Tag: Virajpet

ನ.28ಕ್ಕೆ ವಿ.ಪೇಟೆ ಡಿವೈಎಸ್ಪಿ ಕಛೇರಿಗೆ ಮುತ್ತಿಗೆ
ಕೊಡಗು

ನ.28ಕ್ಕೆ ವಿ.ಪೇಟೆ ಡಿವೈಎಸ್ಪಿ ಕಛೇರಿಗೆ ಮುತ್ತಿಗೆ

November 24, 2018

ಪೊನ್ನಂಪೇಟೆ:  ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೊಡಗಿನ ಹಿಂದೂ ಸಮು ದಾಯವನ್ನು ನಿಂದಿಸಿ, ಅವಹೇಳನ ಹಾಗೂ ಕೋಮು ಭಾವನೆಗೆ ಧಕ್ಕೆ ತಂದಿರುವ, ಪ್ರಚೋದನಕಾರಿ ಸಂದೇಶ ನೀಡಿರುವ ಆರೋಪದಡಿ ಕೊಡಗಿನ ನಾಪೊಕ್ಲು ನಿವಾಸಿ ಆಸೀಫ್ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೆ ಬಂಧಿಸದೆ ಇರುವುದನ್ನು ಖಂಡಿಸಿ ನ.28 ರಂದು ವಿರಾಜಪೇಟೆ ಡಿವೈಎಸ್‍ಪಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಹಿಂದೂ ಪರ ಸಂಘಟನೆಗಳು ನಿರ್ಣಯ ಕೈಗೊಂಡಿದೆ. ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೆಷನ್ ಕ್ಲಬ್ ಸಭಾಂಗಣದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ…

ಆರ್ಜಿ ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಕ್ಕೆ ಕ್ರಮ
ಕೊಡಗು

ಆರ್ಜಿ ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಕ್ಕೆ ಕ್ರಮ

November 24, 2018

ವಿರಾಜಪೇಟೆ: ವಿರಾಜಪೇಟೆ ಬಳಿಯ ಆರ್ಜಿ ಗ್ರಾಪಂ ಫಲಾನುಭವಿಗಳಿಗೆ ವಿದ್ಯುತ್ ದೀಪ, ಕುಡಿಯುವ ನೀರು, ಕಟ್ಟಡ ಮತ್ತು ವಾಣಿಜ್ಯ ಪರವಾನಗಿ, ಖಾತೆ ವರ್ಗಾವಣೆ ಹಾಗೂ ನಿರಾಕ್ಷೇಪಣಾ ಪತ್ರ ಸೇರಿದಂತೆ ಮೂಲ ಭೂತ ಸೌಲಭ್ಯಗಳಿಗೆ ಅರ್ಜಿ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಹೆಚ್.ಎನ್.ಗಾಯಿತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾ ಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಸತೀಶ್ ಕುಮಾರ್, ಕಳೆದ 2-3 ತಿಂಗಳಿಂದಲೂ ಸಭೆಯನ್ನು ನಡೆಸಿಲ್ಲ ಎಂದು ಪಂಚಾಯಿತಿ ಅಧ್ಯಕ್ಷೆ ಮತ್ತು ಕೆಲವು ಸದಸ್ಯರುಗಳು ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಜಯಣ್ಣ ಅವರಿಗೆ ದೂರು…

ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣೆ
ಕೊಡಗು

ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣೆ

November 18, 2018

ವಿರಾಜಪೇಟೆ: ವಿಶೇಷ ಅಗತ್ಯತೆಯುಳ್ಳ ಮಕ್ಕಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರು ಮತ್ತು ಪೋಷಕರ ಆಧ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು. ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ ಇವರ ವತಿಯಿಂದ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತ ನಾಡಿ, ವಿಶೇಷ ಅಗತ್ಯತೆಯುಳ ಮಕ್ಕಳಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪೋಷಕರು…

