ಕೊಳ್ಳೇಗಾಲ 9ನೇ ವಾರ್ಡ್‍ನಲ್ಲಿ ಬಿಜೆಪಿಗೆ ಜಯ
ಚಾಮರಾಜನಗರ

ಕೊಳ್ಳೇಗಾಲ 9ನೇ ವಾರ್ಡ್‍ನಲ್ಲಿ ಬಿಜೆಪಿಗೆ ಜಯ

November 1, 2018

ಕೊಳ್ಳೇಗಾಲ: ಕೊಳ್ಳೇ ಗಾಲ ನಗರಸಭೆಯ 9ನೇ ವಾರ್ಡ್‍ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ನಾಗೇಂದ್ರ 71 ಮತಗಳ ಅಂತ ರದಲ್ಲಿ ಗೆಲುವು ಸಾಧಿಸಿದ್ದಾರೆ.

ಇಂದು ನಡೆದ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹದೇವ ಅವರಿಗೆ 506 ಹಾಗೂ ಬಿಜೆಪಿ ಅಭ್ಯರ್ಥಿಗೆ 577, ಸ್ವತಂತ್ರ ಅಭ್ಯರ್ಥಿ ಗಿರೀಶ್‍ಗೆ 5 ಮತ್ತು 5 ನೋಟಾ ಮತಗಳು ಚಲಾವಣೆ ಗೊಂಡವು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ 71 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಈ ವಾರ್ಡ್ ಚುನಾವಣೆ ಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಈ ವಾರ್ಡ್‍ನಲ್ಲಿ ಭರ್ಜರಿ ಪ್ರಚಾರ ನಡೆಸುವ ಜತೆಗೆ ಗೆಲು ವಿನ ವಿಶ್ವಾಸ ಹೊಂದಿತ್ತು. ಆದರೆ ಬಿಜೆಪಿ ಇಲ್ಲಿ 71 ಮತಗಳ ಅಂತರದ ಭರ್ಜರಿ ಗೆಲವು ದಾಖಲಿಸಿರುವುದು ಕಾಂಗ್ರೆಸ್‍ಗೆ ತೀವ್ರ ಹಿನ್ನಡೆ ಜೊತೆಗೆ ಮುಜುಗರ ಅನುಭವಿಸಿದಂತಾಗಿದೆ.

Translate »