ಕಣ್ಮನ ಸೆಳೆದ ಕಡಲತೀರದ ಕಲರಿಪಯಟ್ ಸಾಹಸ ನೃತ್ಯ
ಕೊಡಗು

ಕಣ್ಮನ ಸೆಳೆದ ಕಡಲತೀರದ ಕಲರಿಪಯಟ್ ಸಾಹಸ ನೃತ್ಯ

March 31, 2019

ಮಡಿಕೇರಿ: ಕೇರಳದ ಮುಖ್ಯ ಕಲಾಪ್ರಕಾರಗಳಲ್ಲೊಂದಾಗಿ, ದೇಶದ ಹೆಸರಾಂತ ಸಮರಕಲೆಯಾಗಿ ಗುರುತಿಸ ಲ್ಪಟ್ಟಿರುವ ಕಡಲತೀರದ ಕಲರಿಪಯಟ್ ನೃತ್ಯಗಳ ಮೈನವಿರೇಳಿಸುವ ಪ್ರದರ್ಶನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾ ಲಯ ಹಾಗೂ ಸ್ಪಿಕ್ ಮೆಕೆ ಆಶ್ರಯದಲ್ಲಿ ಆಯೋಜಿಸಿದ್ಧ ಕ್ರಾಫ್ಟ್ ಮೇಳದ ಸಾಂಸ್ಕøತಿಕ ಸಂಜೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು.

ಗುರುಕುಲ ಶಿಕ್ಷಣ ಪದ್ಧತಿಯಾಗಿ ಕೇರಳ ದಲ್ಲಿ ಪ್ರಚಲಿತದಲ್ಲಿರುವ ಕಲರಿಪಯಟ್, ಶಸ್ತ್ರಾಸ್ತಗಳೊಂದಿಗೆ ಆತ್ಮರಕ್ಷಣೆಗೆ ಬಳಸಲ್ಪ ಡುವ ಕಲಾ ಪ್ರಕಾರವಾಗಿದ್ದು, ಈ ಕಲೆ ಯಲ್ಲಿನ ವೈವಿಧ್ಯತೆಗಳ ಬಗ್ಗೆ ಗುರುವಾ ಯೂರು ಬಳಿಯ ಚಾಲ್ಕಾಡ್ ಗ್ರಾಮದ ವಲ್ಲ ಭಟ್ ಕೇಂದ್ರದ ಕಲಾವಿದರು ಪ್ರದರ್ಶನ ನೀಡಿದರು. ಖಡ್ಗ ಹಿಡಿದು ಎದುರಾಳಿ ಗಳು ಪರಸ್ಪರ ಕಾದಾಡುವ ರೋಮಾಂ ಚಕತೆಯು ವೇದಿಕೆಯಲ್ಲಿ ಮೂಡಿಬಂ ದಾಗ ಪ್ರೇಕ್ಷಕರೂ ಉಸಿರು ಬಿಗಿಹಿಡಿದಿ ದ್ದರು. ಬರೀಮೈಯ ಮೇಲೆ ಕತ್ತಿಯಿಂದ ಮಸಾಜ್ ಮಾಡಿಕೊಳ್ಳುವ ಪ್ರಕಾರ, ಸಿಂಹ, ಹುಲಿ, ಸರ್ಪ, ಮಾರ್ಜಾಲ, ಕೋಳಿ, ಮೀನು ಇತ್ಯಾದಿ ಪ್ರಾಣಿಗಳ ಭಂಗಿಯ ನೃತ್ಯಪ್ರಕಾರಗಳು, ಕಠಾರಿಯೊಂದಿಗೆ ಎದು ರಾಳಿಯನ್ನು ಮಣಿಸುವ ವಿಧಾನ, ಕತ್ತಿ ಝಳಪಿಸುತ್ತಾ ವೈರಿಯನ್ನು ಬಗ್ಗುಬಡಿ ಯುವ ವೀರನ ಚಾಕಚಕ್ಯತೆ ಕೂಡ ಕಲರಿ ಪಯಟ್ ವಿಶೇಷತೆ. ಚೂರಿಯಲ್ಲಿ ಶತ್ರು ದಾಳಿ ನಡೆಸಿದಾಗ ಶಸ್ತ್ರರಹಿತನಾಗಿದ್ದರೂ ಕೂಡ ಹೇಗೆ ದಾಳಿಯಿಂದ ತಪ್ಪಿಸಿ ಕೊಂಡು ಎದುರಾಳಿಯನ್ನು ಮಣ್ಣುಮುಕ್ಕಿಸ ಬಹುದು ಎಂಬ ತಂತ್ರಗಾರಿಕೆಯ ಬಗ್ಗೆಯೂ ಕಲರಿಪಯಟ್ ಪ್ರದರ್ಶನ ನಿರೂಪಿಸಿತು. ಕತ್ತಿ, ಕಠಾರಿ, ಚೂರಿ ಮಾತ್ರವಲ್ಲದೇ ಬೆತ್ತದೊಂದಿಗೆ ಹೊಡೆದಾಟದ ಪ್ರಕಾರವೂ ವೇದಿಕೆಯಲ್ಲಿ ಕಲಾಪ್ರೇಮಿಗಳ ಮನ ಸೆಳೆಯಿತು.

