ಅಭ್ಯರ್ಥಿಗಳ ಹಣೆಬರಹ ಮತ ಪೆಟ್ಟಿಗೆಗಳಲ್ಲಿ ಭದ್ರ
ಮೈಸೂರು

ಅಭ್ಯರ್ಥಿಗಳ ಹಣೆಬರಹ ಮತ ಪೆಟ್ಟಿಗೆಗಳಲ್ಲಿ ಭದ್ರ

June 9, 2018

ಮೈಸೂರು:  ಮತ ದಾನ ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೇಬರಹ ಈಗ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿವೆ. ಇಂದು ರಾತ್ರಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಎಲ್ಲಾ 42 ಮತಗಟ್ಟೆ ಗಳಿಂದ ಸೀಲು ಮಾಡಿದ ಮತ ಪತ್ರ ಗಳಿರುವ ಪೆಟ್ಟಿಗೆಗಳನ್ನು ಭಾರೀ ಬಿಗಿ ಪೊಲೀಸ್ ಭದ್ರತೆಯಲ್ಲಿ ಮೈಸೂರಿನ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ಲ್ಲಿರುವ ಮಹಾರಾಣ ಸರ್ಕಾರಿ ಮಹಿಳಾ ಕಾಲೇಜು ಹೊಸ ಕಟ್ಟಡಕ್ಕೆ ತಂದು ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ.

ಜೂನ್ 12 ರಂದು ಬೆಳಿಗ್ಗೆ 8 ಗಂಟೆ ಯಿಂದ ಪೆಟ್ಟಿಗೆಗಳನ್ನು ತೆರೆದು ಮತ ಗಳ ಎಣಿಕೆ ಕಾರ್ಯ ಆರಂಭವಾಗ ಲಿದ್ದು, ಪ್ರಾಶಸ್ತ್ಯದ ಮತದಾನವಾದ್ದ ರಿಂದ ತಡರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟ್ರಾಂಗ್ ರೂಂಗೆ ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆಯ ಪೊಲೀಸರು ಭಾರೀ ಭದ್ರತೆ ಮಾಡಿದ್ದು, ಎನ್.ಆರ್. ಉಪ ವಿಭಾಗದ ಎಸಿಪಿ ಸಿ. ಗೋಪಾಲ್ ನೇತೃತ್ವದಲ್ಲಿ ಬಂದೋಬಸ್ತ್ ಮೇಲ್ವಿ ಚಾರಣೆ ನಡೆಸಲಾಗುತ್ತಿದೆ.

Translate »