ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಇಲ್ಲ
ಮೈಸೂರು, ಮೈಸೂರು ದಸರಾ

ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಇಲ್ಲ

October 13, 2018

ಮೈಸೂರು: ಮೈಸೂರು ಕುಸ್ತಿಯೆಂದರೆ ರಾಜ್ಯದ ಕುಸ್ತಿ ಕುಲಬಾಂಧವರಿಗೆಲ್ಲಾ ಹಬ್ಬವಿದ್ದಂತೆ. ಆದರೆ, ವರ್ಷ ದಿಂದ ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಕಡಿಮೆಯಾಗಿದ್ದು, ಇದರಿಂದ ಕುಸ್ತಿಪಟುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಜಿ ಕುಸ್ತಿಪಟು ಬೆಳ ಗಾವಿಯ ಪೈ.ರತನ್ ಮಠಪತಿ ಬೇಸರ ವ್ಯಕ್ತಪಡಿಸಿದರು. ಡಿ.ದೇವರಾಜ ಅರಸು ವಿವಿ ಧೋದ್ದೇಶ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ ಪಂದ್ಯಾವಳಿಯ 63 ಕೆಜಿ ವಿಭಾಗದ ಕುಸ್ತಿ ನಡೆಯುವ ವೇಳೆ ತೀರ್ಪುಗಾರರು 2 ಅಂಕ ನೀಡುವ ಬದಲಾಗಿ 4 ಅಂಕಗಳನ್ನು ನೀಡಿದರು. ಈ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಂಕ ನೀಡುವ ವೇಳೆ ತಪ್ಪಾಗಿದೆ. ದಯವಿಟ್ಟು ವಿಡಿಯೋ ರೆಕಾರ್ಡ್ ಅನ್ನು ಪರಿಶೀಲಿಸುವಂತೆ ತೀರ್ಪುಗಾರರಿಗೆ ಮನವಿ ಮಾಡಿದೆ. ಆದರೆ, ತೀರ್ಪುಗಾರರು ಸ್ಪಂದಿಸದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿ ದ್ದಾರೆ. ಇದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಾದರೂ ಸ್ಥಳೀ ಯರೇ ತೀರ್ಪುಗಾರರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ದಸರಾ ಕುಸ್ತಿ ಎಂದರೆ ರಾಜ್ಯದ ಕುಸ್ತಿ ಕುಲ ಬಾಂಧವರಿಗೆ ಹಬ್ಬ. ದಸರಾ ಕುಸ್ತಿಯಲ್ಲಿ ಭಾಗವಹಿಸಬೇಕೆಂದು ವರ್ಷದಿಂದಲೇ ತಯಾರಿ ನಡೆಸುತ್ತೇವೆ. ಆದರೆ, ಈ ರೀತಿಯಾಗಿ ಅವ್ಯವಸ್ಥೆ ನಡೆದರೆ ಮುಂದಿನ ಬಾರಿ ನಮ್ಮ ಕುಸ್ತಿಪಟುಗಳನ್ನು ಕರೆದು ಕೊಂಡು ಬರುವುದಾದರೂ ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ಬೆಂಬಲಿಗರು ಕುಸ್ತಿ ಪಂದ್ಯಾವಳಿಯ ನೇತೃತ್ವ ವಹಿಸುತ್ತಾರೆ. ಅವರಿಗೆ ಕುಸ್ತಿಯ ಬಗ್ಗೆ ಅರಿವೇ ಇರುವುದಿಲ್ಲ. ಕುಸ್ತಿಯೇ ಒಂದು ಕುಲ. ಅಲ್ಲಿ ಜಾತಿ, ಧರ್ಮ ಮತ್ತು ಪಕ್ಷವನ್ನು ಮಧ್ಯ ತರಬಾರದು. ತಂದರೆ ನಮ್ಮ ಪಾರಂಂಪರಿಕ ಕಲೆಯನ್ನು ಬೆಳೆಯುವುದು ಹೇಗೆ?. ಶಿಕ್ಷಣ ಮತ್ತು ಕ್ರೀಡೆಯಲ್ಲಿ ರಾಜಕೀಯ ಸಲ್ಲದು ಎಂದು ಹೇಳಿದರು.