ವೈಜ್ಞಾನಿಕ ಯುಗದಲ್ಲಿಯೂ ಕಲರಿಪ ಯಟ್ ಕಲೆ ಹೆಚ್ಚು ಆಕರ್ಷಕವಾಗುತ್ತಿದ್ದು, ಈ ಕಲೆ ಯಾರನ್ನೂ ಹೊಡೆದುರುಳಿಸಲು ಅಥವಾ ಸಾಯಿಸಲು ಬಳಸುವಂತಿಲ್ಲ. ಬದ ಲಿಗೆ, ಅಪಾಯ ಒದಗಿದಾಗ ಸ್ವರಕ್ಷಣೆಗೆ ಕಲರಿಪಯಟ್ ಬಳಕೆಯಾಗುತ್ತದೆ. ಅದರ ಲ್ಲಿಯೂ ಮಹಿಳೆಯರು ಈ ಕಲಾ ಸಾಧನೆ ಮೂಲಕ ಆತ್ಮರಕ್ಷಣೆ ಮಾಡಿಕೊಳ್ಳಬಲ್ಲರು ಎಂದು ವಲ್ಲಭಟ್ ಕೇಂದ್ರದ ಮುಖ್ಯಸ್ಥ ಕೃಷ್ಣದಾಸ್ ಹೇಳಿದರು.

