ನಾಯಿಯ ಬಾಯಲ್ಲಿತ್ತು ಮನುಷ್ಯನ ಕಾಲು!
ಮಂಡ್ಯ

ನಾಯಿಯ ಬಾಯಲ್ಲಿತ್ತು ಮನುಷ್ಯನ ಕಾಲು!

June 23, 2018

ಮಂಡ್ಯ: ಕತ್ತರಿಸಿದ ಸ್ಥಿತಿಯಲ್ಲಿದ್ದ ಅಪರಿಚಿತ ಮನುಷ್ಯನ ಕಾಲನ್ನು ಶ್ವಾನವೊಂದು ತಿನ್ನುತ್ತಿದ್ದ ಘಟನೆ ನಾಗಮಂಗಲ ತಾಲೂಕಿನ ಹುಲಿಕೆರೆಯಲ್ಲಿ ನಡೆದಿದೆ.

ಹುಲಿಕೆರೆ ಮತ್ತು ತ್ಯಾಪೇನಹಳ್ಳಿ ಗ್ರಾಮದ ನಡುವೆ ಇರುವ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಾಯಿ ಯೊಂದು ಮಾನವನ ಪಾದವನ್ನು ತಿನ್ನುತ್ತಿದ್ದು ಸಾರ್ವ ಜನಿಕರಿಗೆ ಪತ್ತೆಯಾಗಿದೆ. ಈ ವೇಳೆ ಮನುಷ್ಯನ ಕಾಲನ್ನು ಬಿಡಿಸಲು ಹೋದವರ ಮೇಲೆ ನಾಯಿ ದಾಳಿ ಮಾಡಿದೆ. ಶ್ವಾನದ ಬಾಯಲ್ಲಿ ಕಾಲಿರುವ ಬಗ್ಗೆ ಗ್ರಾಮಸ್ಥರು ನಾಗ ಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶ್ವಾನಕ್ಕಾಗಿ ಹುಡುಕಾಟ ನಡೆಸಿದರು. ಅಷ್ಟೊತ್ತಿಗಾಗಲೇ ಕಾಲಿನೊಂದಿಗೆ ಶ್ವಾನ ನಾಪತ್ತೆಯಾಗಿದೆ. ಶ್ವಾನಕ್ಕೆ ಸಿಕ್ಕಿದ್ದ ಮನುಷ್ಯನ ಕಾಲು ಯಾರದ್ದೆಂದು ಪೊಲೀಸರಿಂದ ತನಿಖೆ ಆರಂಭಗೊಂಡಿದೆ.

ಶ್ವಾನ ಎಲ್ಲಿಂದ ಕಾಲನ್ನು ಕಚ್ಚಿಕೊಂಡು ಬಂದಿತು. ಯಾರದಿರಬಹುದು. ಒಂದು ವೇಳೆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯಾ ಎಂಬ ಆತಂಕ ಸ್ಥಳೀಯರಲ್ಲೂ ಮನೆ ಮಾಡಿದೆ. ಚುನಾವಣೆ ಮುಗಿದು ಒಂದು ತಿಂಗಳು ಕಳೆದಿದೆ. ನಾಗಮಂಗಲವನ್ನು ಸೂಕ್ಷ್ಮ ಕ್ಷೇತ್ರವಾಗಿ ಪರಿಗಣಿಸಲಾಗಿತ್ತು. ರಾಜಕೀಯ ಜಿದ್ದಾಜಿದ್ದಿಯೇ ಇಲ್ಲಿ ನಡೆದಿತ್ತು. ಕ್ಷೇತ್ರದ ಯಾರನ್ನಾದರು ರಾಜಕೀಯ ಹಿನ್ನೆಲೆ ಯಲ್ಲಿ ಕೊಲೆ ಮಾಡಲಾಗಿದೆಯಾ ಎಂಬ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಆತಂಕ ಸ್ಥಳೀಯ ಪೊಲೀ ಸರಿಗೂ ಮೂಡಿದೆ.

ಈಗಾಗಲೇ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಶ್ವಾನದಳವೂ ಕಾಲಿನ ಮೂಲಕ್ಕಾಗಿ ಹುಡುಕಾಟ ಆರಂಭಿಸಿದೆ. ಒಂದು ವೇಳೆ ಸಮಾಧಿ ಮಾಡಿದ ವ್ಯಕ್ತಿಯ ಕಾಲು ಇರಬಹುದೇ ಎಂಬ ಅನುಮಾನ ಇದ್ದರೂ ತಾಲೂಕಿನಲ್ಲಿ ಎಲ್ಲಿಯೂ ಸಮಾಧಿ ಬಗೆದ ವರದಿ ಇಲ್ಲ. ಕೊಳೆತ ಕಾಲಿನ ಹಿಂದಿನ ರಹಸ್ಯ ನಿಗೂಢವಾಗಿಯೇ ಉಳಿದಿದ್ದು ತನಿಖೆಯಿಂದಷ್ಟೇ ಹೊರ ಬೀಳಬೇಕಿದೆ. ಈ ಸಂಬಂಧ ನಾಗಮಂಗಲ ಗ್ರಾಮಾಂ ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »