ರಾಷ್ಟ್ರಕ್ಕೆ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ
ಚಾಮರಾಜನಗರ

ರಾಷ್ಟ್ರಕ್ಕೆ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ

August 13, 2018

ಚಾಮರಾಜನಗರ:  ಬ್ರಾಹ್ಮಣ ಸಮಾಜ ಇಡೀ ರಾಷ್ಟ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್.ಎ.ರಾಮದಾಸ್ ಅಭಿಪ್ರಾಯಪಟ್ಟರು.

ಜಿಲ್ಲಾ ಬ್ರಾಹ್ಮಣ ಸಂಘ ನಗರದ ನಂದಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣ ಪ್ರಥಮ ಸಮ್ಮೇಳನದಲ್ಲಿ ಅವರು ವಿಪ್ರ ಸ್ಮರಣ ಸಂಚಿಕೆಯನ್ನು ಬಿಡು ಗಡೆಗೊಳಿಸಿ ಮಾತನಾಡಿದರು. ಬ್ರಾಹ್ಮಣ ಸಮುದಾಯ ಸ್ವಂತ ಶಕ್ತಿ, ಬುದ್ಧಿವಂತಿಕೆ ಹಾಗೂ ದೂರದೃಷ್ಟಿಯಿಂದ ದೇಶಕ್ಕೋಸ್ಕರ ನಾನಾ ಕೊಡುಗೆಗಳನ್ನು ನೀಡಿದೆ. ಬ್ರಾಹ್ಮಣ ಸಮಾಜದವರು ಪ್ರಧಾನಮಂತ್ರಿಗಳಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ದೊಡ್ಡ ದೊಡ್ಡ ಮಹತ್ವದ ನಿರ್ಧಾರ ಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನು ಪ್ರತಿ ಯೊಬ್ಬರು ಮನ ನಾಟುವಂತೆ ಹೇಳಿದರು.

ಇಂದು ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಓರ್ವ ನಾಯಕರಾಗಿದ್ದಾರೆ. ಅವರ ಸಂಪುಟದಲ್ಲಿ 11 ಮಂದಿ ವಿಪ್ರ ಬಂಧುಗಳಿದ್ದಾರೆ ಎಂಬುದು ಹೆಗ್ಗಳಿಕೆಯ ಮಾತು. ಆದರೆ ರಾಜಕೀಯದಲ್ಲಿ ವಿಪ್ರರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ. ಐಎಎಸ್ ಅಧಿಕಾರಿಗಳಲ್ಲಿ ಸಮಾಜದ ಬಂಧುಗಳ ಸಂಖ್ಯೆ ದಿನೇ ದಿನೇ ಕುಸಿ ಯುತ್ತಿದೆ. ಇದನ್ನು ವಿಪ್ರ ಪೋಷಕರು ಗಂಭೀರವಾಗಿ ಪರಿಗಣಿಸಬೇಕು ಎಂದು ಎಸ್.ಎ.ರಾಮದಾಸ್ ಸಲಹೆ ನೀಡಿದರು.

ಬ್ರಾಹ್ಮಣರಿಗೆ ಆತ್ಮ ಗೌರವ ಹೆಚ್ಚು, ಯಾರ ಮನೆ ಬಾಗಿಲಿಗೆ ಹೋಗುವ ಪ್ರವೃತ್ತಿ ಸಮಾ ಜದ ಬಂಧುಗಳಿಗೆ ಇಲ್ಲ ಎಂದ ಅವರು, ವಿಪ್ರ ಸಮಾಜದ ಯುವ ಶಕ್ತಿ ಆಡಳಿತ ಮುಂಚೂಣಿಗೆ ಬರಬೇಕಾಗಿದೆ. ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಬ್ರಾಹ್ಮ ಣರು ಇದ್ದೇ ಇರುತ್ತಾರೆ. ಸಮಾಜದ ಮೇಲೆ ಇತರರು ಇಟ್ಟಿರುವ ನಂಬಿಕೆ, ವಿಶ್ವಾಸ ವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಅಖಿಲ ಭಾರತ ಬ್ರಾಹ್ಮಣ ಮಹಾ ಮಂಡಲಿ ಮಾಜಿ ಅಧ್ಯಕ್ಷ ಹಾಗೂ ಚಿಂತಕ ಡಾ.ಕೆ.ಪಿ.ಪುತ್ತೂರಾಯರು ಪ್ರಧಾನ ಭಾಷಣ ಮಾಡಿ, ಬ್ರಾಹ್ಮಣರು ಭಾರತ ದೇಶದಲ್ಲಿ ಸಂಖ್ಯಾ ಬಲದಲ್ಲಿ ಅಲ್ಪಸಂಖ್ಯಾತರು. ಆದರೆ ಬುದ್ಧಿವಂತಿಕೆ ಮತ್ತು ಪ್ರತಿಭೆಯಲ್ಲಿ ಬಹು ಸಂಖ್ಯಾತರು ಎಂದರು.

