ವಿದ್ಯಾರ್ಥಿಗೆ ಕೋಲು ಎಸೆದ ಪ್ರಕರಣ: ಶಿಕ್ಷಕ ಅಮಾನತು
ಚಾಮರಾಜನಗರ

ವಿದ್ಯಾರ್ಥಿಗೆ ಕೋಲು ಎಸೆದ ಪ್ರಕರಣ: ಶಿಕ್ಷಕ ಅಮಾನತು

June 4, 2018

ಚಾಮರಾಜನಗರ: ನಗರದ ರಾಮಸಮುದ್ರ ಕ್ರಿಸ್ತ ರಾಜ ಬಾಲರಪಟ್ಟಣ ಶಾಲೆಯ ಮುಖ್ಯಶಿಕ್ಷಕ ಜೋಸೆಫ್ ಅವರು ವಿದ್ಯಾರ್ಥಿಗಳತ್ತ ಕೋಲು ಎಸೆದು ವಿದ್ಯಾರ್ಥಿಯೊಬ್ಬನ್ನು ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಮುಖ್ಯಶಿಕ್ಷಕ ಜೋಸೆಫ್ ಅವರನ್ನು ಅಮಾನುತುಗೊಳಿಸಿದೆ.

ವಿದ್ಯಾರ್ಥಿ ಗಿರಿಮಲ್ಲೇಶ್ ಅವರ ಎಡಗಣ ್ಣಗೆ ಹಾನಿಯಾಗಿದ್ದು, ಈ ಸಂಬಂಧ ವಿದ್ಯಾರ್ಥಿಯ ಪೋಷಕರು ನಗರದ ಪಟ್ಟಣ ಪೊಲೀಸ್ ಠಾಣೆ ಹಾಗೂ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಇದರನ್ವಯ ಶಾಲಾ ಆಡಳಿತ ಮಂಡಳಿ ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಪ್ರಸ್ತುತ ವಿದ್ಯಾರ್ಥಿ ಗಿರಿಮಲ್ಲೇಶ್ ಕೊಯಮತ್ತೂರಿನ ಅರವಿಂದ ಕಣ ್ಣನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವರದಿ ನೀಡುವಂತೆ ಸೂಚನೆ: ವಿದ್ಯಾರ್ಥಿಗೆ ಕೋಲು ಎಸೆದು ಕಣ್ಣಿಗೆ ಹಾನಿ ಯಾಗಿರುವ ಘಟನೆ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಈ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಅವರಿಗೆ ಆದೇಶಿಸಿದ್ದಾರೆ.

Translate »