ಮೈಸೂರು,ಜ.11-ಶಿಕ್ಷಕರ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಿಗೆ ಸುತ್ತೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸ ಬೇಕು. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್‍ಓ ಕಾರ್ಯದಿಂದ ಮುಕ್ತಿಗೊಳಿಸಬೇಕು. ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಜೂನ್ ಮಾಹೆಯ ಅಂತ್ಯ ಹಾಗೂ ಜುಲೈ ಮಾಹೆ ಯಲ್ಲಿ ನೀಡಬೇಕು. ಪ್ರಾಥಮಿಕ ಶಾಲೆಯ ಸಬಲೀಕರಣ ಉದ್ದೇಶಕ್ಕಾಗಿ ನೀಡುವ ಅನು ದಾನವನ್ನು 2 ಕಂತುಗಳಲ್ಲಿ ಬಿಡುಗಡೆ ಮಾಡ ಬೇಕು. ಮಕ್ಕಳಿಗೆ ನೀಡುವ ಶೂ ಮತ್ತು ಸಾಕ್ಸ್ ಹಾಗೂ 2ನೇ ಸಮವಸ್ತ್ರದ ಅನುದಾನ ವನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು. ಬಿಸಿಯೂಟದ ಸಿಬ್ಬಂದಿ ಶಿಕ್ಷಕರ ವಿರುದ್ಧ ವಿನಾಕಾರಣ ನೀಡುವ ದೂರುಗಳನ್ನು ತಾಲೂಕು, ಜಿಲ್ಲಾ ಹಂತದಲ್ಲಿ ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸಬೇಕು. ವರ್ಗಾ ವಣೆ ಪ್ರಕ್ರಿಯೆಯಲ್ಲಿ ಪತಿ-ಪತ್ನಿ ಪ್ರಕರಣ ಗಳಲ್ಲಿ ಸೌಲಭ್ಯ ಪಡೆದವರು ಮತ್ತೊಂದು ವರ್ಗಾವಣೆಗೆ ಅರ್ಜಿ ಸಲ್ಲಿಸಲು ಮೂರು ವರ್ಷ ಅಂತರ ನಿಗದಿಗೊಳಿಸಬೇಕು. ಪೊಲೀಸ್ ಇಲಾಖೆ ಮಾದರಿ ಶಿಕ್ಷಕರಿಗೂ ಕ್ಯಾಂಟಿನ್, ಆರೋಗ್ಯ ಸೇವೆ ಕಲ್ಪಿಸಬೇಕು. ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಬೇಕು. ಸರ್ಕಾರಿ ಶಾಲೆಗಳನ್ನು ಸಬಲೀಕರಣ ಗೊಳಿಸ ಬೇಕು. ಎನ್‍ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. 75 ಮಕ್ಕಳಿಗಿಂತ ಹೆಚ್ಚಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋ ಜಿಸಬೇಕು. ಸಕಾಲದಲ್ಲಿ ವೈದ್ಯಕೀಯ ವೆಚ್ಚದ ಮರುಪಾವತಿ ಅನುದಾನ ನೀಡಬೇಕು. ಬಡ್ತಿ ನೀಡುವಾಗ 250ಕ್ಕಿಂತ ಹೆಚ್ಚಿರುವ ಮಕ್ಕಳ ಶಾಲೆಗೆ ಹೋಗಬೇಕೆಂಬ ನಿಬಂಧನೆ ತೆರವು ಗೊಳಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆ ಗಳ ಈಡೇರಿಸುವಂತೆ ಮನವಿ ಮಾಡಲಾ ಯಿತು. ಈವೇಳೆ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೆಚ್.ಎಸ್.ಮಹೇಶ್, ಉಪಾಧ್ಯಕ್ಷ ಮಾಲಂಗಿ ಸುರೇಶ್, ಪ್ರಧಾನ ಕಾರ್ಯ ದರ್ಶಿ ಕೆ.ಬಿ.ಸೋಮೇಗೌಡ ಮತ್ತಿತರರಿದ್ದರು.