ಹಿಂದೆ ಕುಸ್ತಿಪಟುಗಳಿಗೆ ರಾಜಾತಿಥ್ಯ ಇತ್ತು. ನಾನು ಕುಸ್ತಿ ಮಾಡು ತ್ತಿದ್ದಾಗ ದಸರಾ ಕುಸ್ತಿಯಲ್ಲಿ ಭಾಗವಹಿಸಲು ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದಾಗ ಆಟೋರಿಕ್ಷಾ, ಟಾಂಗ್ ಗಾಡಿಯವರು ನಮ್ಮ ಗಾಡಿಗೆ ಹತ್ತಿ ಸರ್ ಎಂದು ಒತ್ತಾಯಿಸುತ್ತಿದ್ದರು. ಹೋಟೆಲ್‍ಗಳಲ್ಲಿ ಊಟ-ತಿಂಡಿಗೆ ಹಣ ಪಡೆಯುತ್ತಿರಲಿಲ್ಲ. ಇಂದು ಅ ಆತಿಥ್ಯ ಇಲ್ಲವಾಗಿದೆ. ದಸರಾ ಕುಸ್ತಿಗೆ ಬರುವ ಪೈಲ್ವಾನರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಕುರಿತು ಆಲೋ ಚಿಸಬೇಕಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಗ್ರೀಕೊ ರೋಮನ್ ಕುಸ್ತಿ: ದಾವಣಗೆರೆ ಮಧುಸೂದನ್ ಪ್ರಥಮ
ಮೈಸೂರು: ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ ದಲ್ಲಿ ನಡೆದ ಪುರುಷರ ಗ್ರೀಕೊ ರೋಮನ್ ಕುಸ್ತಿಯ 130 ಕೆ.ಜಿ.ವಿಭಾಗದಲ್ಲಿ ದಾವಣ ಗೆರೆಯ ಮಧುಸೂದನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಶುಕ್ರವಾರ ನಡೆದ ಪಾಯಿಂಟ್ ಕುಸ್ತಿಯಲ್ಲಿ 130 ಕೆ.ಜಿ.ವಿಭಾಗದಲ್ಲಿ ಉತ್ತಮ ಆಟ ಪ್ರದರ್ಶಿಸಿದ ದಾವಣಗೆರೆಯ ಮಧು ಸೂದನ್(ಪ್ರ), ಬಾಗಲಕೋಟೆಯ ರಾಜೇಂದ್ರ (ದ್ವಿ) ಹಾಗೂ ಮೈಸೂರಿನ ಅಕ್ಷಯ್ ಕುಮಾರ್(ತೃ) ಸ್ಥಾನ ಪಡೆದುಕೊಂಡರು. 55 ಕೆ.ಜಿ.ವಿಭಾಗ: ಬಾಗಲಕೋಟೆಯ ಕುಮಾರ್ ಎಂ.ನಗರ್(ಪ್ರ), ದಾವಣಗೆರೆಯ ಬಿ.ಎಸ್.ಪ್ರತೀಕ್ (ದ್ವಿ), ಬೆಳಗಾವಿಯ ರುಪೇಶ್ ಆರ್.ಕುಗಜಿ, ಶಿವಮೊಗ್ಗದ ಜಿ.ಸಂಜಯ್ (ತೃ). 60 ಕೆ.ಜಿ.ವಿಭಾಗ: ದಾವಣಗೆರೆಯ ಪ್ರಭಾಕರ್ ಎಂ ಪಾಲ್ಕೆ(ಪ್ರ), ಧಾರವಾಡದ ಈಶ್ವರ್ ಎನ್.ದಾಂಗಿ(ದ್ವಿ), ಬೆಳಗಾವಿಯ ಬಾಲರಾಜ್, ಬಾಗಲಕೋಟೆ ವಿನೋದ್ ಬಾಲಗರ್(ತೃ). 63 ಕೆ.ಜಿ.ವಿಭಾಗ: ಧಾರವಾಡ ಮಹೇಶ್ ಪಿ.ಗೌಡ(ಪ್ರ), ಬೆಳಗಾವಿಯ ಬಿ.ಹೆಚ್.ಪ್ರಹ್ಲಾದ್(ದ್ವಿ), ದಾವಣಗೆರೆಯ ಡಿ.ರಾಮ್ ಕುಮಾರ್, ಮೈಸೂರಿನ ಬಿ.ಚೇತನ್ (ತೃ), 67 ಕೆ.ಜಿ.ವಿಭಾಗ: ದಾವಣಗೆರೆಯ ಬಾಹುಬಲಿ ಶಿರಹಟ್ಟಿ (ಪ್ರ), ಬೆಳಗಾವಿಯ ಸುನಿಲ್‍ಶಂಕರ್ ಥನಬ್(ದ್ವಿ), ಧಾರವಾಡದ ದರೆಪ್ಪ, ಬಾಗಲ ಕೋಟೆ ಮಲ್ಲೇಶ್ ಚೌಧರಿ(ತೃ). 72 ಕೆ.ಜಿ.ವಿಭಾಗ: ದಾವಣಗೆರೆಯ ಮಂಜು ನಾಥ್(ಪ್ರ), ಶಿಮೊಗÀ ಈ.ಸಂಜಯ್(ದ್ವಿ), ಮೈಸೂರಿನ ಜೆ.ತೇಜಸ್, ಬೆಳಗಾವಿಯ ಹೊಲಬಸು (ತೃ). 77 ಕೆ.ಜಿ.ವಿಭಾಗ: ದಾವಣಗೆರೆ ಮಲ್ಲಪ್ಪ(ಪ್ರ), ಧಾರವಾಡದ ಮುಬಾರಕ್ (ದ್ವಿ), ಶಿವಮೊಗ್ಗದ ಶ್ರೀಕಾಂತ್(ತೃ). 82 ಕೆ.ಜಿ.ವಿಭಾಗ: ಧಾರವಾಡದ ದರೆಯಪ್ಪ ಹೊಸಮನಿ (ಪ್ರ), ದಾವಣಗೆರೆಯ ಲಕ್ಷ್ಮಣ್(ದ್ವಿ), ಬಾಗಲಕೋಟೆಯ ರಮೇಶ್ ಸಿಂದೆ(ತೃ). 87 ಕೆ.ಜಿ.ವಿಭಾಗ: ದಾವಣ ಗೆರೆ ಎಲ್.ಆನಂದ್(ಪ್ರ), ಬಾಗಲಕೋಟೆಯ ಭೀಮ ಜೀರ್ಗೋಲ್(ದ್ವಿ), ಧಾರವಾಡದ ಎ.ಆದಿತ್ಯ, ಬೆಳಗಾವಿಯ ಗೋಪಾಲ್(ತೃ). 97 ಕೆ.ಜಿ.ವಿಭಾಗ: ಬಾಗಲಕೋಟೆಯ ಶಿವಯ್ಯ ಪೂಜಾರ್(ಪ್ರ), ಮೈಸೂರಿನ ಎಸ್.ರಾಕೇಶ್(ದ್ವಿ), ಬೆಳಗಾವಿಯ ಬಿ.ಡಿ.ನಾಗರಾಜ್(ತೃ).

Translate »