ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ರಾಜ ಕೀಯ ಪಕ್ಷಗಳಿಂದ ಭರದ ಸಿದ್ಧತೆ ನಡೆದಿದೆ. ನಾಮಪತ್ರ ಸಲ್ಲಿಸಲು ನಾಳೆ (ಸೋಮವಾರ) ಕಡೆಯ ದಿನವಾಗಿ ರುವ ಹಿನ್ನೆಲೆಯಲ್ಲಿ ಬಂಡಾಯಗಾ ರರ ಮನವೊಲಿಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಅಂತಿಮ ಕಸರತ್ತು ನಡೆದಿದೆ.
ಅಧಿಕೃತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿ ದ್ದಾರೆ. ಪಕ್ಷೇತರ, ಸ್ವತಂತ್ರ, ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಈಗಾಗಲೇ 96 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಚುನಾವಣಾ ಕಣ ಮತ್ತಷ್ಟು ರಂಗೇರಲಿದ್ದು, ಮೆರವಣಿಗೆ, ಪಕ್ಷಗಳ ಶಕ್ತಿ ಪ್ರದರ್ಶನ, ರ್ಯಾಲಿಗಳು ಮುಂತಾದವು ನಡೆಯಲಿವೆ. ಈಗಾ ಗಲೇ ಕಣದಲ್ಲಿರುವ ಅಧಿಕೃತ ಅಭ್ಯರ್ಥಿ ಗಳು ಬಂಡಾಯಗಾರರ ಮನವೊಲಿಕೆ ಪ್ರಯತ್ನದಲ್ಲಿದ್ದರೆ, ಬಂಡಾಯವಿಲ್ಲದ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಪಕ್ಷದ ಹಿರಿಯರನ್ನು ಭೇಟಿ ಮಾಡುತ್ತಿರುವುದಲ್ಲದೆ, ಜಾತಿವಾರು ಸಭೆಗಳಿಗೆ ಮುಂದಾ ಗಿದ್ದಾರೆ. ಅಲ್ಲದೆ ವಿವಿಧ ಪಕ್ಷಗಳ ಮುಖಂಡರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಅಂದರೆ ಯಶವಂತಪುರದಲ್ಲಿ ಕಾಂಗ್ರೆಸ್ ಟಿಕೆಟ್ ಅಂತಿಮ ಗೊಂಡಿಲ್ಲ. ಅದೇ ರೀತಿ ವಿಜಯನಗರ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಮುಂದುವರೆದಿದೆ. ಇವರ ಮನವೊಲಿಕೆಗೆ ವರಿಷ್ಠರು ಪ್ರಯತ್ನ ನಡೆಸಿದ್ದಾರೆ. ಹೊಸಕೋಟೆ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ಇಲ್ಲಿನ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಕೆಯ ಪ್ರಯತ್ನ ವಿಫಲ ಗೊಂಡಿದ್ದು, ಅವರನ್ನು ಬಿಜೆಪಿಯಿಂದ ಉಚ್ಛಾ ಟಿಸಲಾಗಿದೆ. ಅತ್ತ ಬೆಳಗಾವಿಯ ಅಥಣಿ, ಕಾಗವಾಡ, ಗೋಕಾಕ್ ಕ್ಷೇತ್ರಗಳಲ್ಲಿ ನಾಳೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ದ್ದಾರೆ. ಅದೇ ರೀತಿ ರಾಣೆಬೆನ್ನೂರು, ವಿಜಯನಗರ ಕ್ಷೇತ್ರಗಳಲ್ಲೂ ಕೂಡ ವಿವಿಧ ಪಕ್ಷಗಳ ನಾಮಪತ್ರಗಳ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.
ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ತೀರ್ಮಾನಿಸಲಾಗಿದ್ದ ರಾಜ್ ಕುಮಾರ್ ಅವರು ಕಣಕ್ಕಿಳಿಯಲು ಹಿಂದೇಟು ಹಾಕಿರುವುದರಿಂದ ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಇಂದು ಸಂಜೆಯೊಳಗೆ ಈ ಕ್ಷೇತ್ರಕ್ಕೆ ಅಭ್ಯರ್ಥಿ ಅಖೈರು ಗೊಳಿಸಲು ಪಕ್ಷ ತೀರ್ಮಾನಿಸಿದೆ. ಪಾಳ್ಯ ನಾಗರಾಜ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅತ್ತ ಹುಣಸೂರು, ಕೆ.ಆರ್.ಪೇಟೆಯಲ್ಲೂ ಕೂಡ ಭಾರೀ ಜನಸಮೂಹದೊಂದಿಗೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿರುವ ವಿಶ್ವನಾಥ್, ನಾರಾಯಣಗೌಡ ಅವರು ಬೇರೆ ಪಕ್ಷದ ಮುಖಂಡರನ್ನು ತಮ್ಮತ್ತ ಸೆಳೆ ಯುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿರುವ ಬಂಡಾಯಗಾರರು ಸೇರಿದಂತೆ ಎಲ್ಲರನ್ನು ಒಟ್ಟಿಗೆ ಕರೆದೊಯ್ದು ಪ್ರಚಾರ ನಡೆಸುವ ತಂತ್ರ ರೂಪಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ವಿವಿಧ ಸಂಘಟನೆಗಳು ಸ್ತ್ರೀ ಶಕ್ತಿ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರೊಂದಿಗೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮಾತುಕತೆ ನಡೆಸಿದ್ದಾರೆ.ಡಿ.5 ರಂದು ನಡೆಯಲಿರುವ ಉಪಚುನಾವಣೆಗೆ ಕೇವಲ 18 ದಿನಗಳು ಬಾಕಿ ಉಳಿದಿದ್ದು, ಚುನಾವಣಾ ಕಣ ರಂಗೇರತೊಡಗಿದೆ. ನಾಳೆಯಿಂದ ಯಡಿಯೂರಪ್ಪ ಅಖಾಡಕ್ಕಿಳಿಯಲಿ ದ್ದಾರೆ. ಕಾಂಗ್ರೆಸ್ ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಬಿಜೆಪಿಯ ಉಸ್ತುವಾರಿಗಳು ಚುನಾವಣಾ ಕಣದಲ್ಲಿದ್ದು, ರಣತಂತ್ರ ರೂಪಿಸಿದ್ದಾರೆ. ನವೆಂಬರ್ 21ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಅಲ್ಲಿಯವರೆಗೂ ಬಂಡಾಯಗಾರರ ಮನವೊಲಿಸುವ ಪ್ರಯತ್ನ ನಡೆಸಲಾಗುವುದು. ಮನವೊಲಿಕೆಗೆ ಬಗ್ಗದಿದ್ದರೆ ಪಕ್ಷದಿಂದ ಉಚ್ಛಾಟಿಸುವ ಎಚ್ಚರಿಕೆಯನ್ನು ಪ್ರಮುಖ ಪಕ್ಷಗಳ ಮುಖಂಡರು ನೀಡಿದ್ದಾರೆ. ಬಂಡಾಯ, ಭಿನ್ನಮತ, ಪಕ್ಷಾಂತರದ ನಡುವೆ ಉಪಚುನಾವಣಾ ಕಣ ಕಾವೇರಿದ್ದು, ನಾಳೆಯಿಂದ ಮತ್ತಷ್ಟು ರಂಗೇರಲಿದೆ.