ಅಗ್ನಿಶಾಮಕ ಠಾಣೆ ತ್ಯಾಜ್ಯ ಕಡೆಗೂ ತೆರವು
ಮೈಸೂರು

ಅಗ್ನಿಶಾಮಕ ಠಾಣೆ ತ್ಯಾಜ್ಯ ಕಡೆಗೂ ತೆರವು

August 29, 2019

ಮೈಸೂರು,ಆ.28(ಎಂಕೆ)- ಮೈಸೂರಿನ ಸರಸ್ವತಿ ಪುರಂನಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಕುಸಿದು ಬಿದ್ದಿದ್ದ ಪಾರಂಪರಿಕ ಕಟ್ಟಡದ (ಪೋರ್ಟಿಕೊ) ತ್ಯಾಜ್ಯ ವನ್ನು ಬುಧವಾರ ತೆರವುಗೊಳಿಸಲಾಯಿತು. ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಆ.26ರಂದು ‘ಸಚಿವರ ಆದೇ ಶಕ್ಕೂ ಕಿಮ್ಮತ್ತಿಲ್ಲ, ಅಗ್ನಿಶಾಮಕ ಠಾಣೆ ಕುಸಿದು ಬಿದ್ದ ಕಟ್ಟಡ ತ್ಯಾಜ್ಯ ತೆರವಿಗೆ ಮೀನಾಮೇಷ’ ಶೀರ್ಷಿಕೆ ಯಡಿ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯಲ್ಲಿ ಕಟ್ಟಡ ಕುಸಿದು 18 ದಿನ ಕಳೆದರೂ ತ್ಯಾಜ್ಯವನ್ನು ತೆರವುಗೊಳಿಸಿಲ್ಲ ಎಂದು ವರದಿಯಾದ ಹಿನ್ನೆಲೆ ನಗರಪಾಲಿಕೆ ತಕ್ಷಣ ಸ್ಪಂದಿಸಿದೆ. ಪಾಲಿಕೆಯ ವಲಯ 4ರ ಅಭಿವೃದ್ಧಿ ಅಧಿಕಾರಿ ಸುನೀಲ್, ಮುಖ್ಯ ಅಗ್ನಿ ಶಾಮಕ ಅಧಿಕಾರಿ ಯೂನಸ್ ಅಲಿ ಕೌಸರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು, ಸರಸ್ವತಿಪುರಂ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ್ ಅರಸ್ ಅವರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

 

Translate »