ಮೈಸೂರಿನಿಂದ ಕಣ್ಣೂರು ಏರ್‍ಪೋರ್ಟ್‍ಗೆ ಬಸ್ ಸೇವೆ ಒದಗಿಸಿ
ಮೈಸೂರು

ಮೈಸೂರಿನಿಂದ ಕಣ್ಣೂರು ಏರ್‍ಪೋರ್ಟ್‍ಗೆ ಬಸ್ ಸೇವೆ ಒದಗಿಸಿ

June 4, 2019

ಮೈಸೂರು: ಪ್ರಯಾ ಣಿಕರ ಅನುಕೂಲಕ್ಕಾಗಿ ಮೈಸೂರು ಮತ್ತು ಕೊಡಗು ಪ್ರಾಂತ್ಯಗಳಿಂದ ಕೇರಳದ ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾರಿಗೆ ಬಸ್ ಸೌಲಭ್ಯ ಒದಗಿ ಸುವಂತೆ ಕಣ್ಣೂರು ವಿಮಾನ ನಿಲ್ದಾಣದ ಅಧಿಕಾರಿಗಳು ಕೋರಿಕೊಂಡಿದ್ದಾರೆ.

ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣದ ಅಧಿಕಾರಿಗಳು, ಮೈಸೂರು ಮತ್ತು ಕೊಡಗು ಭಾಗಗಳಿಂದ ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಕಲ್ಪಿಸಿದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳ ಮೂಲಕ ಬೇರೆ ಬೇರೆ ನಗರಗಳಿಗೆ ಹೋಗಿ ಬರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿ ಸಿದ್ದಾರೆ. ಅವರ ಮನವಿಗೆ ಸಕಾರಾತ್ಮಕ ವಾಗಿ ಸ್ಪಂಧಿಸಿರುವ ಕೆಎಸ್‍ಆರ್‍ಟಿಸಿಯು, ಬಸ್‍ಗಳನ್ನು ಓಡಿಸಲು ಕೇರಳ ಸರ್ಕಾರ ಅನುಮತಿ ನೀಡಿದಲ್ಲಿ ಸೇವೆ ಒದಗಿಸಲು ನಮ್ಮ ಅಭ್ಯಂತರವೇನೂ ಇಲ್ಲ ಎಂದು ತಿಳಿಸಿದೆ ಎಂದು ಮೈಸೂರಿನ ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ. ಮೈಸೂರಿ ನಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿ ರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 185ಕಿ.ಮೀ ಅಂತರಕ್ಕೆ ಮೈಸೂರಿನಿಂದ ಫ್ಲೈಬಸ್ ಸೇವೆ ಒದಗಿಸಲಾಗಿದೆ. ಅದರಂತೆಯೇ 200 ಕಿಮೀ ದೂರ ವಿರುವ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೂ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಕಲ್ಪಿಸಬಹುದಾಗಿದೆ. ಇದರಿಂದ ಮೈಸೂರು-ಮಡಿಕೇರಿ, ವಿರಾಜಪೇಟೆ ಮತ್ತು ಕೊಡಗಿನ ಸುತ್ತಮುತ್ತಲ ಪ್ರದೇಶಗಳ ಪ್ರಯಾಣಿಕರು ಸುಲಭವಾಗಿ ಕಣ್ಣೂರು ಏರ್ ಪೋರ್ಟ್ ತಲುಪಲು ಅನುಕೂಲವಾಗುವುದ ಲ್ಲದೆ, ದೇಶ ಹಾಗೂ ವಿದೇಶಗಳಿಂದ ಬರುವವರಿಗೂ ಮೈಸೂರು ಮತ್ತು ಕೊಡಗು ಜಿಲ್ಲೆಗಳಿಗೆ ಹೋಗಲು ಅನುಕೂಲವಾಗ ಲಿದೆ ಎಂದು ಅಭಿಪ್ರಾಯಪಡಲಾಗಿದೆ. ಮೈಸೂರು-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ 4 ಗಂಟೆ ಪ್ರಯಾಣವಿದೆ. 20 ಟ್ರಿಪ್‍ಗಳಲ್ಲಿ ಫ್ಲೈಬಸ್‍ಗಳು ಓಡಾಡು ತ್ತಿವೆ. ಕೇರಳಾದ ಕಣ್ಣೂರು ಏರ್‍ಪೋರ್ಟ್‍ಗೆ ಐದೂವರೆ ಗಂಟೆ ಪ್ರಯಾಣದ ಅವಧಿ ಇದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಬೇಡಿಕೆಗನುಗುಣವಾಗಿ ಫ್ಲೈಬಸ್‍ಗಳನ್ನು ಕಣ್ಣೂರು ಏರ್‍ಪೋರ್ಟ್‍ಗೆ ಆಪರೇಟ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Translate »