ಇಂದು ರಾಮಕಥೆ, ಮಹಾಭಾರತ ಪುಸ್ತಕ ಬಿಡುಗಡೆ ಸಮಾರಂಭ
ಮೈಸೂರು

ಇಂದು ರಾಮಕಥೆ, ಮಹಾಭಾರತ ಪುಸ್ತಕ ಬಿಡುಗಡೆ ಸಮಾರಂಭ

February 17, 2019

ಮೈಸೂರು: ನಗರದ ಕಲಾಮಂದಿರ ಆವರಣದಲ್ಲಿರುವ ಮನೆಯಂಗಳ ದಲ್ಲಿ ಫೆ.17ರಂದು ಸಂಜೆ 5.30ಕ್ಕೆ ಮೈಸೂರಿನ ಸಂಸ್ಕøತಿ ಪ್ರಕಾಶನ ಮತ್ತು ಎನ್.ಎಸ್. ರಸ್ತೆಯಲ್ಲಿರುವ ಶ್ರೀನಿಧಿ ಪುಸ್ತಕ ಅವರಿಂದ ವಿದ್ವಾಂಸ ದಿ.ರಸಿಕಪುತ್ತಿಗೆ ಅವರ ‘ರಾಮಕಥೆ’ ಮತ್ತು ‘ಮಹಾಭಾರತ’ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಡಿಸ ಲಾಗಿದೆ. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಪುಸ್ತಕ ಬಿಡುಗಡೆಗೊಳಿಸುವರು. ಪ್ರಾಚ್ಯವಸ್ತು ಸಂಶೋಧನಾಲಯ ನಿವೃತ್ತ ಉಪನಿರ್ದೇಶಕ ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ ಅವರು ‘ರಾಮಕಥೆ’ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಅವರು ‘ಮಹಾ ಭಾರತ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಮೈಸೂರಿನ ನವರಸ ನಾಟ್ಯಾಲಯ ಅಧ್ಯಕ್ಷರು ಹಾಗೂ ಲೇಖಕ ಡಾ.ಟಿ.ಎಸ್. ಶ್ರೀವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸು ವರು. ‘ರಾಮಕಥೆ’ ಮತ್ತು ‘ಮಹಾಭಾರತ’ ಸಂಪಾದಕ ಡಾ.ವಿ.ರಂಗನಾಥ್, ಪುಸ್ತಕ ಸಲಹೆಗಾರ ಹಾಗೂ ಲೇಖಕ ಶ್ರೀ ಸಂಸ್ಕøತಿ ಸುಬ್ರಹ್ಮಣ್ಯ ಉಪಸ್ಥಿತರಿರಲಿದ್ದಾರೆ. ಕಾರ್ಯ ಕ್ರಮದಲ್ಲಿ 350 ರೂ. ಮುಖಬೆಲೆ ಹೊಂದಿರುವ ‘ಮಹಾಭಾರತ’ ಪುಸ್ತಕವನ್ನು 250 ರೂ.ಗೆ ಹಾಗೂ 400 ರೂ. ಮುಖಬೆಲೆ ಹೊಂದಿರುವ ‘ರಾಮಕಥೆ’ ಪುಸ್ತಕ ವನ್ನು 280 ರೂ.ಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. 2 ಪುಸ್ತಕ ಗಳನ್ನು 500 ರೂ.ಗೆ ಮಾರಾಟ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Translate »