ಕೊಡಗಿಗೆ ಇಂದು ವಿವಿಧ ಸೇನಾ ಪಡೆಗಳ ಆಗಮನ
ಕೊಡಗು

ಕೊಡಗಿಗೆ ಇಂದು ವಿವಿಧ ಸೇನಾ ಪಡೆಗಳ ಆಗಮನ

August 18, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರ ಣೆಗೆ ವಿವಿಧ ಸೇನಾಪಡೆಗಳು ನಾಳೆ (ಆ.18) ದಾವಿಸಲಿದೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಹೆಚ್ಚುವರಿ ಸೇನಾ ತುಕಡಿ ನಿಯೋಜಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಅವರಿಗೆ ದೂರ ವಾಣಿಯಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ರುವ ನಿರ್ಮಲಾ ಸೀತಾರಾಮನ್ ಅವರು, ಹೆಚ್ಚುವರಿ ಸೇನಾ ತುಕಡಿ ನಿಯೋಜನೆಗೆ ಅನುಮತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ದೋಗ್ರಾ ರೆಜಿಮೆಂಟ್ ತಂಡ, ಇಂಜಿನಿಯ ರಿಂಗ್ ಟಾಸ್ಕ್‍ಫೋರ್ಸ್ (73 ಬೋಟ್‍ಗಳು ಮತ್ತು ರಕ್ಷಣಾ ಉಪಕರಣ ಗಳೊಂದಿಗೆ), ನೌಕಾಪಡೆಯ 12 ಯೋಧರ ತಂಡ, ಎನ್‍ಡಿಆರ್‍ಎಫ್‍ನ ಓರ್ವ ಅಧಿಕಾರಿ ಹಾಗೂ 30 ಸೈನಿಕರಿರುವ ತಂಡ, ಬೋಟ್ ಗಳು ಹಾಗೂ ಉಪಕರಣಗಳೊಂದಿಗೆ 30 ಸೈನಿ ಕರಿರುವ ಎಸ್‍ಡಿಆರ್‍ಎಫ್ ತಂಡ, 45 ಮಂದಿಯಿರುವ ಸಿವಿಲ್ ಡಿಫೆನ್ಸ್ ತಂಡ, 200 ಮಂದಿಯನ್ನೊಳ ಗೊಂಡ ಫೈರ್ ಫೋರ್ಸ್, ಹೆಲಿಕಾಪ್ಟರ್ ಗಳೊಂದಿಗೆ ಏರ್‍ಫೋರ್ಸ್ ತಂಡ ಶನಿವಾರ ಬೆಳಿಗ್ಗೆ ಕೊಡಗಿಗೆ ಆಗಮಿಸಿ, ಕಾರ್ಯಾಚರಣೆ ತೊಡಗಲಿವೆ.

Translate »