ಕಾಗಲವಾಡಿಯಲ್ಲಿ ವಿಜೃಂಭಣೆಯ ಹಾಲರವೆ ಉತ್ಸವ
ಚಾಮರಾಜನಗರ

ಕಾಗಲವಾಡಿಯಲ್ಲಿ ವಿಜೃಂಭಣೆಯ ಹಾಲರವೆ ಉತ್ಸವ

December 4, 2018

ಚಾಮರಾಜನಗರ: ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಶ್ರೀಮಲೈ ಮಹ ದೇಶ್ವರಸ್ವಾಮಿಯ 10ನೇ ವಾರ್ಷಿ ಕೋತ್ಸವ, 101 ಹಾಲರವೆ ಪೂಜಾ ಮಹೋತ್ಸವ ಹಾಗೂ ಕಡೆಕಾರ್ತಿಕ ಸೋಮವಾರದ ವಿಶೇಷಪೂಜಾ ಮಹೋ ತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಸರ್ಕಾರಿ ಶಾಲಾ ಆವರಣ ದಲ್ಲಿ ಶ್ರೀಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಸತ್ತಿಗೆ, ಸೂರಿಪಾನಿ, ಪೂಜಾ ಕುಣಿತ, ಗೊರವರಕುಣಿತ, ಡೊಳ್ಳುಕುಣಿತ, ಕಂಸಾಳೆಕುಣಿತ ತಂಡ, ವಾದ್ಯ ಗೋಷ್ಠಿಯೊಂದಿಗೆ ಹಾಲರವೆ ಉತ್ಸವ ಪ್ರಾರಂಭವಾಗಿ ಶ್ರೀಮಹದೇಶ್ವರರ ದೇವಾ ಲಯಕ್ಕೆ ತೆರಳಿ ಮುಕ್ತಾಯಗೊಂಡಿತು. ಮೆರವÀಣಿಗೆಯಲ್ಲಿ ಭಾಗವಹಿಸಿದ ಕಲಾ ತಂಡಗಳು ಉತ್ತಮ ಪ್ರದರ್ಶನ ನೀಡಿ ನೋಡುಗರ ಗಮನ ಸೆಳೆಯಿತು.

ಮಹೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಹಸಿರುತೋರಣ, ವಿದ್ಯುತ್‍ದೀಪಗಳಿಂದ ಶೃಂಗರಿಸಲಾ ಯಿತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಬಣ್ಣಬಣ್ಣ ಚಿತ್ತಾರ ಬಿಟ್ಟು ಸ್ವಾಗತಿಸಲಾ ಯಿತು. ಹಾಲರವೆ ಉತ್ಸವ ನಂತರ ಮಹದೇಶ್ವರಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ನಡೆಯಿತು. ತದನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗಿಸಲಾಯಿತು.

ಮೆರವಣಿಗೆಯಲ್ಲಿ ಕಾಗಲವಾಡಿ ಗ್ರಾಮಸ್ಥರು, ಯಜಮಾನರು, ನಾಡು ದೇಶದ ಯಜಮಾನರುಗಳು, ದೇವರು ಗುಡ್ಡರು ಮತ್ತು ಮುಖಂಡರುಗಳು ಹಾಗೂ ಮಹದೇಶ್ವರರ ಭಕ್ತರು ಭಾಗವಹಿಸಿದರು.

Translate »