ಕಲರಿಪಯಟ್ ಕೇವಲ ಸಮರಕಲೆ ಮಾತ್ರ ವಾಗಿರದೇ ಅದೊಂದು ಜೀವನಶೈಲಿ ಕೂಡ ಹೌದು ಎಂದು ಬಣ್ಣಿಸಿದ ಕೃಷ್ಣ ದಾಸ್, ಪ್ರತಿನಿತ್ಯ ಈ ಕಲೆಯ ಅಭ್ಯಾ ಸದಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದೂ ಅಭಿಪ್ರಾಯಪಟ್ಟರು. ಕೇರಳದ ಕಡಲತಡಿಯ ಈ ವಿಶಿಷ್ಟ ನೃತ್ಯಪ್ರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕ್ರೀಡಾ ಕಲೆಯಾಗಿ ಜನಪ್ರಿಯವಾಗಿದ್ದು ಭಾರತದ ರೋಮಾಂಚಕ ಕಲೆಗೆ ಸಂದ ಗೌರವ ಎಂದೂ ಅವರು ಹೆಮ್ಮೆಯಿಂದ ನುಡಿ ದರು. ಕೊಡಗು ಜಿಲ್ಲೆಯ ತಂಪು ಹವಾಮಾನ ಕಲರಿಪಯಟ್‍ನಂಥ ಕಲೆಯ ಅಭ್ಯಾಸಕ್ಕೆ ಅತ್ಯಂತಸೂಕ್ತ ಎಂದೂ ಕಲರಿಪಯಟ್ ಕಲಾ ಕುಟುಂಬ ದಲ್ಲಿ ಎಂಟನೇ ತಲೆಮಾರಿನವರಾದ ಕೃಷ್ಣದಾಸ್ ಮಂಜಿನ ನಗರಿಯ ಹವಾಮಾನದ ಬಗ್ಗೆ ಶ್ಲಾಘಿಸಿದರು.
ವಲ್ಲಭಟ್ ಕೇಂದ್ರದ 12 ಕಲಾವಿದರು ಕಲರಿಪಯಟ್ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿ ಲಾಂಛನ ಬಿಡುಗಡೆ
ಗೋಣಿಕೊಪ್ಪಲು, ಮಾ.31- ಅಖಿಲ ಅಮ್ಮಕೊಡವ ಸಮಾಜ ಹಾಗೂ ಬಾನಂಡ ಕುಟುಂಬ ಸಹಯೋಗದಲ್ಲಿ ಮೇ ತಿಂಗಳಿ ನಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಬಾನಂಡ ಕ್ರಿಕೆಟ್ ಕಪ್ ಲಾಂಛನವನ್ನು ಅಖಿಲ ಅಮ್ಮಕೊಡವ ಸಮಾಜದ ಸಭಾಂ ಗಣದಲ್ಲಿ ಅನಾವರಣಗೊಳಿಸಲಾಯಿತು.
ಅಖಿಲ ಅಮ್ಮಕೊಡವ ಸಮಾಜ ಹಾಗೂ ಬಾನಂಡ ಕುಟುಂ ಬದ ಪ್ರಮುಖರುಗಳು ಲಾಂಛನ ಬಿಡುಗಡೆಗೊಳಿಸಿ, ಬಾನಂಡ ಕ್ರಿಕೆಟ್ ಕಪ್ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಿದರು.
ಬಾನಂಡ ಕ್ರಿಕೆಟ್ ಕಪ್ ಅಧ್ಯಕ್ಷ ಬಾನಂಡ ಅಪ್ಪಣಮಯ್ಯ, ಉಪಾಧ್ಯಕ್ಷ ಬಾನಂಡ ನಂಜುಮಯ್ಯ, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಗೌರವ ಅಧ್ಯಕ್ಷ ಬಾನಂಡ ಪ್ರತ್ಯು ಹಾಗೂ ಪ್ರಮುಖರು ಬಿಡುಗಡೆಗೊಳಿಸಿದರು.
ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್ ಮಾತನಾಡಿ, ಅಖಿಲ ಅಮ್ಮ ಕೊಡವ ಸಮಾಜದ ಸಹಯೋಗದಲ್ಲಿ ನಡೆಯಲಿರುವ ಬಾನಂಡ ಕ್ರಿಕೆಟ್ ಕಪ್‍ಗೆ ಸಮಾಜದಿಂದ ರೂ.1 ಲಕ್ಷ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಅಖಿಲ ಅಮ್ಮಕೊಡವ ಸಮಾಜ ಗೌರವ ಅಧ್ಯಕ್ಷ ಬಾನಂಡ ಪ್ರತ್ಯು ಮಾತನಾಡಿ, ಬಾನಂಡ ಕುಟುಂಬದ ಮೂಲ ಸ್ಥಾನ ಮಾಯಮುಡಿ ಗ್ರಾಮದಲ್ಲಿ ಕ್ರಿಕೆಟ್ ಆಯೋಜಿಸಿರು ವುದರಿಂದ ನಮ್ಮ ಕುಟುಂಬದವರು ಹಾಗೂ ಅಮ್ಮಕೊಡವರು ಹಾಗೂ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಶಾಲಾ ಮೈದಾನವನ್ನು ರೂ.2 ಲಕ್ಷ ಅನುದಾನದಲ್ಲಿ ದುರಸ್ತಿ ಪಡಿಸಲಾಗಿದೆ. ಮೇ 4-5 ರಂದು ಕ್ರಿಕೆಟ್ ಕಪ್ ನಡೆಯಲಿದೆ ಎಂದರು. ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜದ ಉಪಾಧ್ಯಕ್ಷ ಮನ್ನಕಮನೆ ರಾಜು, ಕಾರ್ಯದರ್ಶಿ ಪುತ್ತಮನೆ ಅನಿಲ್, ನಿರ್ದೇಶಕ ಹೆಮ್ಮಚ್ಚಿಮನೆ ರವಿ, ಬಾನಂಡ ಕ್ರಿಕೆಟ್ ಕಪ್ ಸಮಿತಿ ಕಾರ್ಯದರ್ಶಿ ಬಾನಂಡ ಪ್ರಕಾಶ್, ಖಜಾಂಚಿ ಬಾನಂಡ ಸುದನ್ ಉಪಸ್ಥಿತರಿದ್ದರು. ಬಾನಂಡ ಕುಟುಂಬ ಹಾಗೂ ಅಖಿಲ ಅಮ್ಮಕೊಡವ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

Translate »