ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣಕ್ಕೆ ತೀವ್ರ ವಿರೋಧ
ಕೊಡಗು

ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣಕ್ಕೆ ತೀವ್ರ ವಿರೋಧ

October 25, 2018

ಮೈಸೂರು: ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಕೇಂದ್ರ ಭೂ ಸಾರಿಗೆ, ಹೆದ್ದಾರಿ, ಹಡಗು ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ಹಾಲಿ ಇರುವ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಪರಿಸರಕ್ಕೆ ಹಾನಿಯಾಗುತ್ತದೆ ಎಂದಿರುವ ಅವರು, ಉದ್ದೇ ಶಿತ ನಾಲ್ಕು ಪಥದ ರಸ್ತೆಯು 70 ಮೀಟರ್ ಸಮತಟ್ಟಾದ ಪ್ರದೇಶ ಮತ್ತು 45 ಮೀಟರ್ ಬೆಟ್ಟ-ಗುಡ್ಡಗಳನ್ನು ಹೊಂದಿದೆ. ಈ ರಸ್ತೆ ಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಹಾಲಿ ಇರುವ ಅಳತೆಯ 6ರಿಂದ 10 ಪಟ್ಟು ಪ್ರದೇಶ ಹೆಚ್ಚುವರಿಯಾಗಿ ಬೇಕಾಗುತ್ತದೆ. ಇದರ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಹಸಿರು ನಾಶವಾಗುತ್ತದೆ. ಅಲ್ಲದೇ ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೂ ಹಾನಿಯುಂಟಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಗಲೀಕರಣಗೊಳ್ಳಲಿರುವ ಈ ರಸ್ತೆಯು ಕಾಫಿ ತೋಟಗಳ ಮೂಲಕ ಹಾದು ಹೋಗ ಲಿರುವುದರಿಂದ ಒಂದು ಹೆಕ್ಟೇರ್ ಪ್ರದೇಶಕ್ಕೆ ಸುಮಾರು 350 ಭಾರೀ ಗಾತ್ರದ ಮರ ಗಳು ಹನನವಾಗುವುದರ ಜೊತೆಗೆ ಅಸಂಖ್ಯಾತ ವನ್ಯ ಜೀವಿಗಳು ಹಾಗೂ ಅರಣ್ಯ ಪ್ರದೇಶ ನಾಶವಾಗುತ್ತದೆ. ಮರಗಳ ನಾಶ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಯಿಂದ ಉಂಟಾಗುವ ಆಡಚಣೆಗಳು ಹಾಗೂ ಶಬ್ದ ಮಾಲಿನ್ಯದಿಂದ ತೀವ್ರವಾಗಿ ಪರಿಸರ ಹಾನಿಯಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತದಿಂದ ಉಂಟಾದ ಜೀವ ಹಾನಿ ಹಾಗೂ ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ನಷ್ಟವಾಗಿರುವುದನ್ನು ಉಲ್ಲೇಖಿ ಸಿರುವ ಮುತ್ತಣ್ಣ ಅವರು, ಪ್ರವಾಹ ಹಾಗೂ ಭೂ ಕುಸಿತದಿಂದ ನೂರಾರು ಕುಟುಂಬಗಳು ಸೂರು ಕಳೆದುಕೊಂಡಿದ್ದರೂ ಕೇಂದ್ರ ಸರ್ಕಾರ ಕೇವಲ 100 ಕೋಟಿ ರೂ.ಗಳನ್ನು ಪರಿಹಾರವಾಗಿ ಘೋಷಿಸಿದೆ. ಆದರೆ ಇದೇ ಪ್ರದೇಶದಲ್ಲಿ ವಿನಾಶ ಕಾರಿ ಹೆದ್ದಾರಿ ಯೋಜನೆಗೆ 1,500 ಕೋಟಿ ರೂ. ವೆಚ್ಚ ಮಾಡುವ ಔಚಿತ್ಯವನ್ನು ಅವರು ಪ್ರಶ್ನಿಸಿದ್ದಾರೆ.

