ಮಂಡ್ಯದಲ್ಲಿ ಪರಿಸ್ಥಿತಿ `ಕೈ’ಮೀರಿದೆ
ಮೈಸೂರು

ಮಂಡ್ಯದಲ್ಲಿ ಪರಿಸ್ಥಿತಿ `ಕೈ’ಮೀರಿದೆ

April 5, 2019

ಕೆ.ಆರ್.ಪೇಟೆ /ಶ್ರೀರಂಗಪಟ್ಟಣ,: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಶ್ರೀರಂಗಪಟ್ಟಣದಲ್ಲಿ ತಮ್ಮ ಮೊಮ್ಮಗ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಗುರು ವಾರ ಪ್ರಚಾರ ಮಾಡಿದರು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿ ಕ್ಷೇತ್ರ ಬಿಟ್ಟುಕೊಟ್ಟ ವೇಳೆ ಕಣ್ಣೀರಿಟ್ಟಂತೆಯೇ ಇಂದು ಕೆ.ಆರ್.ಪೇಟೆಯಲ್ಲಿ ನಿಖಿಲ್ ಪರ ಪ್ರಚಾರ ಮಾಡುವಾಗಲೂ ಕಣ್ಣೀರಿ ಟ್ಟರು. ಅಲ್ಲದೇ ಮಾಜಿ ಶಾಸಕರುಗಳಾದ ಚೆಲು ವರಾಯಸ್ವಾಮಿ ಮತ್ತು ರಮೇಶ್ ಬಂಡಿ ಸಿದ್ದೇಗೌಡ ವಿರುದ್ಧ ಕಿಡಿಕಾರಿದರು.

ನಾನಾಗಲೀ, ಕುಮಾರಸ್ವಾಮಿಯಾಗಲೀ, ನನ್ನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಸಾಧ್ಯವೇ? ಸಿದ್ದರಾಮಯ್ಯನ ವರೇ ಬಂದರೂ ಪ್ರಯೋಜನವಿಲ್ಲ. ಮಂಡ್ಯದ ಪರಿಸ್ಥಿತಿ ಕೈಮೀರಿ ಹೋಗಿದೆ. ನಿಖಿಲ್‍ಕುಮಾರಸ್ವಾಮಿಯನ್ನು ಸೋಲಿಸಿ ನನಗೆ ಮತ್ತು ಕುಮಾರಸ್ವಾಮಿಯ ವರಿಗೆ ಮುಖಭಂಗ ಮಾಡಬೇಕೆಂದು ಯಡಿ ಯೂರಪ್ಪ, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರೂ ಒಂದಾಗಿ ಬಿಟ್ಟಿದ್ದಾರೆ. ಆದರೆ ಆತನನ್ನು ಗೆಲ್ಲಿಸು ವುದು ಜನರ ಕೈಯ್ಯಲ್ಲಿದೆ.

ನನ್ನ ಮೊಮ್ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆತನನ್ನು ಗೆಲ್ಲಿಸಲು ಪುಣ್ಯಾತ್ಮರು ನೀವೇ ತೀರ್ಮಾನ ಮಾಡಬೇಕು ಎಂದು ಕಣ್ಣೀರಿಟ್ಟರು. ಸಂಕಷ್ಟ ಕಾಲದಲ್ಲಿ ನನಗೆ ರಾಜಕೀಯ ಶಕ್ತಿ ತುಂಬಿದ್ದು ಮಂಡ್ಯ ಜಿಲ್ಲೆ. ಇಲ್ಲಿನ ಜನರಿಗೆ ವಂಚನೆ, ಮೋಸ ಗೊತ್ತಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲುವಿಗೆ ದುಡಿಯುತ್ತಾರೆ ಎಂಬ ವಿಶ್ವಾಸವಿಲ್ಲ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ರವೀಂದ್ರ ಶ್ರೀಕಂಠಯ್ಯ ಅವರೇ ನಮ್ಮ ಜಿಲ್ಲೆಗೆ ನಿಖಿಲ್ ಬೇಕು ಎಂದು ಹಠ ಹಿಡಿದರು. ಅದರಿಂದಾಗಿ ಆತ ಮಂಡ್ಯದಿಂದ ಸ್ಪರ್ಧಿಸಲಿ ಎಂದೆ. ಈ ಹೋರಾಟ ದೇವೇಗೌಡ, ಅವರ ಮಕ್ಕಳು ಇಲ್ಲವೇ ಮೊಮ್ಮಕ್ಕಳಿಗಾಗಿಯೇ ಅಥವಾ ನಿಮಗಾಗಿಯೇ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದು ಹೇಳಿದ ಗೌಡರು, ಬಂಡಿಸಿದ್ದೇ ಗೌಡರ ಕುಟುಂಬಕ್ಕೆ ಏನೆಲ್ಲಾ ಮಾಡಿದ್ದೇನೆ, ಆದರೆ ಅವರು ಈಗ ಕುಮಾರಸ್ವಾಮಿ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದರು. ನನ್ನ ಫೋಟೋ ಹಿಡಿದುಕೊಂಡು ಬೆಳೆದಿರುವವರು ಅವರು. ಅವರಿಗೆ ಆತ್ಮಸಾಕ್ಷಿ ಇದ್ದರೆ ತಿಂದ ಮನೆಗೆ ವಿಷ ಹಾಕಬಾರದು. ಈಗಾಗಲೇ ವಿಷ ಹಾಕಿದ್ದೀರಿ. ಪದೇ ಪದೆ ವಿಷ ಹಾಕಬೇಡಿ ಎಂದು ಗುಡುಗಿದರು.

