ಕಾಂಗ್ರೆಸ್ ಸರ್ಕಾರ ಸಿಲಿಕಾನ್ ಸಿಟಿಯನ್ನು ಕ್ರೈಮ್ ಸಿಟಿಯನ್ನಾಗಿ ಮಾರ್ಪಡಿಸಿದೆ
ಮೈಸೂರು

ಕಾಂಗ್ರೆಸ್ ಸರ್ಕಾರ ಸಿಲಿಕಾನ್ ಸಿಟಿಯನ್ನು ಕ್ರೈಮ್ ಸಿಟಿಯನ್ನಾಗಿ ಮಾರ್ಪಡಿಸಿದೆ

May 4, 2018

ಬೆಂಗಳೂರು:  ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿದ್ದ ಬೆಂಗಳೂರನ್ನು ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಅಪರಾಧಗಳ ನಗರವನ್ನಾಗಿ ಮಾರ್ಪಡಿಸಿದೆ ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ್ದಾರೆ.

ಕೆಂಗೇರಿ ಬಳಿಯಿಂದು ಆಯೋಜಿಸಿದ್ದ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರಿಗೆ ಐದು ಉಡುಗೊರೆಗಳನ್ನು ನೀಡಿದೆ ಎಂದು ಹೇಳುವ ಮೂಲಕ ರಾಜ್ಯಸರ್ಕಾರದ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು.

ಸಿಲಿಕಾನ್ ವ್ಯಾಲಿ ಪಾಪದ ಕಣ ವೆಯಾಗಿದೆ. ಗಾರ್ಡನ್ ಸಿಟಿ ಗಾರ್ಬೇಟ್ ಸಿಟಿಯಾಗಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿ ಮರೆಯಾಗಿ ಗೂಂಡಾಗಿರಿ ಸಂಸ್ಕೃತಿ ತಾಂಡವವಾಡುತ್ತಿದೆ ಎಂದು ಆರೋಪಿಸಿದರು. ದೇಶದಾದ್ಯಂತ ಸ್ಮಾರ್ಟ್‍ಸಿಟಿ ಯೋಜನೆಯಡಿ ರಾಜ್ಯಗಳ ಅಭಿವೃದ್ಧಿಗಾಗಿ 836 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ 12 ಕೋಟಿಯನ್ನು ಮಾತ್ರ ಖರ್ಚು ಮಾಡಿದ್ದು, ಉಳಿದ ಹಣವನ್ನು ಖರ್ಚು ಮಾಡೇ ಇಲ್ಲ , ಮಂತ್ರಿಗಳು ಹಾಗೂ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಲಾಖೆ, ಇಲಾಖೆಗಳ ಮಧ್ಯೆಯೇ ಸ್ಪರ್ಧೆ ಏರ್ಪಟ್ಟಿದೆ ಎಂದು ಟೀಕಿಸಿದರು.

Translate »