ಫೆ.16, 17ರಂದು ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ
ಮೈಸೂರು

ಫೆ.16, 17ರಂದು ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ

February 12, 2019

ಮೈಸೂರು: ಮೈಸೂರು ಯರಗನಹಳ್ಳಿಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 3ನೇ ವಾರ್ಷಿಕೋತ್ಸವ ಸಮಾರಂಭ ಫೆ.16 ಮತ್ತು 17ರಂದು ಏರ್ಪಡಿಸಲಾಗಿದೆ. ಫೆ.16ರಂದು ಬೆಳಿಗ್ಗೆ 5 ಗಂಟೆಗೆ ಪೂಜೆ, ಮಹಾಸಂಕಲ್ಪ, ರಕ್ಷಾ ಬಂಧನ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ದೇವತಾ ಪೂಜೆ, ಮಹಾ ಗಣಪತಿ ಹೋಮ, ರಾಕ್ಷೋಘ್ನ ಹೋಮ, ದುರ್ಗಾ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯ ಲಿದ್ದು, ನಂತರ ಪೂರ್ಣಾಹುತಿ, ಪ್ರಸಾದ ವಿನಿಯೋಗ ವಿದೆ. ಫೆ.17ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಪ್ರಧಾನ ಕಲಶ ಪೂಜೆ, ನವಗ್ರಹ ಹೋಮ, ಮಹಾ ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ಶಕ್ತಿ ಹೋಮಗಳು ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ. ನಂತರ ಮಹಾ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಾಹಿತಿಗೆ 9845049415, 9844440796, 8050332433 ಸಂಪರ್ಕಿಸಬಹುದು.

Translate »