ಇಂದು ತೀರ್ಥೋದ್ಭವ: ವ್ಯಾಪಕ ಬಂದೋಬಸ್ತ್
ಕೊಡಗು

ಇಂದು ತೀರ್ಥೋದ್ಭವ: ವ್ಯಾಪಕ ಬಂದೋಬಸ್ತ್

October 17, 2018

ಮಡಿಕೇರಿ: ನಾಳೆ (ಅ.17)ಸಂಜೆ 6.43 ಗಂಟೆಗೆ ಪವಿತ್ರ ಕಾವೇರಿ ತೀರ್ಥೋ ದ್ಭವ ಅವಿರ್ಭಸಲಿದೆ. ಮುಖ್ಯಮಂತ್ರಿ ಕುಮಾ ರಸ್ವಾಮಿ ಆಗಮಿಸಲಿದ್ದು, ತೀರ್ಥೋ ದ್ಭವಕ್ಕೆ ಸಕಲ ಪೊಲೀಸ್ ಬಂದೋಬಸ್ತ್ ಮತ್ತು ವಾಹನ ಸಂಚಾರ ಮಾರ್ಗಗಳನ್ನು ರೂಪಿಸಲಾಗಿದೆ. ಅ.18 ಮತ್ತು 19 ರಂದು ಆಯುಧ ಪೂಜೆ ಹಾಗೂ ದಸರಾ ಉತ್ಸ ವಗಳಿಗೂ ಬಿಗಿ ಪೊಲೀಸ್ ವ್ಯವಸ್ಥೆ ಮಾಡ ಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಡಿ.ಸುಮನ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‍ಪಿ ಡಾ.ಸುಮನ್, ಜಾತ್ರೋತ್ಸವದ ಬಂದೋ ಬಸ್ತ್‍ಗಾಗಿ 5 ಡಿವೈಎಸ್‍ಪಿಗಳು, 25 ಎಸ್‍ಐ, 80 ಎಎಸ್‍ಐ, 600 ಪೊಲೀಸ್ ಸಿಬ್ಬಂದಿ ಗಳು, 100 ಮಹಿಳಾ ಸಿಬ್ಬಂದಿ, 200ಗೃಹ ರಕ್ಷಕ ದಳದ ಸಿಬ್ಬಂದಿ, ಕೆಎಸ್‍ಆರ್‍ಪಿಯ 3 ತುಕಡಿ, ಡಿಎಆರ್‍ನ 8 ತುಕಡಿ, 2 ಎಎನ್‍ಎಫ್ ದಳ ಸೇರಿದಂತೆ ವಿಶೇಷ ಭದ್ರತಾ ತಂಡಗಳನ್ನು ಕೂಡ ನಿಯೋಜಿಸ ಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿಗಳು ಜಾತ್ರೆಗೆ ಆಗಮಿ ಸುವುದರಿಂದ 2 ಎಎನ್‍ಎಫ್ ತಂಡಗಳು ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕೊಂಬಿಂಗ್ ನಡೆಸುತ್ತವೆ ಎಂದು ತಿಳಿಸಿದರು.

