ಚಾಮರಾಜನಗರ: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ನ.10ರಂದು ಚಾಮರಾಜನಗರ, ಗುಂಡ್ಲುಪೇಟೆ, ಯಳಂ ದೂರು ಮತ್ತು ಕೊಳ್ಳೇಗಾಲ ಪಟ್ಟಣಗಳಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಯೋಜಿಸಿರುವ ಹಿನ್ನೆಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಹಲವು ಕ್ರಮಗಳನ್ನು ಪಾಲಿ ಸುವಂತೆ ಪೊಲೀಸ್ ಇಲಾಖೆ ಸಾರ್ವ ಜನಿಕರಲ್ಲಿ ಮನವಿ ಮಾಡಿದೆ.
ನಿಷೇಧ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ನ.10 ರಂದು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಜಿಲ್ಲಾದ್ಯಂತ ಟಿಪ್ಪು ಜಯಂತಿ ಕಾರ್ಯಕ್ರಮ ಹೊರತುಪಡಿಸಿ ಯಾವುದೇ ಸಂಘಟನೆಗಳ ಆಯೋಜಕರು, ಕಾರ್ಯ ಕರ್ತರು, ಸದಸ್ಯರು ಹಾಗೂ ಯಾವುದೇ ವ್ಯಕ್ತಿಗಳು ದ್ವಿಚಕ್ರ ವಾಹನ, ಇತರೆ ಯಾವುದೇ ವಾಹನಗಳ ಮೂಲಕ ರ್ಯಾಲಿ, ಧ್ವಜ ಪ್ರದ ರ್ಶನ, ಬಾವುಟ ಜಾಥಾ, ಪಾದಯಾತ್ರೆ, ಮೆರವಣಿಗೆ, ಪ್ರತಿಭಟನೆ, ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ, ಧ್ವನಿವ ರ್ದಕಗಳ ಮೂಲಕ ಹಾಡು, ಘೋಷಣೆ ಗಳನ್ನು ಕೂಗುವುದು, ನೃತ್ಯ ಮಾಡುವು ದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶಿಸಿದ್ದಾರೆ. ಈ ಆದೇಶದ ಉಲ್ಲಂಘನೆಯಾದಲ್ಲಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.
ಮದ್ಯ ಮಾರಾಟ ನಿಷೇಧ: ನ.9ರ ಮಧ್ಯ ರಾತ್ರಿಯಿಂದ ನ.10ರ ಮಧ್ಯರಾತ್ರಿವರೆಗೆ ಚಾಮರಾಜನಗರ ನಗರಸಭೆ ಹಾಗೂ ತಾಲೂಕು ಕೇಂದ್ರಗಳ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲಿ ಮದ್ಯದಂಗಡಿಗಳಲ್ಲಿ (ಕೆಎಸ್ ಬಿಸಿಎಲ್ ಹೊರತುಪಡಿಸಿ) ಯಾವುದೇ ರೀತಿಯ ಮದ್ಯ ಮಾರಾಟ, ಅಕ್ರಮ ದಾಸ್ತಾನು, ಅಕ್ರಮ ಸಾಗಣೆ ಮಾಡದಂತೆ ನಿಷೇಧಿಸಿ, ಒಣದಿನಗಳೆಂದು ಘೋಷಿಸಲಾಗಿದೆ.
ಟಿಪ್ಪು ಜಯಂತಿ ಅಂಗವಾಗಿ ಜಿಲ್ಲಾಡ ಳಿತ ಮತ್ತು ತಾಲೂಕು ಆಡಳಿತದಿಂದ ಹಾಕ ಲಾಗುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಗಳನ್ನು ಹೊರತು ಪಡಿಸಿ ಬೇರಾವುದೇ ರೀತಿಯ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಗಳನ್ನು ಹಾಕಲು ಅವಕಾಶವಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಠಿಯಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬಾರದು.
ಜಿಲ್ಲಾ ಪೊಲೀಸ್ ವತಿಯಿಂದ ಮುಂಜಾ ಗ್ರತಾ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಮಾಡಿ, ಗುಪ್ತ ಮಾಹಿತಿ ಕಲೆ ಹಾಕಲಾ ಗುತ್ತಿದೆ. ನಗರ ಹಾಗೂ ಜಿಲ್ಲಾ ಗಡಿಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ನೇಮಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸ ಲಾಗಿದೆ ಮತ್ತು ವಿಡಿಯೋ ಚಿತ್ರೀಕರ ಣಕ್ಕೂ ವ್ಯವಸ್ಥೆ ಮಾಡಲಾಗಿದೆ. ಸದರಿ ಕಾರ್ಯಕ್ರಮಗಳ ಸನ್ನಿವೇಶ ದುರುಪ ಯೋಗಪಡಿಸಿಕೊಳ್ಳುವ ಸಮಾಜಘಾತುಕ ಶಕ್ತಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಈ ಕೆಳಕಂಡ ದೂರವಾಣಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಜಿಲ್ಲಾ ನಿಯಂತ್ರಣ ಕೊಠಡಿ ದೂ: 08226- 222383, ಮೊ:9480804600, ಡಿಎಸ್‍ಪಿ, ಚಾ.ನಗರ ಉಪವಿಭಾಗ, ದೂ: 08226-222 090, ಮೊ:9480804620, ಡಿಎಸ್‍ಪಿ ಕೊಳ್ಳೇ ಗಾಲ ಉಪವಿಭಾಗ, ದೂ:08224-252840, ಮೊ: 9480804621.