ಬಾಲ್ಯಾವಸ್ಥೆಯಲ್ಲಿ ಎಚ್ಚರ ಅಗತ್ಯ
ಕೊಡಗು

ಬಾಲ್ಯಾವಸ್ಥೆಯಲ್ಲಿ ಎಚ್ಚರ ಅಗತ್ಯ

November 17, 2018

ವಿರಾಜಪೇಟೆ: ಮಕ್ಕಳು ಬಾಲ್ಯಾವಸ್ಥೆಯ ಸುಮಧುರ ಕ್ಷಣಗಳನ್ನು ಕಳೆಯುವಾಗ ಎಚ್ಚರಿಕೆ ವಹಿಸುವುದು ಅಗತ್ಯ, ಮಕ್ಕಳಿಗಾಗಿ ವಿಶೇಷ ಕಾನೂನುಗಳಿವೆ. ಅದನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ ವಿರಾಜಪೇಟೆ, ಮಕ್ಕಳ ಸಹಾಯ ವಾಣಿ 1098 ಸಂಯುಕ್ತ ಆಶ್ರಯದಲ್ಲಿ ”ಚೈಲ್ಡ್ ಲೈನ್ ಸೇ ದೋಸ್ತಿ” ಮತ್ತು ಬಾಲ್ಯಾ ವಸ್ಥೆ ಕಾನೂನುಗಳು ಹಾಗೂ ಮಕ್ಕಳ ನಿಗಾ ಕೇಂದ್ರಗಳ ಬಗ್ಗೆ ವಿರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ…

ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚು ಆದ್ಯತೆ
ಕೊಡಗು

ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚು ಆದ್ಯತೆ

November 16, 2018

ವಿರಾಜಪೇಟೆ:  ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪ, ಸಾರ್ವಜನಿಕರಿಗೆ ಕುಡಿಯುವ ನೀರು, ಚರಂಡಿ ಮತ್ತು ಸ್ವಚ್ಚತೆಯ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಹೇಳಿದರು. ವಿರಾಜಪೇಟೆ ಪಟ್ಟಣದ ಅನೇಕ ವಾರ್ಡ್‍ಗಳಿಗೆ ಅಲ್ಲಿನ ಸದಸ್ಯರುಗಳೊಂದಿಗೆ ಬೇಟಿ ನೀಡಿ ವೀಕ್ಷಣೆ ನಡೆಸಿದ ನಂತರ ಅರಸು ನಗರಕ್ಕೆ ಅಲ್ಲಿನ ಸದಸ್ಯ ರಂಜಿ ಪೂಣಚ್ಚ ಅವರೊಂದಿಗೆ ಬೇಟಿ ನೀಡಿದ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಬೆಟ್ಟ ಪ್ರದೇಶವಾದ ಅರಸು ನಗರ ಮತ್ತು ಇತರ ಕಡೆಗಳಲ್ಲಿ ಕಾಲು ದಾರಿಗಳನ್ನು ದುರಸ್ತಿ…

ವಿರಾಜಪೇಟೆಯಲ್ಲಿ ಮುಸ್ಲಿಂ ಸಂಘಟನೆ ಪ್ರತಿಭಟನೆ
ಕೊಡಗು

ವಿರಾಜಪೇಟೆಯಲ್ಲಿ ಮುಸ್ಲಿಂ ಸಂಘಟನೆ ಪ್ರತಿಭಟನೆ

November 14, 2018

ವಿರಾಜಪೇಟೆ: ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಭವನದಲ್ಲಿ ನ.5 ರಂದು ನಡೆದ ಸಭೆಯಲ್ಲಿ ಅಂಕಣಕಾರ ಸಂತೋಷ್ ತಮ್ಮಯ್ಯ ಎಂಬುವರು ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡುವುದರೊಂದಿಗೆ ಇಲ್ಲಿನ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ವಿರಾಜಪೇಟೆ ಯೂತ್ ಫ್ರೆಂಡ್ಸ್ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರಲ್ಲದೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ್ದ ತಹಶಿಲ್ದಾರ್ ಆರ್.ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಯೂತ್ ಫ್ರೆಂಡ್ಸ್ ಅಧ್ಯಕ್ಷ…

ಟಿಪ್ಪು ಜಯಂತಿ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ
ಕೊಡಗು

ಟಿಪ್ಪು ಜಯಂತಿ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ

November 9, 2018

ವಿರಾಜಪೇಟೆ:  ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಹಾಗೂ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ವತಿಯಿಂದ ವಿರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರ ರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಯಾವುದೇ ಜನಾಂಗದ ವಿರುದ್ಧ ನಾವು ಅಪಪ್ರಚಾರ ಮಾಡಿಲ್ಲ. ಕೊಡಗಿನ ಪುಣ್ಯ ಕ್ಷೇತ್ರಗಳನ್ನು ನಾಶ…