ಪಾಸ್ ಪಡೆದ ವಾಹನಗಳು ಸಂಜೆ 4 ಗಂಟೆಯ ಒಳಗಾಗಿ ತಲಕಾವೇರಿಗೆ ತೆರಳ ಬೇಕು. ತೀರ್ಥ ಕೊಂಡೊಯ್ಯುವ ವಾಹನ ಗಳಿಗೆ ರಾತ್ರಿ 9 ಗಂಟೆಯ ಬಳಿಕ ದೇವಾ ಲಯಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಸ್ಥಳಾವಕಾಶದ ಕೊರತೆ ಎದುರಾದರೆ, ಭಾಗಮಂಡಲ ದಲ್ಲೇ ವಾಹನಗಳನ್ನು ನಿಲ್ಲಿಸಿ ಮಿನಿ ಬಸ್ ಗಳ ಮೂಲಕ ತಲಕಾವೇರಿಗೆ ಭಕ್ತರು ತೆರಳ ಬೇಕೆಂದು ಎಸ್‍ಪಿ ಮನವಿ ಮಾಡಿದರು.
ಭಾಗಮಂಡಲದಿಂದ ತಲಕಾವೇರಿ ಯವರೆಗೆ ರಸ್ತೆಯಲ್ಲಿ ಯಾವುದೇ ವಾಹನ ಗಳನ್ನು ನಿಲ್ಲಿಸುವುದಕ್ಕೆ ನಿರ್ಬಂಧ ವಿಧಿಸಲಾ ಗಿದೆ. ಪಾಸ್ ಹೊಂದಿರುವ ಎಲ್ಲಾ ವಾಹ ನಗಳು ಸಂಜೆ 4 ಗಂಟೆಯ ಒಳಗೆ ತಲ ಕಾವೇರಿಗೆ ತಲುಪಬೇಕು. ಆ ಬಳಿಕ ಬರುವ ವಾಹನಗಳ ಪಾಸ್‍ಗಳನ್ನು ಪರಿಗಣಿ ಸುವುದಿಲ್ಲ ಎಂದು ತಿಳಿಸಿದರು.

ವಾಹನ ಮಾರ್ಗಗಳು: ತಲಕಾವೇರಿ ಜಾತ್ರೆಗೆ ಆಗಮಿಸುವ ವಾಹನಗಳ ಸುಗಮ ಸಂಚಾ ರಕ್ಕೆ ಅನುಗುಣವಾಗಿ ಮಾರ್ಗಗಳಲ್ಲೂ ಬದಲಾವಣೆ ಮಾಡಲಾಗಿದೆ.ಕುಶಾಲನಗರ, ಸೋಮವಾರಪೇಟೆ ಕಡೆ ಗಳಿಂದ ಬರುವ ವಾಹನಗಳು ಮಡಿಕೇರಿ ಜಿ.ಟಿ.ವೃತ್ತದಿಂದ-ಮೇಕೇರಿ ಜಂಕ್ಷನ್ ಮಾರ್ಗ ವಾಗಿ ಉಡೋತ್‍ಮೊಟ್ಟೆ ಮೂಲಕ ಭಾಗ ಮಂಡಲ ಕಡೆಗೆ ತೆರಳಬೇಕಿದೆ. ಕುಟ್ಟ-ವಿರಾಜಪೇಟೆ ಕಡೆಯಿಂದ ಬರುವ ವಾಹನ ಗಳು ಕದನೂರು-ಕಡಂಗ-ಕಕ್ಕಬ್ಬೆ- ಅಯ್ಯಂ ಗೇರಿ ಮಾರ್ಗವಾಗಿ ಭಾಗಮಂಡಲ ಕಡೆಗೆ, ಪಾಲಿಬೆಟ್ಟ-ಸಿದ್ದಾಪುರ-ಅಮ್ಮತ್ತಿ-ಕೊಂಡಂ ಗೇರಿ ಕಡೆಯಿಂದ ಬರುವ ವಾಹನಗಳು ಮಾರ್ನಾಡು- ನಾಪೋಕ್ಲು-ಅಯ್ಯಂಗೇರಿ ಮೂಲಕ ಭಾಗಮಂಡಲ ಕಡೆಗೆ, ಮಂಗ ಳೂರು ರಸ್ತೆ ಕಡೆಯಿಂದ ಬರುವ ವಾಹನ ಗಳು ಕಾಟಕೇರಿ- ತಾಳತ್ತಮನೆ ಮಾರ್ಗ ವಾಗಿ ಭಾಗಮಂಡಲ ಕಡೆಗೆ ಭಾಗ ಮಂಡಲದಿಂದ ಮಡಿಕೇರಿ ಮತ್ತು ಮಂಗ ಳೂರು ಕಡೆಗೆ ತೆರಳುವ ವಾಹನಗಳು ಅಪ್ಪಂಗಳ ಜಂಕ್ಷನ್‍ನಿಂದ ಪನ್ಯ- ಕಾಟಕೇರಿ ಮಾರ್ಗವಾಗಿ ತೆರಳುಬೇಕು. ಮಡಿಕೇರಿ ಕಡೆಯಿಂದ ತೆರಳುವ ಖಾಸಗಿ ಬಸ್‍ಗಳು ಕರಿಕೆ ಜಂಕ್ಷನ್‍ನಲ್ಲಿ, ಮಡಿಕೇರಿ ಕಡೆಯಿಂದ ಬರುವ ಕೆಎಸ್‍ಆರ್‍ಟಿಸಿ ಬಸ್‍ಗಳು ಚಾಮುಂಡಿ ಕಳದಲ್ಲಿ ನಿಲುಗಡೆ ಮಾಡ ಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ. ಪಿ. ಸುಮನ್ ತಿಳಿಸಿದರು.