ಹಾಲಿ ಇರುವ ಎರಡು ಪಥದ ರಸ್ತೆ ಯನ್ನು ಮೇಲ್ದರ್ಜೆಗೇರಿಸುವ ಬದಲು ಪ್ರಸ್ತುತ ಇರುವ ರಸ್ತೆಗೆ ಎರಡೂ ಬದಿಯಲ್ಲಿ ಒಂದು ಮೀಟರ್ ಸ್ಥಳಾವಕಾಶ ಕಲ್ಪಿಸುವ ಮೂಲಕ ಸುಲಭವಾಗಿ ಸಂಚಾರ ಸುಗಮವಾಗುತ್ತದೆ ಎಂದಿರುವ ಅವರು, ಭಾರತೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಪ್ರತೀ ದಿನ ಸಂಚಾರ ದಟ್ಟಣೆ 10 ಸಾವಿರ ವಾಹನಗಳನ್ನು ಮೀರಿದ್ದಲ್ಲಿ ಮಾತ್ರ ಹೆದ್ದಾರಿ ನಿರ್ಮಿಸಲು ಅವಕಾಶವಿದೆ ಎಂಬ ನಿಯಮವಿದೆ. ಆದರೆ, ಹಾಲಿ ಕುಶಾಲ ನಗರ-ಮಡಿಕೇರಿ ರಸ್ತೆಯಲ್ಲಿ ವಾಹನ ದಟ್ಟಣೆ 10 ಸಾವಿರ ಮೀರುವುದಿಲ್ಲ. ಆದರೂ ಈ ಯೋಜನೆ ಕೈಗೆತ್ತಿಕೊಳ್ಳು ವುದು ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಎಂದು ಭಾವಿಸಬೇಕಾಗುತ್ತದೆ. ಆದ್ದರಿಂದ ಈ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ವಿನಾಶಕಾರಿಯಾದ ಈ ಯೋಜನೆಯನ್ನು ಕೈಬಿಟ್ಟು ಆಗಬಹು ದಾದ ಅಪಾರ ನಷ್ಟವನ್ನು ತಪ್ಪಿಸಬೇಕೆಂದು ಮುತ್ತಣ್ಣ ಅವರು ತಮ್ಮ ಪತ್ರದಲ್ಲಿ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.

ಹಿನ್ನೆಲೆ: ಬೆಂಗಳೂರು-ಮೈಸೂರು-ಕೊಡಗು-ಮಂಗಳೂರು ಹಾಗೂ ಕೇರ ಳದ ಕೆಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕೊಡಗು ಹಾಗೂ ಕೆಲವು ಪ್ರದೇಶ ಗಳಲ್ಲಿ ಹಾಲಿ ಇರುವ ನಾಲ್ಕು ಪಥದ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ವಿಸ್ತರಿಸಲಾಗುವುದು. ಹಾಲಿ ಇರುವ ಎರಡು ಪಥದ ರಸ್ತೆಯನ್ನು (ಮೈಸೂರು-ಕುಶಾಲನಗರ-ಮಡಿಕೇರಿ-ಮಂಗಳೂರು) ನಾಲ್ಕು ಪಥದ ರಸ್ತೆಯನ್ನಾಗಿ ವಿಸ್ತರಿಸಿ ಮೇಲ್ದರ್ಜೆಗೇರಿಸಲಾಗುವುದು. ಈ ಉದ್ದೇ ಶಿತ ಯೋಜನೆ ಬಗ್ಗೆ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಸಾರ್ವಜನಿಕರ ವಿಚಾರಣೆ ವೇಳೆ ಪರಿಸರವಾದಿಗಳು, ಜನಪ್ರತಿನಿಧಿಗಳು ಹಾಗೂ ಕೊಡಗಿನ ನಿವಾಸಿಗಳು, ಈ ಉದ್ದೇಶಿತ ಯೋಜ ನೆಯಿಂದ ಸಾವಿರಾರು ಮರಗಳು ಹನನವಾಗುವುದಲ್ಲದೆ, ಪರಿಸರ ನಾಶ ವಾಗುತ್ತದೆ ಎಂಬ ಕಾರಣದಿಂದಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಸಂಪೂರ್ಣ ವಿವರ ಪಡೆದ ಸಿ.ಪಿ. ಮುತ್ತಣ್ಣ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

Translate »