ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮೈಸೂರು

ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

November 10, 2018

ಮೈಸೂರು:  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿಗೆ ವಿವಿಧ ಯೋಜನೆಯಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ ರೂ.1 ಲಕ್ಷದಿಂದ ರೂ. 3 ಲಕ್ಷದವರೆಗೆ ಸಾಲವನ್ನು 18 ರ ಮೇಲ್ಪಟ್ಟು 55 ವರ್ಷ ಒಳಗಿನ ವಯೋಮಿತಿ ಪಡೆಯಬಹುದಾಗಿದೆ. 3 ವರ್ಷ ಮೇಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳಿಗೆ ಕಿರು ಸಾಲ ನೀಡಲಾಗುವುದು. ಗುಂಪಿನ ಸದಸ್ಯರೆಲ್ಲಾ ಎರಡು ಉದ್ದೇಶಕ್ಕೆ ಹೈನುಗಾರಿಕೆ ಹೊರತುಪಡಿಸಿ ಸಾಲವನ್ನು ಪಡೆದು ಆದಾಯ ಉತ್ಪನ್ನ ಚಟುವಟಿಕೆಗೆ ತೊಡಗಿಸಿ ಕೊಳ್ಳುವುದು. ಚೇತನ ಯೋಜನೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ಧನ ನೀಡಲಾಗುವುದು. 19 ವರ್ಷ ಮೇಲ್ಪಟ್ಟವರು, ಆಶೋದಯ ಸಮಿತಿಯಿಂದ ಮತ್ತು ಆಶೋದಯ ಅಕಾಡೆಮಿ ಸಂಸ್ಥೆಯಲ್ಲಿ ನೊಂದಣಿಯಾದ ಲೈಂಗಿಕ ಕಾರ್ಯಕರ್ತೆಯರು ಅರ್ಜಿ ಸಲ್ಲಿಸಬಹುದು.

ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಸಾಲಸೌಲಭ್ಯ ನೀಡಲಾಗುವುದು. ವಯೋಮಿತಿ 18 ರಿಂದ 60 ವಯೋಮಿತಿಯಲ್ಲಿರಬೇಕು .ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ “ಬೀದಿಬದಿ ವ್ಯಾಪಾರಿ”ಎಂದು ನೋಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ)ಯವರಿಂದ ಬೀದಿಬದಿ ವ್ಯಾಪಾರಿ ಎಂದು ಧೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು. ಅರ್ಜಿಗಳನ್ನು ನವೆಂಬರ್ 17 ರೊಳಗಾಗಿ ಸಲ್ಲಿಸಬೇಕಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, 1ನೇ ಮಹಡಿ, ಸ್ತ್ರೀಶಕ್ತಿ ಭವನ, ಕೃಷ್ಣದೇವರಾಯ ವೃತ್ತ, ವಿಜಯನಗರ 2ನೇ ಹಂತ, ಮೈಸೂರು-17. ದೂರವಾಣಿ ಸಂಖ್ಯೆ:0821-2495432/ 2498031 ನ್ನು ಸಂಪರ್ಕಿಸಬಹುದು.

Translate »