ಮೈಸೂರಲ್ಲಿ ಟಿಬೆಟಿಯನ್ನರ ಧರಣಿ
ಮೈಸೂರು

ಮೈಸೂರಲ್ಲಿ ಟಿಬೆಟಿಯನ್ನರ ಧರಣಿ

March 11, 2019

ಮೈಸೂರು:60ನೇ ರಾಷ್ಟ್ರೀಯ ಟಿಬೆಟಿಯನ್ ದಂಗೆ ದಿನದ ಅಂಗವಾಗಿ ಮೈಸೂರಿನಲ್ಲಿ ಭಾನುವಾರ ಟಿಬೆಟಿಯನ್ನರು ಬೃಹತ್ ಮೆರವಣಿಗೆ ನಡೆಸಿ ಟಿಬೆಟಿಯನ್ನರ ಮೇಲೆ ನಡೆಯು ತ್ತಿರುವ ದೌರ್ಜನ್ಯ ತಡೆಗೆ ವಿಶ್ವಸಂಸ್ಥೆ ಮುಂದಾಗಬೇಕೆಂದು ಆಗ್ರಹಿಸಿದರು.

ಮೈಸೂರಿನ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ಮುಂಭಾಗದಿಂದ ಬೃಹತ್ ಮೆರ ವಣಿಗೆ ಹೊರಟ ಟಿಬೆಟಿಯನ್ನರು ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ ವೃತ್ತ, ಅರಸು ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಶಾಂತಿಯುತವಾಗಿ ಧರಣಿ ನಡೆಸಿದರು. ಟಿಬೆಟ್‍ನಲ್ಲಿ ಟಿಬೆಟಿ ಯನ್ನರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಟಿಬೆಟ್ ಸನ್ಯಾಸಿಗಳನ್ನು ಅಕ್ರಮವಾಗಿ ಬಂಧನದಲ್ಲಿರಿಸಿ, ಚಿತ್ರಹಿಂಸೆ ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿಬೆಟ್ ನಲ್ಲಿ ಶಾಂತಿ ನೆಲೆಸುವುದಕ್ಕೆ ವಿಶ್ವ ಸಂಸ್ಥೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿವಿಧ ಟಿಬೆಟ್ ಮಹಿಳಾ ಘಟಕದ ಅಧ್ಯಕ್ಷರುಗಳಾದ ತೇನ್‍ಸಿಂಗ್, ತಾಮ್‍ಜಿನ್ ಡೋಲ್ಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »