ಈ ಆಸ್ಪತ್ರೆ ಕಟ್ಟಡಕ್ಕೇ ತುರ್ತು ಚಿಕಿತ್ಸೆಯ ಅಗತ್ಯವಿದೆ…!?
ಮೈಸೂರು

ಈ ಆಸ್ಪತ್ರೆ ಕಟ್ಟಡಕ್ಕೇ ತುರ್ತು ಚಿಕಿತ್ಸೆಯ ಅಗತ್ಯವಿದೆ…!?

June 28, 2019

ಮೈಸೂರು, ಜೂ.27(ಪಿಎಂ)- ಅದೊಂದು ಆಸ್ಪತ್ರೆ ಕಟ್ಟಡ. ಅನಾ ರೋಗ್ಯವೆಂದು ಇಲ್ಲಿಗೆ ಬಂದವರು ನಿಜಕ್ಕೂ ಒಂದು ಕ್ಷಣ ಗಾಬರಿ ಆಗಲೇಬೇಕು. ಏಕೆಂದರೆ ಆ ಆಸ್ಪತ್ರೆ ಕಟ್ಟಡ ನೋಡಿದರೆ, ಎಲ್ಲಿ ಕುಸಿದು ಬೀಳುತ್ತದೋ ಎಂಬ ಆತಂಕ ಮೂಡುತ್ತದೆ.

ಹೌದು, ಅಷ್ಟರ ಮಟ್ಟಿಗೆ ಶಿಥಿಲಾವಸ್ಥೆಗೆ ತಲುಪಿದೆ. ಕೆ.ಜಿ.ಕೊಪ್ಪಲಿನ ನ್ಯೂ ಕಾಂತ ರಾಜ ಅರಸು ರಸ್ತೆಯಲ್ಲಿರುವ `ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ’ ದುಸ್ಥಿತಿ ಇದು. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಜೀವ ಕೈಯಲ್ಲಿಡಿದು ಕಾರ್ಯನಿರ್ವಹಿಸುವಂತಾ ಗಿದ್ದರೆ, ಚಿಕಿತ್ಸೆಗೆ ಬಂದವರೂ ಬೇಗ ಜಾಗ ಖಾಲಿ ಮಾಡಿದರೆ ಜೀವ ಉಳಿದೀತು ಎಂದುಕೊಳ್ಳುವಂತಾಗಿದೆ ಇಲ್ಲಿನ ಪರಿಸ್ಥಿತಿ.

ಕಟ್ಟಡ ಹಳೆಯದಾಗಿ ಇಂತಹ ದುರ ವಸ್ಥೆಗೆ ತಲುಪಿದ್ದರೆ, ಸಿಬ್ಬಂದಿ ಕೊರತೆ, ಮೂಲ ಸೌಲಭ್ಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡು ತ್ತಿದ್ದರೂ ಇದರ ಪುನಶ್ಚೇತನಕ್ಕೆ ಮಾತ್ರ ಕಾಲ ಕೂಡಿ ಬಂದಿಲ್ಲ.

6 ಹಾಸಿಗೆ ಆಸ್ಪತ್ರೆ: ಇದು 6 ಹಾಸಿಗೆ ಸೌಲಭ್ಯ ಹೊಂದಿರುವ ಆಯುಷ್ ಇಲಾಖೆಯ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ. ಇದರ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದರೆ, ಹಲವು ಭಾಗಗಳಲ್ಲಿ ಗೋಡೆ ಮತ್ತು ಮೇಲ್ಛಾ ವಣಿಯಲ್ಲಿ ಸಿಮೆಂಟ್ ಕಿತ್ತು ಬಂದು ಕಾಂಕ್ರಿಟ್‍ನೊಂದಿಗಿರುವ ಕಬ್ಬಿಣದ ಸಲಾಕೆ ಗಳು ಕಾಣುವಂತಾಗಿದೆ. ಅಕ್ಯೂಪ್ರೆಷರ್ ಚಿಕಿತ್ಸೆ ಕೊಠಡಿಯ ಗೋಡೆಯಲ್ಲಿ ಮರದ ಬೇರುಗಳು ಕಾಣಿಸಿಕೊಂಡಿದ್ದು, ಹೆಚ್ಚಿನ ಹಾನಿಗೆ ಎಡೆಮಾಡಿದೆ. ಇನ್ನು ಮಳೆ ಬಂದರೆ ರೋಗಿಯನ್ನು ಕೊಠಡಿಯಿಂದ ಕೊಠಡಿಗೆ ಕರೆದೊಯ್ಯುವ ಕೆಲಸ ಮಾಡಬೇಕಿದೆ. ಮಿತ ಸೌಲಭ್ಯ ಹಾಗೂ ಅವ್ಯವಸ್ಥೆಯ ನಡುವೆಯೂ ಆಸ್ಪತ್ರೆಯಲ್ಲಿ ದಿನಕ್ಕೆ 10ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಿರುವುದು ಗಮನಾರ್ಹ ಅಂಶ.

ಆಸ್ಪತ್ರೆ ಕಟ್ಟಡ ಮುಡಾ (ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರ) ಅಧೀನದಲ್ಲಿದ್ದು, ಕಳೆದ 30 ವರ್ಷಗಳಿಂದ ಈ ಕಟ್ಟಡದಲ್ಲಿ ಆಯುಷ್ ಇಲಾಖೆ ವತಿಯಿಂದ ಆಸ್ಪತ್ರೆ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಒಟ್ಟು 10 ಹುದ್ದೆಗಳಿದ್ದು, ಈ ಪೈಕಿ ಸ್ಟಾಫ್ ನರ್ಸ್, ಕ್ಲರ್ಕ್ ಹಾಗೂ ಗ್ರೂಪ್-ಡಿ ಸೇರಿದಂತೆ ಮೂವರು ಮಾತ್ರವೇ ಇದ್ದಾರೆ. ಶ್ರೀರಾಂ ಪುರದ ಸರ್ಕಾರಿ ಆಯುರ್ವೇದ ಚಿಕಿತ್ಸಾ ಲಯದ ವೈದ್ಯಾಧಿಕಾರಿ ಡಾ.ಸಿ.ರೇಣುಕಾ ದೇವಿ ಅವರನ್ನು ಇಲ್ಲಿಗೆ ಪ್ರಭಾರ ವೈದ್ಯಾ ಧಿಕಾರಿಯಾಗಿ ನಿಯೋಜಿಸಿದ್ದು, ಇವರು ಮಂಗಳವಾರ ಮತ್ತು ಶುಕ್ರವಾರ ಕಾರ್ಯ ನಿರ್ವಹಿಸಲಿದ್ದಾರೆ. ಇದರ ಜೊತೆಗೆ ಮೇಟ ಗಳ್ಳಿಯ ಕೆಆರ್‍ಎಸ್ ರಸ್ತೆಯಲ್ಲಿರುವ `ಸರ್ಕಾರಿ ಪ್ರಕೃತಿ ಚಿಕಿತ್ಸೆ, ಯೋಗ ವೈದ್ಯ ಕೀಯ ಕಾಲೇಜು ಮತ್ತು ಆಸ್ಪತ್ರೆ’ಯಿಂದ ಇಲ್ಲಿಗೆ ತಿಂಗಳಿಗೆ ಒಬ್ಬ ಕಲಿಕಾ ವೈದ್ಯರನ್ನು ನಿಯೋಜಿಸಲಾಗುತ್ತಿದೆ.

ಸ್ಥೂಲಕಾಯ, ಸಂಧಿವಾತ ಮೊದ ಲಾದ ಸಮಸ್ಯೆಗಳಿದ್ದವರು ಇಲ್ಲಿ ಥೆರಪಿ ಗಳನ್ನು ಪಡೆದು ಉತ್ತಮ ಫಲಿತಾಂಶ ಕಂಡಿದ್ದಾರೆ. ದಿನಕ್ಕೆ 10ರಿಂದ 15 ಮಂದಿ ವಿವಿಧ ಚಿಕಿತ್ಸೆಯನ್ನು ಇಲ್ಲಿ ಪಡೆದುಕೊಳ್ಳು ತ್ತಿದ್ದಾರೆ ಎನ್ನುತ್ತಾರೆ ಆಸ್ಪತ್ರೆ ಸಿಬ್ಬಂದಿ. ಅಭ್ಯಂಗ ಚಿಕಿತ್ಸೆ, ಜಲ ಚಿಕಿತ್ಸೆ, ಮಣ್ಣಿನ ಸ್ನಾನ ಸೇರಿದಂತೆ ಅನೇಕ ಥೆರಪಿ ವಿಭಾಗ ಗಳಿದ್ದರೂ ಕೊಠಡಿಗಳ ಅವ್ಯವಸ್ಥೆ ಹಾಗೂ ಸಾಧನ-ಸಲಕರಣೆಗಳ ಕೊರತೆಯಿಂದ ಸಮರ್ಪಕ ಚಿಕಿತ್ಸೆಗೆ ತೊಡಕಾಗಿದೆ.

`ಕಟ್ಟಡ ಯಾವಾಗ ಕುಸಿದು ಬೀಳು ತ್ತದೋ ಎಂಬ ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಕ್ಯೂಪ್ರೆಷರ್ ಕೊಠ ಡಿಯ ಛಾವಣಿ ಪದರ ಇತ್ತೀಚೆಗೆ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಕೊಠಡಿಯಲ್ಲಿದ್ದ ಸಿಬ್ಬಂದಿ ಊಟಕ್ಕೆ ಹೋಗಿದ್ದರಿಂದ ದುರಂತ ತಪ್ಪಿದೆ’ ಎಂದು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ.ರೇಣುಕಾದೇವಿ ಆತಂಕ ವ್ಯಕ್ತಪಡಿಸುತ್ತಾರೆ.

Translate »