ರಸ್ತೆ ಬದಿ ತ್ಯಾಜ್ಯ ಸುರಿಯುತ್ತಿದ್ದ ಗೂಡ್ಸ್ ವಾಹನ ಪಾಲಿಕೆಯಿಂದ ವಶ
ಮೈಸೂರು

ರಸ್ತೆ ಬದಿ ತ್ಯಾಜ್ಯ ಸುರಿಯುತ್ತಿದ್ದ ಗೂಡ್ಸ್ ವಾಹನ ಪಾಲಿಕೆಯಿಂದ ವಶ

June 25, 2018

ಮೈಸೂರು: ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಫ್ಲೆಕ್ಸ್ ಅಂಗಡಿಯೊಂದರ ತ್ಯಾಜ್ಯ ಪದಾರ್ಥಗಳನ್ನು ವಿದ್ಯಾರಣ್ಯಪುರಂನಲ್ಲಿರುವ ಕಸ ವಿಲೆವಾರಿ ಘಟಕದ ಪಕ್ಕದ ರಸ್ತೆಯಲ್ಲಿ ಸುರಿಯುತ್ತಿದ್ದ ಗೂಡ್ಸ್ ವಾಹನವೊಂದನ್ನು ಸ್ಥಳೀಯರು ಪಾಲಿಕೆಯ ವಶಕ್ಕೆ ನೀಡಿರುವ ಘಟನೆ ನಡೆದಿದೆ.

ಸೂಯೇಜ್ ಫಾರಂ ಸುತ್ತಮುತ್ತ ಅನಧಿಕೃತವಾಗಿ ಮೈಸೂರಿನ ವಿವಿಧೆಡೆ ಸೇರಿದಂತೆ ಹೊರವಲಯಗಳಿಂದಲೂ ವಿವಿಧ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯುತ್ತಿರುವ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ರಾಸಾಯನಿಕ ವಸ್ತುಗಳ ಮಿಶ್ರಣವಿದ್ದ ಫ್ಲೆಕ್ಸ್ ತ್ಯಾಜ್ಯಗಳನ್ನು ಕಂಡ ಸ್ಥಳೀಯರು ಪ್ರಶ್ನಿಸಿದ್ದಾರೆ. ಇದರಿಂದ ಗೂಡ್ಸ್ ವಾಹನದ ಚಾಲಕ ಲಷ್ಕರ್ ಮೊಹಲ್ಲಾದಲ್ಲಿರುವ ಅಂಗಡಿಯೊಂದರ ತ್ಯಾಜ್ಯವಾಗಿದ್ದು, ಸುರಿದು ಬರುವಂತೆ ಹೇಳಿದ್ದರಿಂದ ತಂದಿರುವುದಾಗಿ ಸಮಜಾಯಿಷಿ ನೀಡಿದ್ದಾನೆ. ಇದರಿಂದ ಕುಪಿತಗೊಂಡ ಸ್ಥಳೀಯರು ಪ್ರತಿಭಟಿಸಿದ್ದಾರೆ. ಈ ನಡುವೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಹಾಗೂ ಬಿಜೆಪಿ ಮುಖಂಡ ಜೋಗಿ ಮಂಜು ಅವರು ಕಸ ಸುರಿಯದಂತೆ ಗೂಡ್ಸ್ ವಾಹನವನ್ನು ತಡೆದು ಪಾಲಿಕೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ಈ ವೇಳೆ ಬಿಜೆಪಿ ಯುವ ಮುಖಂಡ ಜೋಗಿ ಮಂಜು ಮಾತನಾಡಿ, ಖಾಸಗಿ ಕಾರ್ಯಕ್ರಮದವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾಗ ಕೆಎ.55-3988 ನೊಂದಣಿ ಸಂಖ್ಯೆಯ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಪ್ಲೆಕ್ಸ್ ಪ್ರಿಂಟ್‍ನ ತ್ಯಾಜ್ಯಗಳನ್ನು ಸುರುಯುತ್ತಿದ್ದದ್ದು ಕಂಡು ಬಂತು. ಇದನ್ನು ಆಕ್ಷೇಪಿಸಿ ವಾಹನ ಚಾಲಕನ್ನು ಕೇಳಿದಾಗ ಲಷ್ಕರ್ ಪೋಲಿಸ್ ಠಾಣೆಯ ಹಿಂಬಾಗ ವಿರುವ ಫ್ಲೆಕ್ಸ್ ಅಂಗಡಿಯ ತ್ಯಾಜ್ಯವಾಗಿದೆ ಎಂದು ತಿಳಿಸಿದ. ಬೇರೆ ಕ್ಷೇತ್ರದಿಂದ ಕಸ ತಂದು ಕೆ.ಆರ್.ಕ್ಷೇತ್ರದಲ್ಲಿ ಸುರಿಯುವ ಮೂಲಕ ಕ್ಷೇತ್ರದ ವಾತಾವರಣ ಹದಗೆಡಿಸುತ್ತಿರುವುದನ್ನು ಖಂಡಿಸಿ, ಸ್ಥಳೀಯ ಪಾಲಿಕೆ ಸದಸ್ಯರಾದ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಅವರಿಗೆ ತಿಳಿಸಿ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ನಂತರ ಪಾಲಿಕೆಯ ಅಧಿಕಾರಿ ಆರೋಗ್ಯಾಧಿಕಾರಿ ಶಿವಪ್ರಸಾದ್ ಅವರನ್ನು ಕರೆದು ಆ ವಾಹನ ಮತ್ತು ವಾಹನದ ಚಾಲಕ ಹಾಗು ಯುವಕರನ್ನು ಅವರ ವಶಕ್ಕೆ ನೀಡಲಾಯಿತು ಎಂದರು..
ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ, ಬೇರೆ ಕಡೆಯಿಂದ ಕಸ ತಂದು ಸುರಿಯುತ್ತಿರುವ ಘಟನೆಗಳು ದಿನ ನಿತ್ಯ ನಡೆಯುತ್ತಿದ್ದು ಅದರಲ್ಲೂ ಬೇರೆ ಬೇರೆ ಕ್ಷೇತ್ರದ ಕಸವನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಅದರಲೂ ರಸ್ತೆ ಬದಿ ಸುರಿದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದು ಇದು ಅಕ್ಷಮ್ಯ ಅಪರಾಧವಾಗಿದೆ. ನಗರಪಾಲಿಕೆ ಅಧಿಕಾರಿಗಳು ಮತ್ತು ಪೆÇೀಲಿಸ್ ಇಲಾಖೆ ಗಮನ ಹರಿಸಬೇಕೆಂದು ಒತ್ತಾಯಿಸಿದ್ದರು.

ಈ ಸಂಧರ್ಭದಲ್ಲಿ ಮುಖಂಡರುಗಳಾದ ಸೋಮಶೇಖರ್, ಸಂಪತ್ತು, ರಾಜಶೇಖರ, ಪ್ರತಾಪ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »