ಶಾಲಾ ವಸ್ತು ಪ್ರದರ್ಶನದಿಂದ ಮಕ್ಕಳ ಜ್ಞಾನ ವಿಕಾಸ
ಹಾಸನ

ಶಾಲಾ ವಸ್ತು ಪ್ರದರ್ಶನದಿಂದ ಮಕ್ಕಳ ಜ್ಞಾನ ವಿಕಾಸ

November 19, 2018

ಹಾಸನ:  ಶಾಲೆಗಳಲ್ಲಿ ಇಂತಹ ವಸ್ತು ಪ್ರದರ್ಶನ ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿ ಜ್ಞಾನ ವಿಕಾಸ ವಾಗಲು ಉತ್ತಮವಾಗಿದೆ ಎಂದು ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಆಸ್ಪತ್ರೆಯ ಶೈಲಜ ಪ್ರಸನ್ನ ಎನ್.ರಾವ್ ತಿಳಿಸಿದರು.
ನಗರದ ಕೆ.ಆರ್.ಪುರಂನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ (ಹೋಲಿ ಮದರ್)ಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳ ಲಾಗಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಕ್ಕಳಲ್ಲೂ ಅವರದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದಕ್ಕೆ ಪ್ರೋತ್ಸಾಹಿಸುವ ಕೆಲಸ ಪೋಷಕರು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮನೆಯಲ್ಲಿ ಪೋಷಕರು ಯಾವ ವಾತಾ ವರಣವನ್ನು ಸೃಷ್ಟಿ ಮಾಡುತ್ತಾರೆ ಅದ ರಂತೆ ಮಕ್ಕಳು ಕೂಡ ಬೆಳೆದು ಮುಂದಿನ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಚಿಕ್ಕ ವಯ ಸ್ಸಿನಿಂದಲೇ ಮಕ್ಕಳಿಗೆ ಸದ್ಗುಣಗಳನ್ನು ನೀಡಿದರೆ ಮುಂದೆ ಉತ್ತಮ ಪ್ರಜೆಯಾಗಿ ಮತ್ತೊಬ್ಬರಿಗೆ ಮಾದರಿಯಾಗಿ ಸಮಾಜ ಮುಖಿ ಸೇವೆ ಮಾಡಲು ಅವಕಾಶ ಕಲ್ಪಿಸಿ ದಂತಾಗುತ್ತದೆ ಎಂದು ಸಲಹೆ ನೀಡಿದ ಅವರು, ಸಸಿ ಇದ್ದಾಗಲೇ ಉತ್ತಮ ಪೋಷಣೆ ನೀಡಿದರೆ ಮುಂದೆ ಮರವಾಗಿ ಫಲ ಕೊಡುತ್ತದೆ ಎಂದು ಉದಾಹರಣೆ ನೀಡಿ ದರು. ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಅಂತಹ ವಾತಾವರಣ ನಿರ್ಮಾಣ ಮಾಡಿ ರುವುದು ಶ್ಲಾಘನೀಯವಾಗಿದೆ ಎಂದರು.

ಶ್ರೀರಾಮಕೃಷ್ಣ ವಿದ್ಯಾಲಯ (ಹೋಲಿ ಮದರ್) ಶಾಲೆಯ ಮುಖ್ಯಸ್ಥರಾದ ಸಿ.ಎಸ್.ಕೃಷ್ಣಸ್ವಾಮಿ ಮಾತನಾಡಿ, ನಮ್ಮ ಶಾಲೆಯಲ್ಲೇ ಓದಿದ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಹಾಗೂ ಹೊರ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ವಸ್ತು ಪ್ರದರ್ಶನವನ್ನು ಪ್ರತಿ ವರ್ಷ ಏರ್ಪಡಿಸಲಾಗುತ್ತಿದೆ ಎಂದರು. ಪ್ರತಿ ಮಕ್ಕಳಲ್ಲೂ ಅವರದೇ ಆದ ಪ್ರತಿಭೆ ಇದ್ದೇ ಇರುತ್ತದೆ. ವಸ್ತು ಪ್ರದರ್ಶನವು ಮಕ್ಕಳ ಜ್ಞಾನ ವೃದ್ಧಿಸುವಲ್ಲಿ ಪ್ರಮುಖ ವಾಗಿದೆ. ಅಬ್ದುಲ್ ಕಲಾಂರಂತೆ ದೊಡ್ಡ ವಿಜ್ಞಾನಿ ಆಗಿ ದೇಶದ ಗೌರವ ಉಳಿಸು ವಂತೆ ಕರೆ ನೀಡಿದರು.

ಹಿರಿಯ ನಾಗರಿಕ ವೇದಿಕೆ ಸಂಚಾಲಕ ಬಿ.ಕೆ.ಮಂಜುನಾಥ್ ಮಾತನಾಡಿ, ಭಾರತ ದೇಶದಲ್ಲಿ ಮನುಷ್ಯರಾಗಿ ಜನ್ಮ ತಾಳಿರುವ ನಾವುಗಳು ಎಂದಿಗೂ ನಮ್ಮ ಸಂಸ್ಕøತಿ ಯನ್ನು ಮರೆಯಬಾರದು. ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವಸ್ತು ಪ್ರದರ್ಶನ ಎಂದರೆ ಕೇವಲ ವಿಜ್ಞಾನಕ್ಕೆ ಮಾತ್ರವಲ್ಲದೆ ಹಿಂದೆ ಆಳಿದ ರಾಜ-ಮಹಾರಾಜರ ಕಾಲದ ವೈಭವ, ಚಿತ್ರಕಥೆಯನ್ನು ಬಿಂಬಿ ಸುವ ವಸ್ತು ಪ್ರದರ್ಶನವನ್ನು ಕೂಡ ಬಿಂಬಿಸಲಾಗಿದೆ ಎಂದರು. ವಿಭಿನ್ನವಾದ ಮತ್ತು ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ಇಂತಹ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿ ರುವುದು ಉತ್ತಮ ಬೆಳೆವಣಿಗೆಯಾಗಿದೆ. ಹಿಂದೂ ಸಂಸ್ಕøತಿಯನ್ನು ತೋರಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ವಸ್ತು ಪ್ರದರ್ಶನದಲ್ಲಿ ಹಿಂದಿನ ಕಾಲದ ರಾಜ-ಮಹಾರಾಜರ ಆಡಳಿತದ ಚಿತ್ರಣ, ಮಕ್ಕಳಿಗೆ ಇಷ್ಟವಾದ ಗೊಂಬೆಗಳು, ಕವಿಗಳ ಸಾಲು ಸೇರಿದಂತೆ ಇತರೆ ವಸ್ತುಗಳ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ, ಶಾಲೆಯ ಪ್ರಾಂಶುಪಾಲರಾದ ಶಾಂತಮ್ಮ ಇತರರು ಪಾಲ್ಗೊಂಡಿದ್ದರು.

Translate »