ಜಿಲ್ಲೆಯ ಜನತೆಯಲ್ಲಿ ಭೀತಿ ಮೂಡಿಸಿದ ಕೊರೊನಾ
ಮೈಸೂರು

ಜಿಲ್ಲೆಯ ಜನತೆಯಲ್ಲಿ ಭೀತಿ ಮೂಡಿಸಿದ ಕೊರೊನಾ

March 16, 2020

ಚಾಮರಾಜನಗರ, ಮಾ.15- ಜಗತ್ತಿ ನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಚಾಮರಾಜನಗರ ಜಿಲ್ಲೆ ಜನತೆ ಯಲ್ಲೂ ಭೀತಿ ಮೂಡಿಸಿದೆ. ಕೊರೊನಾ ವೈರಸ್ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಇಡೀ ಜಿಲ್ಲೆ ಸ್ತಬ್ಧಗೊಂಡಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಒಂದು ವಾರ ಸಾರ್ವಜನಿಕ ಸಭೆ, ಸಮಾ ರಂಭ, ಸಂತೆ, ಜಾತ್ರೆ, ಉತ್ಸವ, ಚಿತ್ರಮಂದಿ ರಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿ ಸಿರುವುದನ್ನು ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಶನಿವಾರ ನಡೆಯಬೇಕಿದ್ದ ಸಂತೆ, ಜಾತ್ರೆ, ಹಬ್ಬ ಹಾಗೂ ಭಾನುವಾರ ನಡೆಯಬೇಕಿದ್ದ ಸಾಮೂಹಿಕ ವಿವಾಹವನ್ನು ರದ್ದುಗೊಳಿಸ ಲಾಗಿದೆ. ಜಿಲ್ಲೆಯಲ್ಲಿ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ ನಿರೀಕ್ಷಿಸದಷ್ಟು ಜನರು ಆಗಮಿಸದಿರುವುದು ಕಂಡು ಬಂತು.

ಇನ್ನೂ ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೂ ಪ್ರವಾಸಿಗರ ಪ್ರವೇಶ ವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಹೋಟೆಲ್, ರೆಸಾರ್ಟ್‍ಗಳನ್ನು ಮುಚ್ಚ ಲಾಗಿದೆ. ಜಿಲ್ಲೆಯ ಎಲ್ಲಾ ಗಡಿಭಾಗಗ ಳಲ್ಲಿರುವ ಚೆಕ್‍ಪೋಸ್ಟ್‍ಗೆ ಬರುವ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ಮೂಲಕ ಜಿಲ್ಲೆಗೆ ಕೊರೊನಾ ಸೋಂಕು ಕಾಲಿಡದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಕೊರೊನಾ ಭೀತಿಗೆ ಒಳಗಾಗಿರುವ ಜನತೆ ಮನೆಯಿಂದ ಹೊರಬರಲು ಮೀನಾ ಮೇಷ ಎಣಿಸುವಂತಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ಭಕ್ತರಿಂದ ದಿನವೂ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 2 ದಿನಗಳಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲೂ ಸಹ ಇದೇ ಪರಿಸ್ಥಿತಿ ಮುಂದುವರೆದಿದೆ.

ಇನ್ನೂ ಜಿಲ್ಲೆಯಲ್ಲಿ ಹೋಟೆಲ್, ಕ್ಯಾಂಟೀ ನ್‍ಗಳಿಗೆ ಬರುವವರ ಸಂಖ್ಯೆ ಕಡಿಮೆ ಯಾಗಿದೆ. ಬೀದಿ ಬದಿ ವ್ಯಾಪಾರಿಗಳ ವಹಿ ವಾಟಿನಲ್ಲೂ ಬಹಳ ಏರಿಳಿತಗಳು ಆಗು ತ್ತಿವೆ. ಕೊರೊನಾ ಭೀತಿ ಎಲ್ಲಾ ವರ್ಗದ ಮೇಲೂ ಬೀರುತ್ತಿದ್ದು, ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ.

ಸರ್ಕಾರದ ಸೂಚನೆ ಮೇರೆಗೆ ಜಿಲ್ಲೆ ಯಲ್ಲಿ 1ರಿಂದ 6ನೇ ತರಗತಿವರಗೆ ರಜೆ ಘೋಷಿಸಲಾಗಿದೆ. ನಡೆಯಬೇಕಿದ್ದ ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳನ್ನು ರದ್ದುಗೊ ಳಿಸಲಾಗಿದೆ. ಪರೀಕ್ಷೆ ರದ್ದುಗೊಂಡಿದ್ದು ಹಾಗೂ ಬೇಗ ರಜೆ ಸಿಕ್ಕಿದ್ದರಿಂದ ಮಕ್ಕಳು ಖುಷಿಯಾಗಿದ್ದಾರೆ. ಆದರೆ ಪೋಷಕರು ಪ್ರವಾಸಿ ತಾಣಗಳಿಗೆ ಕರೆದೊಯ್ಯದಿರುವು ದರಿಂದ ಮಕ್ಕಳು ಬೇಸರಗೊಂಡಿದ್ದಾರೆ.

ಒಟ್ಟಾರೆ ಕೊರೊನಾ ಭೀತಿ ಗಡಿ ಭಾಗ ವಾದ ಚಾ.ನಗರ ಜಿಲ್ಲೆಯ ಜನತೆಯನ್ನು ಕಾಡಿದ್ದು, ಇದು ಎಷ್ಟು ದಿನ ಮುಂದುವರೆ ಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 ಸಿದ್ದಲಿಂಗಸ್ವಾಮಿ

Translate »