ಮನೆ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ನಗದು, ಆಭರಣ ಕಳವು
ಮೈಸೂರು

ಮನೆ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ನಗದು, ಆಭರಣ ಕಳವು

July 18, 2018

ಮೈಸೂರು: ಮನೆಯ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ಜುಲೈ 13 ರಂದು ಸಂಭವಿಸಿದೆ.

ಜೆಪಿ ನಗರ ‘ಎಫ್’ ಬ್ಲಾಕ್ ನಿವಾಸಿಯಾದ ನಿವೃತ್ತ ಅಬಕಾರಿ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಎಂಬುವರ ಮನೆಯಲ್ಲಿ ಕಳವು ಮಾಡಲಾಗಿದೆ. ಸಮಾರಂಭವೊಂದರ ಕಾರಣ, ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಜುಲೈ 11 ರಂದು ಬೆಂಗಳೂರಿಗೆ ತೆರಳಿದ ಅವರು, ಜುಲೈ 14 ರಂದು ವಾಪಸ್ ಬಂದಾಗ ಕಿಟಕಿ ಸರಳು ಮುರಿದಿರುವುದು ತಿಳಿಯಿತು. ಮನೆಯ ಕೊಠಡಿಯ ವಾಲ್‍ಡ್ರೋಬ್‍ನಲ್ಲಿದ್ದ 1 ಲಕ್ಷ ರೂ. ನಗದು ಹಾಗೂ 1.5 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕಳವು ಮಾಡಿರುವುದು ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯಪುರಂ ಠಾಣೆ ಇನ್ಸ್‍ಪೆಕ್ಟರ್ ಓಂಕಾರಪ್ಪ ಹಾಗೂ ಸಿಬ್ಬಂದಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು. ಶ್ವಾನದಳ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿಗಳೂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

Translate »