ಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಸಲಾಯಿತು. ದೇವಾಲಯದಲ್ಲಿನ ಒಟ್ಟು 18 ಹುಂಡಿ ಗಳನ್ನು ತೆರೆದು ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಗಳು, ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿಗಳು ಹಾಗೂ ವಿವಿಧ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಕಾರ್ಯಕರ್ತರು ಹಣ ಎಣಿಕೆ ನಡೆಸಿದರು. ಹುಂಡಿಗಳಲ್ಲಿ ಸಂಗ್ರಹಿಸಲ್ಪಟ್ಟ ಒಟ್ಟು 35.57.804 ಲಕ್ಷ ರೂ., 5 ಅರಬ್ ದೇಶದ ದೀಯರಮ್ಸ್ ನೋಟು, 93.600 ಮಿಲಿ ಗ್ರಾಂ ಚಿನ್ನ ಹಾಗೂ 248 ಗ್ರಾಂ…

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಗೆಳೆಯನ ಬರ್ತ್‍ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ಸಾವು
ಮೈಸೂರು

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಗೆಳೆಯನ ಬರ್ತ್‍ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ಸಾವು

June 5, 2018

ಮಂಡ್ಯ:  ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿ ರುವ ಘಟನೆ ಶ್ರೀರಂಗಪಟ್ಟಣ ಸಮೀಪದ ಬಾಬು ರಾಯನಕೊಪ್ಪಲಿನ ಲೋಕಪಾವನಿ ಸೇತುವೆ ಬಳಿ ಸೋಮವಾರ ಮುಂಜಾನೆ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಅರುಣ್‍ಕುಮಾರ್ (25), ಬಾಬುರಾಯನ ಕೊಪ್ಪಲು ಗ್ರಾಮದ ಆದರ್ಶ(22) ಮೃತ ಯುವಕ ರಾಗಿದ್ದು, ಶಿವಕುಮಾರ್, ಮಂಜುನಾಥ್, ರಾಕೇಶ್ ಮತ್ತು ಪುನೀತ್ ಘಟನೆಯಲ್ಲಿ ತೀವ್ರ ವಾಗಿ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಸ್ನೇಹಿತನೊಬ್ಬನ ಹುಟ್ಟುಹಬ್ಬ ವನ್ನು ಆಚರಿಸಲು ಅರುಣ್‍ಕುಮಾರ್, ಆದರ್ಶ ಸೇರಿದಂತೆ…

ಕಾಂಗ್ರೆಸ್‍ನಿಂದ ಮೈತ್ರಿ ಮುಜುಗರ: ಜೆಡಿಎಸ್ ಶಾಸಕ ಬೇಸರ
ಮೈಸೂರು

ಕಾಂಗ್ರೆಸ್‍ನಿಂದ ಮೈತ್ರಿ ಮುಜುಗರ: ಜೆಡಿಎಸ್ ಶಾಸಕ ಬೇಸರ

May 30, 2018

ಮಂಡ್ಯ: ಅಧಿಕಾರಕ್ಕೆ ಬರುವಾಗ ಬೇಷರತ್ ಬೆಂಬಲ ಘೋಷಿಸಿದ್ದ ಕಾಂಗ್ರೆಸ್ ಇದೀಗ ಕ್ಷಣ ಕ್ಷಣಕ್ಕೂ ಷರತ್ತು ವಿಧಿಸುತ್ತಿದೆ. ಕಾಂಗ್ರೆಸ್ ನಾಯಕರ ಈ ನಡೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರವಲ್ಲ ನಮಗೂ ಬೇಸರ ತಂದಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಂತ್ರ ಫಲಿತಾಂಶದಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆರಂಭದಲ್ಲಿ ಬೇಷರತ್ ಬೆಂಬಲ ಎಂದಿದ್ದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ನಂತರ ನಾನಾ ಷರತ್ತು ವಿಧಿಸುತ್ತಿದ್ದಾರೆ. ಸರ್ಕಾರ ರಚನೆಯಾಗಿ ವಾರವಾದರೂ…

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ
ಮಂಡ್ಯ

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ

May 30, 2018

ಮಂಡ್ಯ: ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಸಿ.ಎಸ್.ಮೊಹಮ್ಮದ್ ಸುಹೇಲ್ ತಂಡಕ್ಕೆ ಎರಡನೇ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ ದೊರಕಿದೆ ಎಂದು ಸುಹೇಲ್ ತಂದೆ ಅನಾರ್ಕಲಿ ಸಲೀಂ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಮೆರಿಕಾದ ಪಿಟ್ಸ್‍ಬರ್ಗ್‍ನಲ್ಲಿ ಮೇ 13 ರಿಂದ 18ರವರೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿ ಶ್ರೀರಂಗಪಟ್ಟಣದ ಸಿ.ಎಸ್‍ಮೊಹಮ್ಮದ್ ಸುಹೇಲ್ ಮತ್ತು ಪುತ್ತೂರಿನ ವಿವೇಕಾ ನಂದ ಕಾಲೇಜಿನ ಸ್ವಸ್ತಿಕ್ ಪದ್ಮ…

ಜಿಲ್ಲಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ವಿಫಲ
ಮಂಡ್ಯ

ಜಿಲ್ಲಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ವಿಫಲ

May 29, 2018

ಮಂಡ್ಯ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಮಂಡ್ಯ ಜಿಲ್ಲಾದ್ಯಂತ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿ ಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಬಗ್ಗೆ ದ್ವಂದ್ವ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬಂದ್‍ಗೆ ಕರೆ ನೀಡಿದ್ದರು. ಹೀಗಾಗಿ ಸೋಮ ವಾರ ನಡೆದ ರಾಜ್ಯ ಬಂದ್‍ಗೆ ಯಾವುದೇ ಸಂಘಟನೆ ಬೆಂಬಲ ಸೂಚಿಸದ ಹಿನ್ನೆಲೆ ಯಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿ,…

1 2 3 4 5
Translate »