ವಿರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರ ವೀಣಾ ಅಚ್ಚಯ್ಯ ಪ್ರಚಾರ
ಕೊಡಗು

ವಿರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರ ವೀಣಾ ಅಚ್ಚಯ್ಯ ಪ್ರಚಾರ

October 25, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಪ್ರದೇಶವಾದ ಅರಸು ನಗರ ಹಾಗೂ ಇತರ ವಾರ್ಡ್‍ಗಳಿಗೆ ಭೇಟಿ ನೀಡದಾಗ ಇತ್ತೀಚೆಗೆ ಸುರಿದ ಮಹಾ ಮಳೆಯಿಂದಾಗಿ ಬಡಕುಟುಂಬಗಳ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದ್ದರೂ ಪಂಚಾ ಯಿತಿಯ ಬಿಜೆಪಿ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರಲ್ಲದೆ, ಜನರು ಈಗ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷದತ್ತ ಒಲವುತೋರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಹೇಳಿದರು.

ಪಟ್ಟಣ ಪಂಚಾಯಿತಿ ಚುನಾವಣೆಗೆ ಅರಸು ನಗರದ ಎರಡನೇ ವಾರ್ಡ್‍ನಿಂದ ಸ್ಪರ್ಧಿ ಸಿರುವ ಕಾಂಗ್ರೆಸ್ ಅಭ್ಯರ್ಥಿ ಪಿ.ಎ.ರಂಜಿಪೂಣಚ್ಚ ಹಾಗೂ ದೇವಾಂಗ ಬೀದಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಡಿ.ಪಿ.ರಾಜೇಶ್ ಅವರ ಪರ ಚುನಾವಣಾ ಪ್ರಚಾರ ಕೈಗೊಂಡ ಅವರು ಮಾತನಾಡುತ್ತಾ ಹಿಂದೆ ಕಾಂಗ್ರೆಸ್ ಆಡಳಿತ ಇದ್ದಾಗ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿತ್ತು. ನಂತರ ಬಂದ ಬಿಜೆಪಿಯ ಆಡಳಿತದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಮತದಾರರು ಹೇಳುತ್ತಿದ್ದಾರೆ. ಅದರಿಂದ ಕಾಂಗ್ರೆಸ್ ಪಕ್ಷ ದಿಂದ ಈ ಚುನಾವಣೆಯಲ್ಲಿ ಯುವಕ-ಯುವತಿರೇ ಹೆಚ್ಚು ಸ್ಪರ್ಧಿಸಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಂಚಾಯತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಡುವಂತೆ ಮತದಾರರನ್ನು ಕೋರಿದರು. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ಕರುಣ್ ಕಾಳಯ್ಯ, ಅಬ್ದುಲ್ ಸಲಾಂ, ಎಂ.ಕೆ.ಬೋಪಣ್ಣ, ಕೆ.ಸಿ.ಶಭರಿಶ್, ಜಿ.ಜಿ.ಮೋಹನ್, ಸಿ.ಬಿ.ರವಿ, ಮಹ್ಮದ್ ರಫಿ, ಮರವಿನ್ ಲೋಬೊ, ಅಭ್ಯರ್ಥಿಗಳಾದ ಪಿ.ಎ.ರಂಜಿ ಪೂಣಚ್ಚ ಹಾಗೂ ಡಿ.ಪಿ.ರಾಜೇಶ್, ಸ್ಥಳೀಯರಾದ ಪ್ರದೀಪ್. ಪೂವಮ್ಮ ಮುಂತಾದವರಿದ್ದರು.

Translate »