ಮಡಿಕೇರಿ ದಸರಾ ಬಂದೋಬಸ್ತ್: ಅ.18 ಮತ್ತು 19 ರಂದು ಮಡಿಕೇರಿಯಲ್ಲಿ ಆಯುಧ ಪೂಜೆ ಮತ್ತು ದಸರಾ ಉತ್ಸವ ನಡೆಯಲಿರುವುದರಿಂದ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳ ಲಾಗಿದೆ ಎಂದು ಪೊಲೀಸ್ ವರಿಷ್ಠಾಧಿ ಕಾರಿ ಡಾ.ಪಿ.ಸುಮನ್ ತಿಳಿಸಿದ್ದಾರೆ.

ಜಿಲ್ಲಾ ಮತ್ತು ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮಾಡ ಲಾಗಿದೆ. ನಗರಸಭೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಿ.ಸಿ.ಕ್ಯಾಮರಾ ಅಳವಡಿ ಸಲಾಗುತ್ತಿದ್ದು ಅಪರಾಧ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿ ಕೆಲವು ಪೊಲೀ ಸರು ಮಫ್ತಿಯಲ್ಲಿ ಗಸ್ತು ತಿರುಗಲಿದ್ದು, ಶಾಂತಿಯುತ ದಸರಾ ಆಚರಣೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಅ.19 ರಿಂದ 20ರ ಮಧ್ಯಾಹ್ನದವರೆಗೆ ಮಡಿ ಕೇರಿ ನಗರದಲ್ಲಿ ದಶಮಂಟಪಗಳ ಶೋಭಾ ಯಾತ್ರೆ ನಡೆಯಲಿದ್ದು, ಈ ಅವಧಿಯಲ್ಲಿ ನಗರದೊಳಗೆ ಎಲ್ಲಾ ರೀತಿಯ ವಾಹನ ಸಂಚಾ ರವನ್ನು ನಿಷೇಧಿಸಲಾಗುತ್ತದೆ ಎಂದು ಎಸ್‍ಪಿ ಡಾ.ಸುಮನ್ ಮಾಹಿತಿ ನೀಡಿದರು.

ನಾಡ ಹಬ್ಬ ದಸರಾ ಸಂಬಂಧ ಹೆಚ್ಚಿನ ಜನರು ಮಡಿಕೇರಿಗೆ ಆಗಮಿಸುವ ನಿರೀ ಕ್ಷೆಯಿದ್ದು, ವಾಹನಗಳ ಸಂಚಾರ ವ್ಯವ ಸ್ಥೆಯಲ್ಲೂ ಮಾರ್ಪಾಡು ಮಾಡಿರುವು ದಾಗಿ ಡಾ.ಪಿ. ಸುಮನ್ ತಿಳಿಸಿದರು.

