ಉದ್ಯೋಗ, ರಾಜಕೀಯ ಮೀಸಲಾತಿಗಾಗಿ ಹೋರಾಟ ಅನಿವಾರ್ಯ
ಮೈಸೂರು

ಉದ್ಯೋಗ, ರಾಜಕೀಯ ಮೀಸಲಾತಿಗಾಗಿ ಹೋರಾಟ ಅನಿವಾರ್ಯ

January 20, 2020

ಶ್ರೀಯೋಗಿ ನಾರೇಯಣ ಬಣಜಿಗ(ಬಲಿಜ) ಜನಾಂಗದ ಮಹಾಸಭೆಯಲ್ಲಿ ಹಕ್ಕೊತ್ತಾಯ ಮಂಡನೆ
ಮೈಸೂರು, ಜ.19(ಆರ್‍ಕೆಬಿ)- ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಮುದಾಯ ಉದ್ಯೋಗ ಹಾಗೂ ರಾಜ ಕೀಯ ಮೀಸಲಾತಿಗಾಗಿ ಹೋರಾಟ ನಡೆಸು ವುದು ಅನಿವಾರ್ಯವಾಗಿದೆ ಎಂದು ಬಲಿಜ ಜನಾಂಗದ ನಾಯಕರು ಭಾನುವಾರ ಮೈಸೂ ರಿನ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ವಿದ್ಯಾರ್ಥಿನಿಲಯ ದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಧು ವರರ ಸಮಾವೇಶ, ವಾರ್ಷಿಕ ಮಹಾಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದರು.

ಶ್ರೀಯೋಗಿನಾರೇಯಣ ಬಣಜಿಗ (ಬಲಿಜ)ಸಂಘ, ಶ್ರೀಯೋಗಿನಾರೇಯಣ ಬಣಜಿಗ(ಬಲಿಜ)ಯುವಕರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಾಂಗದ ಮುಖಂಡ, ಮಾಜಿ ಸಚಿವ ಎಂ.ಆರ್. ಸೀತಾರಾಂ ಮಾತನಾಡಿ, 2ಎ ಗುಂಪಿನಲ್ಲಿದ್ದ ನಮ್ಮ ಜನಾಂಗವನ್ನು 3ಎ ಗುಂಪಿಗೆ ಸೇರಿಸಿ ಅನ್ಯಾಯ ಮಾಡಲಾಗಿದೆ. ಈಗ ಶಿಕ್ಷಣ ದಲ್ಲಿ ಮಾತ್ರ ಮೀಸಲಾತಿ ನೀಡಲಾಗು ತ್ತಿದ್ದು, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಗಾಗಿ ಸತತ ಹೋರಾಟ ಮಾಡು ತ್ತಿದ್ದರೂ ಸರ್ಕಾರ ಪರಿಗಣಿಸುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯ ಎಂದರು.

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ, ನಮ್ಮ ಸಮುದಾಯವನ್ನು 1994ರಲ್ಲಿ ವೀರಪ್ಪಮೊಯ್ಲಿ ಸರ್ಕಾರ 3ಎ ಗುಂಪಿಗೆ ಸೇರಿಸಿ ಅನ್ಯಾಯ ಮಾಡಿತು. ಮಾನಸಿಕವಾಗಿ ತುಳಿಯುವ ಕೆಲಸ ಅಂದಿನಿಂದಲೂ ನಿರಂತರವಾಗಿ ನಡೆಯು ತ್ತಲೇ ಬಂದಿದೆ. 2ಎ ಯಿಂದ ಸ್ಥಾನ ಪಲ್ಲಟ ಮಾಡಿ ನಮಗೆ ಉದ್ಯೋಗ, ರಾಜಕೀಯ ಮೀಸಲಾತಿಯಿಂದ ವಂಚನೆ ಮಾಡ ಲಾಗಿದೆ ಎಂದು ದೂರಿದರು.

ಸಚಿವ ಸಂಪುಟದಲ್ಲಾಗಲಿ, ಕೆಪಿಎಸ್‍ಸಿ ಯಲ್ಲಾಗಲಿ ನಮ್ಮ ಜನಾಂಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ನಾವು ಹೋರಾಟ ಮಾಡದ ಹೊರತು ನಮಗೆ ನ್ಯಾಯ ಸಿಗುವುದಿಲ್ಲ ಎಂದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಶಾಲಾ ದಿನಗಳಲ್ಲಿ ಪಟ್ಟ ಪರಿಶ್ರಮ ವನ್ನು ಮೆಲುಕು ಹಾಕಿದರು. ನಮ್ಮದು ಸ್ವಾಭಿಮಾನಿ ಸಮಾಜ. ಬೇಡುವ ಪರಿಸ್ಥಿತಿ ನಮ್ಮ ಜನರಲ್ಲಿ ಇಲ್ಲ. ಜನಾಂಗದ ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸುವುದು ಪೋಷಕರ ಹೊಣೆಯಾಗಿದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಪಡೆದ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಯ ದೇವ ಹೃದ್ರೋಗ ಸಂಸ್ಥೆಯ ಹೃದಯ ತಜ್ಞ ಡಾ.ನಟರಾಜ ಶೆಟ್ಟಿ, ಉದ್ಯಮಿ ಕೀರ್ತಿ ಕುಮಾರ್, ಅಂತಾರಾಷ್ಟ್ರೀಯ ಕ್ರಿಕೆಟಿಗ ಕೃತಿಕೃಷ್ಣ ಅವರನ್ನು ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಿ.ಜಿ. ಸೋಮಶೇಖರ್, ವೆಂಕಟೇಶಬಾಬು ಇನ್ನಿತರರು ಉಪಸ್ಥಿತರಿದ್ದರು.

Translate »