ಸಂಸ್ಕಾರದಿಂದ ಜೀವನದಲ್ಲಿ ಯಶಸ್ಸು ಸಾಧ್ಯ
ಕೊಡಗು

ಸಂಸ್ಕಾರದಿಂದ ಜೀವನದಲ್ಲಿ ಯಶಸ್ಸು ಸಾಧ್ಯ

June 4, 2018

ವಿರಾಜಪೇಟೆ: ಸಂಸ್ಕಾರ, ಅಧ್ಯಾ ತ್ಮಿಕತೆಯಲ್ಲಿ ತೊಡಗಿಸಿಕೊಂಡವರು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಂಸ್ಥೆ ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ನಿರ್ಮಿಸಿರುವ ‘ಜ್ಞಾನಗಂಗಾ ಭವನ’ ನೂತನ ಕಟ್ಟಡ ವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಜಗತ್ತಿನ ಯಾವುದೇ ಭಾಗದಲ್ಲಿ ಇಲ್ಲದ ಶರಣರು ಭಾರತ ದೇಶದಲ್ಲಿದ್ದಾರೆ. ಪ್ರಜಾ ಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲ ಯದ ಎಲ್ಲಾ ಕ್ಷೇತ್ರಗಳಲ್ಲಿಯು ಸೇವೆ ಸಲ್ಲಿ ಸುವವರು ಹೆಚ್ಚು ತಾಯಂದಿರು. ಈ ಕೇಂದ್ರ ವನ್ನು ವಿರಾಜಪೇಟೆಯಲ್ಲಿ ಸ್ಥಾಪನೆ ಮಾಡಿ ರುವುದು ಎಲ್ಲರ ಮನಸ್ಸಿನಲ್ಲಿಯೂ ಶಾಂತಿ ನೆಮ್ಮದಿಯನ್ನು ನೀಡಿ ಈ ಗಂಗಾ ಭವನದ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆ ಯಲಿ ಎಂದು ನುಡಿದರು.

ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಈ ಹಿಂದೆ ಮೈಸೂರು ಸ್ವಚ್ಚನಗರ ಎಂದು ನಮಗೆ ಪ್ರಶಸ್ತಿ ದೊರಕಿತ್ತು. ನಂತರ ಎರಡುವರ್ಷ ಸಾಧ್ಯ ವಾಗಿಲ್ಲ. ಈ ವರ್ಷ ಮತ್ತೆ ಪ್ರಶಸ್ತಿ ಬಂದಿದೆ. ನಾವುಗಳು ಏನೇ ಮಾಡಿದರೂ ಜನರ ಮನಸನ್ನು ಗೆಲ್ಲುವಂತಾಗಬೇಕು. ಇನ್ನೊಬ್ಬ ರಿಗೆ ಗೌರವ ಕೊಡುವುದರಿಂದ ನಾವು ಕೂಡಾ ಮೇಲೇರಲು ಸಾಧ್ಯ. ಜನರ ಸೇವೆಯೇ ನಮ್ಮ ಗುರಿಯಾಗಿರಬೇಕು ಎಂದ ಅವರು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಸಾಕಷ್ಟು ಜ್ಞಾನೋ ದಯವಾಗಿದೆ ಎಂದರು.

ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಮೈಸೂರು ಉಪ ವಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ. ಲಕ್ಷ್ಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಕೊಡಗು ಕಾವೇರಿ ನದಿ ಹರಿಯುವಂತ ಪುಣ್ಯ ಕ್ಷೇತ್ರವಾಗಿದ್ದು, ಈ ಕಟ್ಟಡಕ್ಕೆ ‘ಜ್ಞಾನಗಂಗಾ ಭವನ’ ಎಂಬ ಹೆಸರಿಡ ಲಾಗಿದೆ. ಈ ಭವನ ಎಲ್ಲರ ಸೇವೆ ಮಾಡು ವಂತೆ ಕೇಂದ್ರವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕಾಂತಿ ಸತೀಶ್ ಮಾತನಾಡಿ, ಎಲ್ಲಾ ಕ್ಷೇತ್ರ ಗಳಲ್ಲಿಯೂ ಮಹಿಳೆಯೇ ಹೆಚ್ಚು ಸೇವೆ ಸಲ್ಲಿಸುತ್ತಿದ್ದು, ಪ್ರಜಾಪಿತ ಬ್ರಹ್ಮಕುಮಾ ರಿಯ 160 ಶಾಖೆಗಳು ಮಾನವನಿಗೆ ಜ್ಞಾನವನ್ನು ನೀಡುತ್ತಿದೆ. ಇತ್ತೀಚಿನ ದಿನ ಗಳಲ್ಲಿ ಜನರು ಶಾಂತಿಯನ್ನು ಹುಡುಕಿ ಕೊಂಡು ಹೊರಟಿದ್ದಾರೆ. ಯಾವುದೇ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು ತ್ತಿದೆ. ವಿರಾಜಪೇಟೆ ಭಾಗದಲ್ಲಿ ಇಂತಹ ಸೇವಾ ಕೇಂದ್ರಗಳ ಅಗತ್ಯವಿದೆ ಎಂದರು.

ಮೈಸೂರಿನ ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಬಿ.ಕೆ.ಕೃಷ್ಣಮೂರ್ತಿ ಮಾತನಾಡಿ, 25 ವರ್ಷಗಳ ಹಿಂದೆ ವೀರಾಜಪೇಟೆ ಯಲ್ಲಿ ನಗರ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಕೊಡಗಿನ ಜನರು ಶಾಂತಿ ಪ್ರಿಯರು ನನ್ನ ಅವಧಿಯಲ್ಲಿ ಜನರ ಸಹಕಾರ ಇತ್ತು. ಪ್ರಜಾಪಿತ ಬ್ರಹ್ಮಾಕುಮಾರಿ ಕೇಂದ್ರ ದಲ್ಲಿ ಜ್ಞಾನವನ್ನು ಪಡೆದುಕೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮೈಸೂರು ಜ್ಞಾನಸರೋವರದ ಬಿ.ಕೆ. ಶಾರದಾಜಿ, ಡಾ.ರಾಮಚಂದ್ರ, ಚನ್ನರಾಯ ಪಟ್ಟಣದ ಮೋಹನಕುಮಾರಿ ಮುಂತಾದವರು ಮಾತನಾಡಿದರು.

ಕೇಂದ್ರದ ಬಿ.ಕೆ.ರಂಗನಾಥ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ಸತೀಶ್ ಚಂದ್ರ ಸ್ವಾಗತಿಸಿದರು, ರಂಗನಾಥ್ ನಿರೂಪಿಸಿದರೆ. ಬಿ.ಕೆ.ರಾಮಚಂದ್ರರಾವ್ ವಂದಿಸಿದರು. ಸಭೆಯಲ್ಲಿ ಇಂದ್ರಾಣ ಅವರಿಂದ ಗಾಯನ ಏರ್ಪಡಿಸಲಾಗಿತ್ತು. ಸಿಂಚನ ನೃತ್ಯ ಮಾಡಿ ದರು. ಇದಕ್ಕೂ ಮೊದಲು ಜ್ಞಾನ ಗಂಗಾ ಭವನದಿಂದ ವಾದ್ಯಗೋಷ್ಠಿಯೋಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರ ವಣ ಗೆ ನಡೆಸಿದರು.

Translate »