ಉದ್ಯಾನವನದ ನಿರ್ಮಾಣ ಯಥಾಸ್ಥಿತಿಗೆ ಕೋರ್ಟ್ ಆದೇಶ
ಮೈಸೂರು

ಉದ್ಯಾನವನದ ನಿರ್ಮಾಣ ಯಥಾಸ್ಥಿತಿಗೆ ಕೋರ್ಟ್ ಆದೇಶ

December 30, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರ `ಐ’ ಬ್ಲಾಕ್ 7ನೇ ಕ್ರಾಸ್‍ನಲ್ಲಿರುವ ಉದ್ಯಾನವನದಲ್ಲಿ ನಿರ್ಮಿ ಸುತ್ತಿರುವ ಕಟ್ಟಡ ಕಾಮಗಾರಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮೈಸೂರಿನ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಆದೇಶ ನೀಡಿದೆ.

ಈ ಉದ್ಯಾನವನದಲ್ಲಿ ಕೆಲ ದಿನ ಗಳಿಂದ ಕಟ್ಟಡ ಕಾಮಗಾರಿಯೊಂದು ನಡೆಯುತ್ತಿತ್ತು. ಕರ್ನಾಟಕ ಮುನಿಸಿಪಲ್ ಕಾಯ್ದೆಯಡಿ ಯಾವುದೇ ಉದ್ಯಾ ನವನದಲ್ಲಿ ಕಟ್ಟಡ ನಿರ್ಮಿಸಬಾರದು. ಹೀಗಿರುವಾಗ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಅಲ್ಲಿನ ನಿವಾಸಿ ಸ್ಟೀಫನ್ ಸುಜೀತ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅನಧಿಕೃತ ಕಟ್ಟಡವು 46ನೇ ವಾರ್ಡ್ ಕಾರ್ಪೊರೇಟರ್ ಎಂ.ಲಕ್ಷ್ಮಿ ಅವರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು.

ಸ್ಟೀಫನ್ ಸುಜೀತ್ ಅವರು ಕಾರ್ಪೊ ರೇಟರ್ ಎಂ.ಲಕ್ಷ್ಮಿ, ನಗರ ಪಾಲಿಕೆ ಆಯುಕ್ತರು ಮತ್ತು ಪಾಲಿಕೆ ವಲಯ ಕಚೇರಿ-3ರ ಸಹಾಯಕ ಆಯುಕ್ತರನ್ನು ಪ್ರತಿವಾದಿಗಳಾಗಿ ನಮೂ ದಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿ ಸಿದ ನ್ಯಾಯಾಲಯವು ಕಾಮ ಗಾರಿಯ ಯಥಾಸ್ಥಿತಿ ಕಾಯ್ದುಕೊಳ್ಳು ವಂತೆ ಆದೇಶಿಸಿದೆ.

Translate »