ನಾನು ಬ್ರಾಹ್ಮಣ ಎಂದು ಹೇಳಿಕೊಳ್ಳಲು ನಾಚಿಕೆ ಪಡಬೇಡಿ. ಸ್ವಾಭಿಮಾನದಿಂದ ನಾನೊಬ್ಬ ಬ್ರಾಹ್ಮಣ ಎಂದು ಹೇಳಿಕೊಳ್ಳಿ. ಬ್ರಾಹ್ಮಣರ ಉದ್ಧಾರವನ್ನು ಬ್ರಾಹ್ಮಣರು ಮಾಡಿ ಕೊಳ್ಳಬೇಕು. ಮತ್ಯಾರೂ ಮಾಡುವುದಿಲ್ಲ. ಸ್ವಾವಲಂಬನೆ ಹಾಗೂ ಸ್ವಾಭಿಮಾನದಿಂದ ಇರುವ ಬ್ರಾಹ್ಮಣಿಕೆಗೆ ಜಾತಿ ಬಲ, ಜನ ಬಲ, ಅಧಿಕಾರ ಬಲ ಇಲ್ಲ. ಆದರೆ ಬುದ್ಧಿವಂತಿಕೆ ಬಲ ಇದೆ ಎಂಬುದನ್ನು ಮರೆಯಬಾರದು ಎಂದು ಕರೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಅಧ್ಯಕ್ಷ ವೆಂಕಟನಾರಾ ಯಣ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಎಲ್ಲಾ ಭಾಗಗಳಲ್ಲಿ ಇರುವ ಏಕೈಕ ಸಮಾಜ ಎಂದರೆ ಅದು ಬ್ರಾಹ್ಮಣ ಸಮಾಜ ಮಾತ್ರ ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಮಾಜ ವಿಪ್ರ ಸಮಾಜ, ಸ್ವಾವಲಂಬನೆ ಹಾಗೂ ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆಯನ್ನು ಸಮಾಜ ನೀಡುತ್ತಿದೆ. ರಾಷ್ಟ್ರದಲ್ಲಿ ವಿಪ್ರ ಸಮಾಜ ಶೇ.3ರಷ್ಟು ಇದ್ದರೂ ಸಹ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುವಲ್ಲಿ ಸಮುದಾಯ ಮುಂದಿದೆ ಎಂದರು. ಇದೇ ವೇಳೆ ಅಖಿಲ ಕರ್ನಾ ಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಮ್ಮೇ ಳನ ಕಾರ್ಯದರ್ಶಿ ನಂ. ಶ್ರೀಕಂಠ ಕುಮಾರ್ ಅವರ ಚಾಮರಾಜನಗರ ಜಿಲ್ಲಾ ಪ್ರೇಕ್ಷಣೀಯ ಸ್ಥಳಗಳು ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀರಂಗಪಟ್ಟಣದ ಡಾ.ಭಾನುಪ್ರಕಾಶ್ ಶರ್ಮ ದಿವ್ಯ ಸಾನಿಧ್ಯ ವಹಿಸಿದ್ದರು. ಅ.ಕ. ಬ್ರಾ.ಮ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್, ಉಪಾಧ್ಯಕ್ಷ ಕೆ.ಇ.ರಾಧ ಕೃಷ್ಣ, ಮೈಸೂರಿನ ನಂ.ಶ್ರೀಕಂಠಕುಮಾರ್, ಉದ್ಯಮಿ ಹೆಚ್.ವಿ.ರಾಜೀವ್, ಅ.ಕ.ಬ್ರಾ. ಫೆಲ್‍ಫೇರ್ ಸೊಸೈಟಿ ಅಧ್ಯಕ್ಷ ಬಿ.ವಿ.ಮಂಜು ನಾಥ್, ಮೈಸೂರು ಜಿಲ್ಲಾ ಅಧ್ಯಕ್ಷ ಡಿ.ಟಿ. ಪ್ರಕಾಶ್, ಮಹಿಳಾ ಸಂಘದ ವತ್ಸಲಾ, ರಾಧಾ, ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಸುರೇಶ್ ಎನ್.ಋಗ್ವೇದಿ, ಖಜಾಂಚಿ ಎಸ್.ಬಾಲಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಎಸ್.ಲಕ್ಷ್ಮೀ ನರಸಿಂಹ, ಉಪಾ ಧ್ಯಕ್ಷರಾದ ಗೋಪಾಲಕೃಷ್ಣ ಭಟ್ಟರು, ಹೆಚ್.ವಿ.ನಾಗರಾಜ್, ವೈ.ಕೆ.ರಂಗನಾಥ ರಾವ್, ಪಶುಪತಿ, ಮುಖಂಡರಾದ ಎಸ್.ಬಾಲ ಸುಬ್ರಹ್ಮಣ್ಯಂ, ಸತೀಶ್, ಚಂದ್ರಚೂಡ್, ಪೊಲೀಸ್ ನಾಗೇಂದ್ರ, ರಾಜಣ್ಣ, ಪ್ರತಾಪ್, ವೆಂಕಟೇಶ್ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಗರದ ಶ್ರೀ ಚಾಮರಾಜೇ ಶ್ವರಸ್ವಾಮಿ ದೇವಸ್ಥಾನದ ಮುಂಭಾಗ ದಿಂದ ಕಾರ್ಯಕ್ರಮ ಆಯೋಜಿಸ ಲಾಗಿದ್ದ ನಂದಿ ಭವನದವರೆಗೆ ಆಚಾರ್ಯ ತ್ರಯರ ಶೋಭಾಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ಮೈಸೂರಿನಿಂದಲೂ ಸಾವಿರಾರು ಮಂದಿ ವಿಪ್ರ ಬಾಂಧವರು ಆಗಮಿಸಿದ್ದರು.

