ಇಂದು-ನಾಳೆ ಕೆಆರ್‍ಎಸ್‍ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ತಂಡ ಭೇಟಿ
ಮೈಸೂರು

ಇಂದು-ನಾಳೆ ಕೆಆರ್‍ಎಸ್‍ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ತಂಡ ಭೇಟಿ

June 4, 2019

ಮೈಸೂರು: ಕಾವೇರಿ ನೀರು ನಿರ್ವಹಣಾ ಸಮಿತಿ ಅಧಿ ಕಾರಿಗಳ ತಂಡವು ನಾಳೆ (ಜೂ.4) ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂ ಕಿನ ಕೃಷ್ಣರಾಜಸಾಗರ (ಕೆಆರ್‍ಎಸ್)ಕ್ಕೆ ಭೇಟಿ ನೀಡಲಿದೆ.

ಕೇಂದ್ರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CNNL)ದ ನಿರ್ದೇ ಶನದಂತೆ ಕೆಆರ್‍ಎಸ್‍ಗೆ ಭೇಟಿ ನೀಡಲಿರುವ ಸಮಿತಿ ಸದಸ್ಯರು, ಜೂನ್ 4 ಮತ್ತು 5 ರಂದು ಪರಿಶೀಲನೆ ನಡೆಸುವರು. ಟೆಲಿಮೆಟ್ರಿ ಆಧಾರದ ಮೇಲೆ ಆನ್‍ಲೈನ್‍ನಲ್ಲಿ ಜಲಾಶಯದ ನೀರಿನ ಮಟ್ಟ, ಒಳ ಹಾಗೂ ಹೊರ ಅರಿವು, ಗೇಟ್‍ಗಳ ಕಾರ್ಯವೈಕರಿಯನ್ನು ತಿಳಿಯುವ ಪದ್ಧತಿಯನ್ನು ಜಾರಿಗೊಳಿಸಲಿರುವ ಉದ್ದೇಶದಿಂದ ಸಮಿತಿ ಅಧಿಕಾರಿಗಳ ಭೇಟಿ ಮಹತ್ವ ಪಡೆದುಕೊಂಡಿದೆ.

ಕಾವೇರಿ ನೀರಾವತಿ ನಿಗಮ ನಿಯಮತಿ(ಅಓಓಐ)ದ ಸೂಪರಿಂಟೆಂಡಿಂಗ್ ಇಂಜಿನಿಯರ್ ಹೆಚ್.ಸಿ.ರಮೇಂದ್ರ ಅವರು ಸಹ ಸಮಿತಿ ಸದಸ್ಯರಲ್ಲೊಬ್ಬರಾಗಿದ್ದು, ತಂಡಕ್ಕೆ ಕೆಆರ್‍ಎಸ್ ಜಲಾಶಯದ ಬಗ್ಗೆ ಮಾಹಿತಿ ಒದಗಿಸುವರು. ನಂತರ ತಂಡದ ಅಧಿಕಾರಿಗಳು ತಮಿಳುನಾಡಿನ ಮೆಟ್ಟೂರು ಡ್ಯಾಂ, ಭವಾನಿ ಹಾಗೂ ಅಮರಾವತಿ ಜಲಾಶಯಗಳಿಗೂ ಭೇಟಿ ನೀಡುವರು, ಕರ್ನಾಟಕದ ಹೇಮಾವತಿ, ಹಾರಂಗಿ, ಕೇರಳದ ಬನಸುರ ಸಾಗರ ಅಣೆಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರಾಧಿಕಾರಕ್ಕೆ ಸಮಗ್ರ ವರಧಿ ಸಲ್ಲಿಸಲಿದೆ.

Translate »