ನನ್ನ ಮಗ ಕದ್ದು ಹೋಗಿ ಮುಖ್ಯಮಂತ್ರಿಯಾದ ಎಂದು ಎಸ್.ಎಂ.ಕೃಷ್ಣ ಹೇಳುತ್ತಾರೆ. ಆದರೆ ನನ್ನ ಮಗ ಹಾಗೆಲ್ಲಾ ಹೋಗುವವನಲ್ಲ. ಅಂತಹ ಮಗನನ್ನು ನಾನು ಹೆತ್ತಿಲ್ಲ. ದೈವದ ಮೇಲೆ ನಂಬಿಕೆ ಇಟ್ಟು ಪಕ್ಷ ಬೆಳೆಸಿದ್ದೇನೆ.

ನಿಖಿಲ್ ಬಗ್ಗೆ ಕೆಟ್ಟದಾಗಿ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ನಿಖಿಲ್ ಕಥೆ ಮುಗಿಯಿತು. ದೇವೇಗೌಡರು ಮತ್ತು ಕುಮಾರಸ್ವಾಮಿ ಕಥೆ ಮುಗಿಯಿತು ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲಾ ನೋಡುವಾಗ ಮನಸ್ಸಿಗೆ ನೋವಾಗುತ್ತದೆ ಎಂದರು.

ಕೇರಳದ ವಯನಾಡಿನಿಂದ ರಾಹುಲ್ ನಾಮಪತ್ರ ಸಲ್ಲಿಕೆ
ಕೊಚ್ಚಿ: ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಅಧ್ಯಕ್ಷರ ದಕ್ಷಿಣ ಭಾರತದ ಸ್ಪರ್ಧೆ ಕೊನೆಗೂ ಅಧಿಕೃತವಾಗಿದ್ದು, ಇಂದು ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ತಮ್ಮ ಉಮೇದು ವಾರಿಕೆ ಸಲ್ಲಿಕೆ ಮಾಡಿದ್ದಾರೆ. ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು.

ಇವರೊಂದಿಗೆ ಇವರ ಸಹೋದರಿ ಪ್ರಿಯಾಂಕಾ ವಾದ್ರಾ ಕೂಡ ಇದ್ದದ್ದು ವಿಶೇಷವಾಗಿತ್ತು. ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ರಾಜಕೀಯ ಕಾವು ಜೋರಾಗಿದೆ. ಬೃಹತ್ ರೋಡ್ ಶೋ: ಇನ್ನು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಕೇರಳ ಕಾಂಗ್ರೆಸ್ ಘಟಕ ಬೃಹತ್ ರ್ಯಾಲಿ ಮತ್ತು ರೋಡ್ ಶೋ ಹಮ್ಮಿಕೊಂಡಿತ್ತು. ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯ ಕರ್ತರು ರೋಡ್ ಶೋ ಮೂಲಕ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದರು. ಅಲ್ಲದೆ ವಯನಾಡ್ ಡಿಸಿ ಕಚೇರಿವರೆಗೂ ಸಾವಿರಾರು ಮಂದಿ ತೆರಳಿ ರಾಹುಲ್‍ಗಾಂಧಿ ಅವರಿಗೆ ಬೆಂಬಲ ಘೋಷಣೆ ಮಾಡಿದರು.

Translate »