ಮೈಸೂರು: ಜಂಬೂ ಸವಾರಿಯ ಮಾರನೇ ದಿನವಾದ ಶನಿವಾರ ಮೈಸೂರು ನಗರದ ಹೃದಯಭಾಗ ದಲ್ಲಿ ಹೆಚ್ಚಿನ ಜನದಟ್ಟಣೆ ಹಾಗೂ ವಾಹನ ಸಂಚಾರ ಕಂಡುಬಂದಿತು.
ಅ.10ರಂದು ದಸರಾ ಮಹೋತ್ಸವ ಉದ್ಘಾಟನೆಗೊಂಡ ಬಳಿಕ ವಿಜಯದಶಮಿ ಮೆರವಣಿಗೆ ದಿನವಾದ ಶುಕ್ರವಾರದವರೆಗೂ ಮೈಸೂರು ನಗರಕ್ಕೆ ಜನಸಾಗರವೇ ಹರಿದು ಬಂದಿತ್ತು.
ಜಂಬೂಸವಾರಿ ಮೆರವಣಿಗೆ ಮುಗಿ ಯುತ್ತಿದ್ದಂತೆ ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ನೆಂಟರಿಷ್ಟರು, ಪ್ರವಾಸಿಗರು ಶನಿವಾರ ತಮ್ಮ ಊರುಗಳಿಗೆ ಮರಳು ತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಹಾಗೂ ಸಬ್ ಅರ್ಬನ್ ಬಸ್ ನಿಲ್ದಾಣಗಳ ಸಂಪರ್ಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಾಬು ಜಗಜೀವನರಾಂ ವೃತ್ತ, ಜೆಎಲ್‍ಬಿ ರಸ್ತೆ, ಇರ್ವಿನ್ ರಸ್ತೆಗಳಲ್ಲಿ ಜನ ಹಾಗೂ ವಾಹನ ದಟ್ಟಣೆ ಇತ್ತು. ರೈಲ್ವೆ ನಿಲ್ದಾಣದಲ್ಲಿ ನಿತ್ಯ ಇರುತ್ತಿದ್ದಕ್ಕಿಂತ ತುಸು ಹೆಚ್ಚು ಜನ ದಟ್ಟಣೆ ಕಂಡುಬಂದಿತು. ನಾಳೆ ಭಾನುವಾರ ರೈಲ್ವೆ ನಿಲ್ದಾಣದಲ್ಲಿ ಇನ್ನೂ ಹೆಚ್ಚಿನ ಜನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಅದೇ ರೀತಿ ತಮ್ಮ ಊರುಗಳಿಗೆ ಮರಳು ತ್ತಿದ್ದವರಿಂದ ಮೈಸೂರಿನ ಸಬ್‍ಅರ್ಬನ್ ಬಸ್ ನಿಲ್ದಾಣದಲ್ಲೂ ಶನಿವಾರ ಜನದಟ್ಟಣೆ ಉಂಟಾಗಿತ್ತು. ಇಲ್ಲಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ನೀಲಗಿರಿ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಸೇರಿದಂತೆ ಅನೇಕ ರಸ್ತೆ ಗಳಲ್ಲಿ ಜನ-ವಾಹನ ಸಂಚಾರ ಹೆಚ್ಚಿನ ಪ್ರಮಾಣದಲ್ಲಿತ್ತು.
ವಿಜಯದಶಮಿ ಮೆರವಣಿಗೆ ಕರ್ತವ್ಯದಲ್ಲಿ ಬಸವಳಿದಿದ್ದ ಸಂಚಾರ ಪೊಲೀಸರು ಇಂದು ಸಹ ಕಾರ್ಯದೊತ್ತಡದಲ್ಲಿ ಸಿಲುಕಿದರು. ಜನದಟ್ಟಣೆ ಹಾಗೂ ವಾಹನ ಸಂಚಾರ ದಟ್ಟಣೆ ನಿಯಂತ್ರಿಸು ವಲ್ಲಿ ಹೈರಾಣಾದರು.