 

ಸಮ್ಮೇಳನ ತೆಗೆದುಕೊಂಡ ನಿರ್ಣಯಗಳು:
= ಜಿಲ್ಲಾ ಕೇಂದ್ರಗಳಲ್ಲಿ ಆಚಾರ್ಯತ್ರಯರ ಭವನ ನಿರ್ಮಿಸಬೇಕು
= ಬ್ರಾಹ್ಮಣ ಅಭಿವೃದ್ಧಿ ಮಂಡಲಿ ರಚನೆ ಮಾಡಿದ ಸರ್ಕಾರಕ್ಕೆ ಅಭಿನಂದನೆಗಳು.
= ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ ನಿರ್ಧಾರಕ್ಕೆ ಸ್ವಾಗತ-ಅಭಿನಂದನೆಗಳು.

ಹಿರಿಯರು ಕಿರಿಯರಿಗೆ ದಾರಿದೀಪವಾಗಬೇಕು
ಬ್ರಾಹ್ಮಣ ಸಮಾಜದ ಹಿರಿಯರು ಮುಂದಿನ ಪೀಳಿಗೆಗೆ ದಾರಿದೀಪ ಆಗಬೇಕು ಎಂದು ಬ್ರಾಹ್ಮಣ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾದ ಕೆ.ಎನ್.ಸೂರ್ಯನಾರಾ ಯಣ್ ಕರೆ ನೀಡಿದರು.

ಇಂದಿಲ್ಲಿ ನಡೆದ ಜಿಲ್ಲಾ ಬ್ರಾಹ್ಮಣ ಪ್ರಥಮ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.
ವಿಪ್ರ ಸಮಾಜದ ಹಿರಿಯರು ವೇದ, ಆಚಾರ-ವಿಚಾರ ಗಳನ್ನು ಯುವ ಜನತೆಗೆ ತಿಳಿಸಬೇಕು. ಈ ಮೂಲಕ ಸಮಾಜದ ಸಂಸ್ಕøತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು. ಕಷ್ಟದಲ್ಲಿ ಇರುವ ವಿಪ್ರ ಸಮುದಾಯದ ಬಂಧುಗಳಿಗೆ ಸಹಾಯ ಮಾಡುವ ಪದ್ಧತಿಯನ್ನು ಸಮಾಜದ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಇರುವ ಬ್ರಾಹ್ಮಣ ಸಮಾಜದವರು ಒಗ್ಗೂಡಿದರೆ ನಮ್ಮ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

Translate »