ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ  ಹಲವು ಮುಖಂಡರ ಬಂಧನ-ಬಿಡುಗಡೆ
ಚಾಮರಾಜನಗರ

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ  ಹಲವು ಮುಖಂಡರ ಬಂಧನ-ಬಿಡುಗಡೆ

November 10, 2018

ಚಾಮರಾಜನಗರ: ರಾಜ್ಯ ಸರ್ಕಾರ ನಾಳೆ (ನ.10) ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯ ಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿ ಟಿಪ್ಪು ಜಯಂತಿ ವಿರೋಧಿ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರ ವಾರ ಧರಣಿ ನಡೆಸಿದರು.

ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾ ನದ ಮುಂಭಾಗದಿಂದ ಮೊದಲಿಗೆ ನಗರ ಸಭಾ ಸದಸ್ಯರಾದ ಸುದರ್ಶನಗೌಡ, ರಾಘ ವೇಂದ್ರ, ಜಿಲ್ಲಾ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ, ಮುಖಂಡ ರಾದ ಕೆಲ್ಲಂಬಳ್ಳಿ ಸೋಮನಾಯಕ್, ಸುಂದರ್‍ರಾಜ್, ಮಾರ್ಕೆಟ್ ಕುಮಾರ್ ಇತರರು ಟಿಪ್ಪು ಜಯಂತಿ ಆಚರಿಸುತ್ತಿ ರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರದ ಘೋಷ ಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರ ವಣಿಗೆ ಆರಂಭಿಸಿದರು. ಈ ವೇಳೆ ದೇವ ಸ್ಥಾನದ ಮುಂಭಾಗದ ಉದ್ಯಾನವನದ ಬಳಿ ಪ್ರತಿಭಟನಾಕಾರರನ್ನು ತಡೆದ ಪೊಲೀ ಸರು, ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ. ಹೀಗಾಗಿ ಪ್ರತಿಭಟನೆ ಕೈಬಿಡು ವಂತೆ ವಿನಂತಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಪ್ರತಿಭಟನೆಯಲ್ಲಿ ನಿರತ ರಾಗಿದ್ದವರನ್ನು ಬಂಧಿಸಿ ಕರೆದೊಯ್ದರು.
ಧರಣಿ: ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತದ ಆವರಣದಲ್ಲಿ ಜಮಾಯಿಸಿದರು. ನಂತರ ಟಿಪ್ಪು ಜಯಂತಿ ಆಚರಿಸುತ್ತಿರುವ ರಾಜ್ಯ ಸರ್ಕಾರ, ಜಯಂತಿ ಆಚರಣೆಗೆ ತಂದ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿ ಭಟನೆ ಆರಂಭಿಸಿ ಉದ್ಯಾನವನದಲ್ಲಿ ಧರಣಿ ನಡೆಸಿದರು.

ಭಾರತದ ಇತಿಹಾಸದಲ್ಲೇ ಟಿಪ್ಪು ಸುಲ್ತಾನನಷ್ಟು ಹಿಂದೂಗಳ ಹತ್ಯೆ ನಡೆ ಸಿದ, ದೇವಾಲಯಗಳನ್ನು ಕೆಡವಿದ, ಮತಾಂತ ರಿಸಿದ ರಾಜ ಮತ್ತೊಬ್ಬನಿಲ್ಲ. ಹೀಗಿದ್ದರೂ ಸಹ ಟಿಪ್ಪು ಒಬ್ಬ ರಾಷ್ಟ್ರೀಯ ವಾದಿ ಹಾಗೂ ಸ್ವಾತಂತ್ರ್ಯ ಹೋರಟಗಾರ ಎಂಬಂತೆ ರಾಜ್ಯ ಸರ್ಕಾರ ಬಿಂಬಿಸುವ ಪ್ರಯತ್ನ ನಡೆಸಿದೆ ಎಂದು ಪ್ರತಿಭಟ ನಾಕಾರರು ದೂರಿದರು.

ಟಿಪ್ಪು ಓರ್ವ ಕನ್ನಡ ವಿರೋಧಿ, ಮತಾಂಧ, ದೇವಸ್ಥಾನ ಹಾಗೂ ಚರ್ಚ್ ನಾಶಗೊಳಿಸಿದ ಮೂಲಭೂತವಾದಿ, ಹೀಗಾಗಿ ಟಿಪ್ಪು ಜಯಂತಿ ರದ್ದು ಗೊಳಿಸಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿ ಕಾರ್ಜುನಪ್ಪ, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಬಾಲ ಸುಬ್ರಹ್ಮಣ್ಯ, ಜಿಪಂ ಸದಸ್ಯ ಸಿ.ಎನ್.ಬಾಲರಾಜು, ನಗರಸಭಾ ಸದಸ್ಯರಾದ ಮಂಜುನಾಥ್, ಚಂದ್ರಶೇಖರ್, ಮನೋಜ್‍ಪಟೇಲ್, ಮಹ ದೇವಯ್ಯ, ಮಮತಾ, ಆಶಾ, ಗಾಯಿತ್ರಿ, ಮಾಜಿ ಅಧ್ಯಕ್ಷ ಮಹದೇವನಾಯಕ, ಮುಖಂಡರಾದ ಮೂಡ್ಲುಪುರ ನಂದೀಶ್, ಸುಧೀರ್, ಚಂದ್ರಶೇಖರ್, ಮಹದೇವಸ್ವಾಮಿ, ಸಿದ್ದರಾಜು, ಶಿವಣ್ಣ, ರಂಗಸ್ವಾಮಿ, ಕಿರಣ್, ಸತೀಶ್, ಪ್ರಶಾಂತ್ ಇತರರಿದ್ದರು.

Translate »