ಪೊಲೀಸ್ ಇಲಾಖೆಗೆ ಹೆಚ್ಚು ಮಹಿಳಾ ಸಿಬ್ಬಂದಿಯ ಅಗತ್ಯವಿದೆ
ಮೈಸೂರು

ಪೊಲೀಸ್ ಇಲಾಖೆಗೆ ಹೆಚ್ಚು ಮಹಿಳಾ ಸಿಬ್ಬಂದಿಯ ಅಗತ್ಯವಿದೆ

May 11, 2019

ಮೈಸೂರು: ಪೊಲೀಸ್ ಇಲಾಖೆಗೆ ಇನ್ನೂ ಮಹಿಳಾ ಸಿಬ್ಬಂದಿ ಅಗತ್ಯತೆ ಹೆಚ್ಚಾಗಿದೆ ಎಂದು ಸಿಐಡಿ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ತರಬೇತಿ ಶಾಲೆಯ 3ನೇ ತಂಡದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್‍ಗಳ ನಿರ್ಗಮನ ಪಥ ಸಂಚಲನ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ದೇಹದಾಢ್ರ್ಯ ಹೊಂದಿರುವ ಪುರುಷ ಸಿಬ್ಬಂದಿಗಳಿದ್ದರೆ ಸಾಕು, ಅಲ್ಲಿ ಮಹಿಳೆಯರಿಗೇನು ಕೆಲಸ ಎಂಬ ಭಾವನೆ ಇತ್ತು. ಆದರೆ ಈಗ ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ, ಹಿಂಸೆ, ಕಿರುಕುಳ ದಂತಹ ಪ್ರಕರಣಗಳು ಹೆಚ್ಚಾಗುತ್ತಿರುವು ದರಿಂದ ಇಂತಹ ಪ್ರಕರಣಗಳನ್ನು ನಿಭಾ ಯಿಸಲು ಸಹಾನುಭೂತಿ, ಅನುಕಂಪ ಹಾಗೂ ತಾಳ್ಮೆ ಉಳ್ಳ ಮಹಿಳಾ ಸಿಬ್ಬಂದಿ ಬೇಕು ಎಂದು ಅವರು ತಿಳಿಸಿದರು.
ಇಲಾಖೆಯಲ್ಲಿರುವ ಪೊಲೀಸರ ಪೈಕಿ ಶೇಕಡ 20ರಷ್ಟು ಮಹಿಳಾ ಸಿಬ್ಬಂದಿ ಅಗತ್ಯವಿದೆ. ಆದರೆ ಈಗಿರುವುದು ಶೇ.6ರಷ್ಟು ಮಾತ್ರ. ಪೊಲೀಸ್ ಇಲಾಖೆಗೆ ಸೇರಿದ ಬಹಳಷ್ಟು ಮಹಿಳೆಯರು ತಮ್ಮ ವಿದ್ಯಾರ್ಹತೆಗನುಸಾರ ಬೇರೆ ಕೆಲಸ ಸಿಕ್ಕಿದಾಗ ಬಿಟ್ಟು ಹೋಗುತ್ತಾರೆ. ನಮ್ಮಲ್ಲೂ ಈಗ ವೇಗವಾಗಿ ಪ್ರಮೋಷನ್‍ಗಳಾಗುತ್ತಿ ರುವುದರಿಂದ ಕಾನ್ಸ್‍ಸ್ಟೇಬಲ್ ಆಗಿ ಸೇರಿ ದವರು ಸಬ್ ಇನ್ಸ್‍ಪೆಕ್ಟರ್, ಇನ್ಸ್‍ಪೆಕ್ಟರ್ ಆಗಿ ನಿವೃತ್ತಿಯಾಗುವ ಅವಕಾಶವಿದೆ. ನಿಮ್ಮ ಜಾಣ್ಮೆ ಬಳಸಿ ಉತ್ತಮ ಕೆಲಸ ಮಾಡಿದರೆ ಪೊಲೀಸ್ ಇಲಾಖೆಯಲ್ಲೂ ಉತ್ತುಂಗ ಸ್ಥಾನಕ್ಕೇರಬಹುದು ಎಂದರು.