ವಾಹನ ಪಾರ್ಕಿಂಗ್: ಸೋಮವಾರ ಪೇಟೆ-ಕುಶಾಲನಗರ ಮಾರ್ಗವಾಗಿ ಆಗಮಿಸುವ ಎಲ್ಲಾ ವಾಹನಗಳು ಹೊಸ ಬಸ್ ನಿಲ್ದಾಣ, ಕಾನ್ವೆಂಟ್ ಮೈದಾನ, ಎಫ್‍ಎಂಸಿ ಕಾಲೇಜು ಮೈದಾನ, ಐಟಿಐ ಮೈದಾನಗಳಲ್ಲಿ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಬರುವ ಎಲ್ಲಾ ಖಾಸಗಿ ಬಸ್‍ಗಳಿಗೆ ಆರ್‍ಎಂಸಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ವಿರಾಜಪೇಟೆ, ಸಿದ್ದಾಪುರ, ಮಾರ್ಗವಾಗಿ ಬರುವ ವಾಹನಗಳು ಚೈನ್‍ಗೇಟ್ ಮಾರ್ಗ ವಾಗಿ ಮ್ಯಾನ್ಸ್ ಕಾಂಪೌಂಡ್ 2 ಮೈದಾ ನಗಳಲ್ಲಿ ಪಾರ್ಕಿಂಗ್ ಮಾಡಬೇಕಿದೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ಶಾಂತಿ ಚರ್ಚ್ ಮುಂದಿನ ಶಾಲಾ ಮೈದಾನದಲ್ಲಿ ಅವಕಾಶ ನೀಡಲಾಗಿದೆ. ಮಂಗಳೂರು ಮತ್ತು ಭಾಗಮಂಡಲ ಕಡೆಗೆ ತೆರಳುವ ವಾಹವಗಳು ಜಿ.ಟಿ.ವೃತ್ತ-ಮೇಕೇರಿ ಮಾರ್ಗ ವಾಗಿ ತಾಳತ್ತಮನೆ ಮೂಲಕ ಮಂಗ ಳೂರು ಕಡೆಗೆ ತೆರಳಬಹುದಾಗಿದೆ.
ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ವಾಹನಗಳು ಪಿರಿಯಾ ಪಟ್ಟಣ- ಮಾಲ್ದಾರೆ- ನೆಲ್ಲಿಹುದಿಕೇರಿ- ಮರಗೋಡು- ಹಾಕತ್ತೂರು- ಮೇಕೇರಿ- ತಾಳತ್ತಮನೆ ಮೂಲಕ ಮಂಗಳೂರು ಕಡೆ ತೆರಳಬಹುದಾಗಿದೆ.

ನಾಳೆ ಮೈಸೂರು ಕೊಡವ ಸಮಾಜದಲ್ಲಿ ಕಾವೇರಿ ತೀರ್ಥ ವಿತರಣೆ
ಮೈಸೂರು:  ಮೈಸೂರು ವಿಜಯನಗರ ಮೊದಲನೇ ಹಂತದಲ್ಲಿರುವ ಕೊಡವ ಸಮಾಜದಲ್ಲಿ ಅ.18ರಂದು ಕಾವೇರಿ ಸಂಕ್ರಮಣ ಹಬ್ಬವನ್ನು ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ 10.30 ಗಂಟೆಗೆ ಕಣಿ ಪೂಜೆ ನೆರವೇರಲಿದೆ. ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ಕಾವೇರಿ ತೀರ್ಥೋದ್ಭವದ ತೀರ್ಥವನ್ನು ವಿತರಣೆ ಮಾಡಲಾಗುತ್ತಿದ್ದು, ಭಕ್ತಾಧಿಗಳು ಅಂದು ಬೆಳಿಗ್ಗೆ 10.30ರ ಒಳಗೆ ಕೊಡವ ಸಮಾಜದ ಆವರಣಕ್ಕೆ ಆಗ ಮಿಸುವಂತೆ ಸಮಾಜದ ಕಾರ್ಯದರ್ಶಿ ಮಲಚ್ಚಿರ ಪೊನ್ನಪ್ಪ ಕೋರಿದ್ದಾರೆ.

Translate »