ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ ವ್ಯಕ್ಯಯೊಬ್ಬ ಮೃತಪಟ್ಟಿ ರುವ ಘಟನೆ ನಗರದ ರಾಮಸಮುದ್ರದಲ್ಲಿ ಶುಕ್ರವಾರ ಸಂಜೆ ನಡೆದಿದೆ.ರಾಮಸಮುದ್ರ ಅಂಬೇಡ್ಕರ್ ಬಡಾವಣೆ ನಿವಾಸಿ ಮಹದೇವಯ್ಯ(65) ಮೃತಪಟ್ಟವರು. ನಲ್ಲಿ ನೀರು ಪಡೆಯಲು ಮೋಟಾರ್ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ನೀರು ಪಡೆದ ನಂತರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೇ ವೈರ್ ಸುತ್ತಿಕೊಳ್ಳುತ್ತಿ ದಾಗ ವಿದ್ಯುತ್ ಸ್ಪರ್ಶಿಸಿ ತೀವ್ರ ಅಸ್ವಸ್ಥರಾ ದರು, ಕೂಡಲೇ ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಅವರ ಸಾವನ್ನಪ್ಪಿ ದ್ದಾರೆ ಎಂದು ಪೊಲೀಸರು ತಿಳಿಸಿದರು.ಈ ಬಗ್ಗೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.