ಒಂದು ವರ್ಷದ ಬುನಾದಿ ತರಬೇತಿ ಪಡೆದಿರುವ ನಿಮ್ಮ ನಿಜವಾದ ಕೆಲಸ ಆರಂಭವಾಗುವುದು ಇಂದಿನಿಂದ. ಮನೆ ಯಲ್ಲಿ ಗಂಡ-ಮಕ್ಕಳನ್ನು ನಿಭಾಯಿಸಿ ಇಲಾಖೆ ಕರ್ತವ್ಯವನ್ನೂ ಮಾಡಬೇಕಾದ ಜವಾಬ್ದಾರಿ ಹಾಗೂ ಸವಾಲುಗಳಿವೆ. ಪೊಲೀಸ್ ಕೆಲಸ ಬಹಳ ಕಷ್ಟವೇ ಆದರೂ, ತಾಳ್ಮೆ, ಜಾಣ್ಮೆಯಿಂದ ಮಾಡ ಬೇಕೆಂಬ ಉದ್ದೇಶದಿಂದಲೇ ನಿಮಗೆ ಬುನಾದಿ ತರಬೇತಿ ನೀಡಲಾಗಿದೆ. ನಿಯೋಜಿತ ಠಾಣೆಗಳಿಗೆ ತೆರಳಿದಾಗ ಧೈರ್ಯದಿಂದ ಕೆಲಸ ಮಾಡಿ ಎಂದೂ ಮಹಿಳಾ ಪೊಲೀಸರಿಗೆ ಪ್ರವೀಣ್ ಸೂದ್ ಕಿವಿಮಾತು ಹೇಳಿ ಶುಭ ಹಾರೈಸಿದರು.

ಪೊಲೀಸ್ ಮಹಾ ನಿರೀಕ್ಷಕ (ತರಬೇತಿ) ಎಸ್.ರವಿ, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ. ಕೆ.ಧರಣೀದೇವಿ ಮಾಲಗತ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿ ವೇಳೆ ಉತ್ತಮ ಸಾಧನೆ ಮಾಡಿದ ಶಿವಮೊಗ್ಗ ಜಿಲ್ಲೆಯ ಎ.ತಾರಾ ಅವರಿಗೆ ಪ್ರವೀಣ್ ಸೂದ್ ಅವರು ಸರ್ವತೋಮುಖ ಪಾರಿತೋಷಕ ನೀಡಿದರು.

ಉಳಿದಂತೆ ಒಳಾಂಗಣ ವಿಭಾಗದಲ್ಲಿ ಹೆಚ್.ಎನ್.ಗೀತಾ, ಸಕ್ಕಿ ಪಾಟೀಲ್, ಪ್ರಭಾವತಿ ರಾಮಪ್ಪ ಸುಳ್ಳನವರ್ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರೆ, ಎ.ತಾರಾ, ಎಂ.ಇ.ರಶ್ಮಿ ಶಹಜಾನ್ ಫಕೀರ್‍ಸಾಬ್ ನಾದಫ್, ವಿಜಯಲಕ್ಷ್ಮಿ ಹೊರಾಂಗಣ ಪ್ರಶಸ್ತಿ ಪಡೆದರು.

ಫೈರಿಂಗ್ ವಿಭಾಗದಲ್ಲಿ ಹೆಚ್.ಜಿ.ಶಿಲ್ಪ, ಎಂ.ಪೂಜಶ್ರೀ, ಎಂ.ಜಯಶೀಲ ಹಾಗೂ ಎನ್.ಶೈಲಶ್ರೀ ಅವರು ಬಹುಮಾನಗಳನ್ನು ಪಡೆದಿದ್ದಾರೆ. 2018ರ ಆಗಸ್ಟ್ 31ರಂದು ಆರಂಭವಾದ ತರಬೇತಿಯಲ್ಲಿ 217 ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಹಾಜರಾಗಿದ್ದರು. ಆ ಪೈಕಿ 47 ಮಂದಿ ಸ್ನಾತಕೋತ್ತರ ಪದವೀಧರರು, 142 ಪದವೀಧರರೂ ಇದ್ದಾರೆ.

ಮೈಸೂರು ಆಕಾಶವಾಣಿಯ ನಿರೂ ಪಕ ಮಂಜುನಾಥ ಹಾಗೂ ಶಿಲ್ಪಾ ಅವರು ಕಾರ್ಯಕ್ರಮ ನಿರೂಪಿಸಿದರು. ಎ.ತಾರಾ ಅವರ ನಾಯಕತ್ವದಲ್ಲಿ ನಡೆದ ಆಕರ್ಷಕ ಪಥ ಸಂಚಲನವನ್ನು ಪ್ರಶಿಕ್ಷಣಾರ್ಥಿಗಳ ಪೋಷಕರು ಹಾಗೂ ಸಂಬಂಧಿಕರು ವೀಕ್ಷಿಸಿದರು.

Translate »