ಮೈತ್ರಿ ಸರ್ಕಾರ ಐದು ವರ್ಷ ಸುಭದ್ರ
ಮೈಸೂರು

ಮೈತ್ರಿ ಸರ್ಕಾರ ಐದು ವರ್ಷ ಸುಭದ್ರ

April 13, 2019

ಮೈಸೂರು: ರಾಜ್ಯದಲ್ಲಿರುವ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ವಾಗ್ದಾನ ನೀಡಿದ್ದಾರೆ.

ಮೈಸೂರಿನಲ್ಲಿ ಗುರುವಾರ ನಡೆದ ಮೈತ್ರಿ ಪಕ್ಷಗಳ ಜಂಟಿ ಸಮಾ ವೇಶದಲ್ಲಿ ಮಾತನಾಡಿದ ಅವರು, ಕಳೆದ ಲೋಕ ಸಭಾ ಚುನಾವಣಾ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಪ್ರಕಟವಾಗುವ ಮುನ್ನವೇ ರಾಹುಲ್ ಗಾಂಧಿ ನನಗೆ ಕರೆ ಮಾಡಿ, ಯಾವುದೇ ಕಾರಣಕ್ಕೂ ಕರ್ನಾ ಟಕದಲ್ಲಿ ಕೋಮುವಾದಿ ಬಿಜೆಪಿ ಅಧಿ ಕಾರಕ್ಕೆ ಬರಬಾರದು. ಜೆಡಿಎಸ್‍ನವರೇ ಮುಖ್ಯಮಂತ್ರಿಯಾಗಲಿ, ಅವರ ಜೊತೆ ಕೈಜೋಡಿಸಿ ಎಂದು ಸೂಚಿಸಿದರು.

ಈ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದರು. ಅದ ರಂತೆ ಮೈತ್ರಿ ಸರ್ಕಾರ ರಚನೆಯಾದ ಕ್ಷಣ ದಿಂದಲೇ ಸರ್ಕಾರ ಬೀಳಿಸುವ ಪ್ರಯತ್ನ ಆರಂಭವಾಯಿತು. ಇನ್ನೇನು ಸರ್ಕಾರ ಪತನವಾಯಿತೆಂದು ಪ್ರಚಾರ ಮಾಡಿ ದರು. ಈಗ ಲೋಕಸಭಾ ಚುನಾವಣೆ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎನ್ನುತ್ತಿದ್ದಾರೆ. ಇದು ಕೇವಲ ಹಗಲು ಕನಸು. ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಸಾಲ ಮನ್ನಾ, ಅನ್ನಭಾಗ್ಯದ ಮೂಲಕ 4 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ, ಬಡವರಿಗೆ ಕಡಿಮೆ ಹಣ ದಲ್ಲಿ ಉಪಹಾರ, ಊಟ ಒದಗಿಸುವ ಇಂದಿರಾ ಕ್ಯಾಂಟಿನ್ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರದಲ್ಲೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಮುಂದುವರಿಸಿದ್ದಾರೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿರುವ ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗುತ್ತಿದೆ ಎಂದು ಸಿಎಂ ಕುಮಾರ ಸ್ವಾಮಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮೈಸೂರಲ್ಲಿ ವಿಜಯಶಂಕರ್, ಚಾಮರಾಜನಗರದಲ್ಲಿ ಧ್ರುವನಾರಾಯಣ್, ಮಂಡ್ಯದಲ್ಲಿ ನಿಖಿಲ್ ಹಾಗೂ ಹಾಸನದಲ್ಲಿ ಪ್ರಜ್ವಲ್‍ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಶಾಸಕರನ್ನು ಕಾಯಬೇಕಿದೆ: ಸರ್ಕಾರ ಕೆಡವಲು ನಮ್ಮ ಸುಮಾರು 20 ಶಾಸಕರಿಗೆ ತಲಾ 25-30 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದರು. ಯಾರಿಗಾದರೂ ಆಸೆ ಬರೋದಿಲ್ವ. ನಮ್ಮ ಶಾಸಕ ರನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟವಾಗಿದೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನೂ ಗೆದ್ದರೆ ಯಾರೂ ಸಮ್ಮಿಶ್ರ ಸರ್ಕಾರದ ತಂಟೆಗೆ ಬರೋದಿಲ್ಲ. ಇಲ್ಲದಿ ದ್ದರೆ ಹಣದ ಚೀಲ ಹಿಡಿದುಕೊಂಡು ಬಂದು ಶಾಸಕರಿಗೆ ಆಫರ್ ನೀಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

Translate »