ಗಡಿಯಲ್ಲಿ ಕನ್ನಡ ಉಳಿವಿಗೆ ಕ್ರಮ ಅಗತ್ಯ
ಕೊಡಗು

ಗಡಿಯಲ್ಲಿ ಕನ್ನಡ ಉಳಿವಿಗೆ ಕ್ರಮ ಅಗತ್ಯ

November 5, 2018

ವಿರಾಜಪೇಟೆ: ಇತಿಹಾಸ ನಿರ್ಮಿ ಸಿರುವ ಕನ್ನಡ ನಾಡು ನುಡಿ ಭಾಷೆಯನ್ನು ಉಳಿಸಲು ಕನ್ನಡಿಗರೆಲ್ಲ ಒಂದಾಗಿ ಗಡಿ ಭಾಗದಲ್ಲಿ ಕನ್ನಡದ ನೆಲವನ್ನು ಉಳಿಸ ಬೇಕಾಗಿದೆ ಎಂದು ವಕೀಲರು ಹಾಗೂ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು. 63ನೇ ಕನ್ನಡ ರಾಜ್ಯೋತ್ಸವದ ಅಂಗ ವಾಗಿ ವಿರಾಜಪೇಟೆ ಕರ್ನಾಟಕ ಸಂಘ ಸ್ಥಳೀಯ ಪುರಭವನದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿದ ಅವರು, ಶಿಲ್ಪ ಕಲೆಯ ಬೀಡು, ಕನ್ನಡ ಭೂಮಿಯನ್ನು ರಕ್ಷಿಸಲು ಪ್ರತಿ ಯೊಬ್ಬರು ಮುಂದಾಗಬೇಕು. ಹಿಂದೆ ದಿ.ಡಿ.ಜೆ.ಪದ್ಮನಾಭ…

ವಿರಾಜಪೇಟೆ ಪಪಂನಲ್ಲಿ ಅತಂತ್ರ ಫಲಿತಾಂಶ: ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1, ಮೂರು ಪಕ್ಷೇತರರ ಗೆಲುವು
ಕೊಡಗು

ವಿರಾಜಪೇಟೆ ಪಪಂನಲ್ಲಿ ಅತಂತ್ರ ಫಲಿತಾಂಶ: ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1, ಮೂರು ಪಕ್ಷೇತರರ ಗೆಲುವು

November 1, 2018

ವಿರಾಜಪೇಟೆ:  ವಿರಾಜಪೇಟೆ ಪಟ್ಟಣ ಪಂಚಾಯಿತಿಯ 18 ವಾರ್ಡ್ ಗಳಿಗೆ ಅ.28 ರಂದು ನಡೆದ ಚುನಾವಣೆಯ ಮತ ಎಣಿಕೆಯು ಇಂದು ಪಟ್ಟಣದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದು ಭಾರತೀಯ ಜನತಾ ಪಾರ್ಟಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರ ಮೂವರು ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್ ಪಕ್ಷದ ಜೆ.ಫಸಿಹ ತಬಸುಂ 157 ಮತ ಪಡೆದು ಜಯಗಳಿಸಿದರೆ, ಬಿಜೆಪಿಯ ತಸ್ನಿಂ ಅಕ್ತರ್ 154 ಮತ ಪಡೆದರು. ವಾರ್ಡ್ 2ರಲ್ಲಿ ಬಿಜೆಪಿಯ ಪಿ.ವಿಷ್ಣು…

ವಿರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರ ವೀಣಾ ಅಚ್ಚಯ್ಯ ಪ್ರಚಾರ
ಕೊಡಗು

ವಿರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರ ವೀಣಾ ಅಚ್ಚಯ್ಯ ಪ್ರಚಾರ

October 25, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಪ್ರದೇಶವಾದ ಅರಸು ನಗರ ಹಾಗೂ ಇತರ ವಾರ್ಡ್‍ಗಳಿಗೆ ಭೇಟಿ ನೀಡದಾಗ ಇತ್ತೀಚೆಗೆ ಸುರಿದ ಮಹಾ ಮಳೆಯಿಂದಾಗಿ ಬಡಕುಟುಂಬಗಳ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದ್ದರೂ ಪಂಚಾ ಯಿತಿಯ ಬಿಜೆಪಿ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರಲ್ಲದೆ, ಜನರು ಈಗ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷದತ್ತ ಒಲವುತೋರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಹೇಳಿದರು. ಪಟ್ಟಣ ಪಂಚಾಯಿತಿ ಚುನಾವಣೆಗೆ ಅರಸು…

1 2 3 4 5 13
Translate »