ಮುರಿದು ಬಿದ್ದ ಮರ, ರೆಂಬೆ-ಕೊಂಬೆಗಳ ತೆರವು
ಮೈಸೂರು

ಮುರಿದು ಬಿದ್ದ ಮರ, ರೆಂಬೆ-ಕೊಂಬೆಗಳ ತೆರವು

May 25, 2019

ಮೈಸೂರು: ಗುರುವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಬಿರುಮಳೆಗೆ ನಗರದಲ್ಲಿ ವ್ಯಾಪಕವಾಗಿ ಧರೆಗುರುಳಿದ ಮರ, ರೆಂಬೆ -ಕೊಂಬೆಗಳನ್ನು ನಗರಪಾಲಿಕೆಯ ತೋಟ ಗಾರಿಕಾ ವಿಭಾಗದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯ ಆರಂಭಿಸಿದರು. ಆದರೆ ಇನ್ನು ಹಲವು ಕಡೆ ಮರದ ರೆಂಬೆ ಗಳ ತುಂಡರಿಸಿ ಗುಡ್ಡೆ ಹಾಕಲಾಗಿದ್ದು, ಅದನ್ನು ಯಾವಾಗ ಸಾಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಆಲಿಕಲ್ಲು ಸಹಿತ ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಮೈಸೂರಿನ ಹಲವು ಕಡೆಗಳಲ್ಲಿ ದೊಡ್ಡ ಮರಗಳು, ಅಲ್ಲದೆ ವಿವಿಧ ರಸ್ತೆ, ವೃತ್ತಗಳಲ್ಲಿ ಸುಮಾರು 50ಕ್ಕೂ ಹೆಚ್ಚು ರೆಂಬೆ-ಕೊಂಬೆಗಳು ಮುರಿದು ಬಿದ್ದಿದ್ದವು. ಅವೆಲ್ಲವನ್ನು ನಗರ ಪಾಲಿಕೆಯ ತೊಟಗಾರಿಕಾ ಸಿಬ್ಬಂದಿ ತೆರವುಗೊಳಿಸಿದರು.

ಮೈಸೂರಿನ ಧನ್ವಂತರಿ ರಸ್ತೆ , ನಾರಾಯಣಶಾಸ್ತ್ರಿ ರಸ್ತ್ತೆಯ ಅಗರಂ ರಂಗಯ್ಯ ವೃತ್ತ, ಸ್ವಾತಂತ್ರ್ಯ ಉದ್ಯಾನವನದ ಬಳಿ, ಚಾಮರಾಜ ಜೋಡಿ ರಸ್ತೆ, ಶಾಂತಲಾ ಟಾಕೀಸ್ ವೃತ್ತದ ಬಳಿ, ವಿಶ್ವಮಾನದ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಸರಸ್ವತಿ ಪುರಂ, ಅಗ್ನಿಶಾಮಕ ದಳ, ರಾಮಕೃಷ್ಣ ನಗರ, ದಟ್ಟಗಳ್ಳಿ ಮುಖ್ಯ ರಸ್ತೆ, ಬಂದಂತಮ್ಮ ಕಾಳಮ್ಮ ದೇವಸ್ಥಾನದ ಬಳಿ, ಕೃಷ್ಣ ಕಾಂಟಿ ನೆಂಟಲ್ ಬಳಿ ಸೇರಿದಂತೆ ಅನೇಕ ರಸ್ತೆ ಗಳಲ್ಲಿ ಮರಗಳು, ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದವು. ಇದರಿಂದಾಗಿ ಹಲವೆಡೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಗರ ಪಾಲಿಕೆ ಹಾಕಿದ್ದ ಸ್ವಚ್ಛ ಭಾರತ್ ಅಭಿ ಯಾನದ ಎರಡು ಫಲಕಗಳು ಗಾಳಿಯ ರಭಸಕ್ಕೆ ಬಾಗಿವೆ. ನಗರಪಾಲಿಕೆ ತೋಟ ಗಾರಿಕಾ ಸಿಬ್ಬಂದಿ ಮುರಿದು ಬಿದ್ದ ಮರ ಗಳನ್ನು ಗರಗಸದ ಸಹಾಯದಿಂದ ತೆರವುಗೊಳಿಸಿ, ಪಾಲಿಕೆಯ ವಾಹನದಲ್ಲಿ ಸಾಗಿಸಿದರು.

ಹಲವೆಡೆ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಂದು ಅವುಗಳನ್ನು ತೆರವುಗೊಳಿಸಿದ ಬಳಿಕ ವಿದ್ಯುತ್ ತಂತಿಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ನೀಡಲಾಯಿತು.

ಮಳೆ ಗಾಳಿ ರಭಸಕ್ಕೆ ಮೈಸೂರಿನ 50ಕ್ಕೂ ಹೆಚ್ಚು ಕಡೆಗಳಲ್ಲಿ ಬಿದ್ದ ಮರ, ರೆಂಬೆ-ಕೊಂಬೆಗಳನ್ನು ನಮ್ಮ ಸಿಬ್ಬಂದಿ ಮೂಲಕ ತೆರವುಗೊಳಿಸಲಾಗಿದೆ. ಮಳೆಗಾಲ ಆರಂ ಭಕ್ಕೆ ಮೊದಲೇ ಶಕ್ತಿಮಾನ್ ತಂಡದಿಂದ ಸಯ್ಯಾಜಿರಾವ್ ರಸ್ತೆಯಿಂದ ಬಂಬೂ ಬಜಾರ್‍ವರೆಗೆ, ಆಯುರ್ವೇದ ಆಸ್ಪತ್ರೆ ವೃತ್ತದಿಂದ ರೈಲು ನಿಲ್ದಾಣದವರೆಗೆ, ವಾಲ್ಮೀಕಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಕಳೆದ ತಿಂಗಳಿಂದಲೇ ಒಣಗಿನ ಹಾಗೂ ಮುಗಿದು ಬೀಳಬಹುದಾದ ರೆಂಬೆ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದೇವೆ. ನಗರಪಾಲಿಕೆ ತೋಟಗಾರಿಕಾ ವಿಭಾಗದ ಎಇಇ ಸದಾಶಿವ ಚಟ್ನಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಿದ್ಯುತ್ ತಂತಿಗಳು ಜಖಂ: ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಪಕ್ಕದ ರಸ್ತೆ ಯಲ್ಲಿ ನಿನ್ನೆಯ ರಭಸದ ಮಳೆ,ಗಾಳಿಗೆ ಮರದ ಟೊಂಗೆಯೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ನೇತಾಡುತ್ತಿದ್ದ ತಂತಿ ಗಳನ್ನು ಚೆಸ್ಕಾಂ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ದುರಸ್ತಿಪಡಿಸಿದರು.

ಹಲವೆಡೆ ಮರ, ಕೊಂಬೆಗಳು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ನಿನ್ನೆ ಯಿಂದ ಹಲವೆಡೆ ವಿದ್ಯುತ್ ಅಡಚಣೆ ಯಾಗಿತ್ತು. ಅವೆಲ್ಲವನ್ನೂ ದುರಸ್ತಿ ಗೊಳಿಸಿದ ಬಳಿಕ ವಿದ್ಯುತ್ ಸಂಪರ್ಕ ನೀಡಲಾಯಿತು.

Translate »