ಕಾರ್ಮಿಕ ಸಂಘಟನೆಗಳಿಂದ ಇಂದು, ನಾಳೆ ಭಾರತ್ ಬಂದ್
ಹಾಸನ

ಕಾರ್ಮಿಕ ಸಂಘಟನೆಗಳಿಂದ ಇಂದು, ನಾಳೆ ಭಾರತ್ ಬಂದ್

January 8, 2019

ಹಾಸನದಲ್ಲೂ ಬಂದ್ ಯಶಸ್ವಿಗೊಳಿಸಲು ಎಐಟಿಯುಸಿ ಮನವಿ
ಹಾಸನ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಪ್ರತಿನಿತ್ಯ ಜನ ಸಾಮಾನ್ಯರಿಗೆ ಹೊರೆಯಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಈ ಕ್ರಮವನ್ನು ಖಂಡಿಸಿ ಎಐಟಿಯುಸಿ ವತಿಯಿಂದ ಜ.8 ಮತ್ತು 9ರಂದು ಎರಡು ದಿನಗಳ ಕಾಲ ರಾಷ್ಟ್ರಾದ್ಯಂತ ಮುಷ್ಕರವನ್ನು ಹಮ್ಮಿಕೊಳ್ಳ ಲಾಗಿದ್ದು, ಹಾಸನದಲ್ಲೂ ಬಂದ್ ಯಶಸ್ವಿ ಗೊಳಿಸಲು ಸಹಕರಿಸುವಂತೆ ಎಐಟಿ ಯುಸಿ ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿ, ಜ.8ರಂದು ನq Éಯಲಿರುವ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಕೂಡ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸಾರಿಗೆ ಸಂಪರ್ಕ, ಬ್ಯಾಂಕ್, ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಂಪೂರ್ಣ ಬಂದ್ ಆಗಲಿವೆ. ಈ ಮುಷ್ಕ ರಕ್ಕೆ ಜಿಲ್ಲೆಯ ವರ್ತಕರು, ಸಾರ್ವಜನಿಕರು ಮತ್ತು ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಜನ ವಿರೋಧಿ ಖಂಡಿಸಿ ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಉದ್ಯೋಗ ಸಮಸ್ಯೆ, ನಿರಂ ತರ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್‍ಗಳ ಅನಗತ್ಯ ಬೆಲೆ ಏರಿಕೆ, ಸಾರ್ವ ಜನಿಕ ಉದ್ಯಮಗಳ ಖಾಸಗೀಕರಣ, ರೈತರ ಸಾಲಮನ್ನಾ ವಿರೋಧ, ಸಂವಿಧಾನ ಬದ ಲಾವಣೆ ಹೇಳಿಕೆ ಸೇರಿದಂತೆ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಹಾಗೂ ಇಂದು ದೇಶಕ್ಕೆ ಅನ್ನ ಕೊಡುವ ರೈತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ಸೇವೆಯನ್ನು ಮಾಡುವ ನೌಕರರು, ಕೂಲಿಯನ್ನು ನಂಬಿರುವ ಕೃಷಿ ಕೂಲಿ ಕಾರ್ಮಿಕರು ಗಂಭೀರವಾದ ಪರಿಸ್ಥಿತಿ ಯನ್ನು ಎದುರಿಸುತ್ತಿದ್ದಾರೆ.

ನಿರುದ್ಯೋಗ ಸಮಸ್ಯೆ ದೇಶದ ಯುವ ಜನರನ್ನು ಬಾಧಿಸುತ್ತಿದೆ. ಅಗತ್ಯ ವಸ್ತುಗಳ ಮತ್ತು ಸೇವೆಗಳಾದ ಆಹಾರ, ವಸತಿ, ಇಂದನ, ಶಿಕ್ಷಣ, ಆರೋಗ್ಯ ಮತ್ತಿತರೆಗಳ ಬೆಲೆ ಅತ್ಯಂತ ದುಬಾರಿಯಾಗಿದೆ. ಎಲ್ಲಾ ಕಾರ್ಮಿಕರಿಗೆ ಮಾಸಿಕ 18 ಸಾವಿರ ರೂ ರಾಷ್ಟ್ರೀಯ ಸಮಾನ ವೇತನ ನೀಡಬೇಕು. ‘ನೋಟ್‍ಬ್ಯಾನ್’ ಮತ್ತು ‘ಜಿಎಸ್‍ಟಿ’ ಯಂತಹ ಅನರ್ಥಕಾರಿ ಆರ್ಥಿಕ ಕ್ರಮ ಗಳಿಂದಾಗಿ ದೇಶದ ಆಂತರಿಕ ಉತ್ಪಾದನೆ ಯಲ್ಲಿ ತೀವ್ರ ಕುಸಿತ, ಉದ್ಯೋಗನಾಶ, ಹಣದುಬ್ಬರದಿಂದಾಗಿ ಕೃಷಿ ಮತ್ತು ಕೈಗಾ ರಿಕೆ ಬಿಕ್ಕಟ್ಟಿಗೆ ಸಿಲುಕಿವೆ. ಮಾತ್ರವಲ್ಲದೇ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವಂತಹ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ಪ್ರಧಾನಮಂತ್ರಿ ಯಾರು ಆಗಬೇಕು ಎಂಬುದು, ಇದು ನಮಗೆ ಮುಖ್ಯವಲ್ಲ. ನೇತಾರರ ಬದಲಾವಣೆಯು ನಮ್ಮ ಉದ್ದೇಶವಲ್ಲ. ಆದರೇ ನೀತಿಗಳು ಮೊದಲು ಬದಲಾಗಬೇಕು ಎಂದರು. ಶ್ರೀಮಂತರ ಪರವಾಗಿ ಎಲ್ಲಾ ಸೌಕರ್ಯ, ಯೋಜನೆಗಳು ಇದ್ದು, ದೇಶವನ್ನು ಉಳಿ ಸುವ ನಿಟ್ಟಿನಲ್ಲಿ ಮುಷ್ಕರ ಮಾಡುತ್ತಿರು ವುದು ಅನಿವಾರ್ಯವಾಗಿದೆ. ರೈತರಿಗೆ, ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಬ್ಯಾಂಕ್ ನೌಕರರಿಗೆ, ವಿಮಾ ನೌಕರರಿಗೆ ಸೇರಿದಂತೆ ಇತರೆ ಸಾಮಾನ್ಯ ಜನರನ್ನು ಉಳಿಸಲು ಕೇಳಲಾಗುತ್ತಿದೆ ಎಂದು ಕಿವಿ ಮಾತು ಹೇಳಿದರು. ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಇಂದು ಬೆಳಗ್ಗೆ ಬೃಹತ್ ಸಂಖ್ಯೆಯಲ್ಲಿ ನೌಕರರು , ಕಾರ್ಮಿಕರು ಹಾಗೂ ಸಾವ ್ಜನಿಕರ ನೇತೃತ್ವದಲ್ಲಿನಗರದಾದ್ಯಂತ ಮೆರವಣಿಗೆ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯ ದರ್ಶಿ ಸಿ.ಧರ್ಮರಾಜ್, ಕೆಎಸ್‍ಆರ್‍ಟಿಸಿ ಜಿಲ್ಲಾ ಕಾರ್ಯದರ್ಶಿ ಜಿ.ಟಿ.ರಂಗೇಗೌಡ, ಮಲ್ಲಿಕಾರ್ಜುನ್, ಇತರರು ಉಪಸ್ಥಿತರಿದ್ದರು.

ಶಾಲಾ-ಕಾಲೇಜಿಗೆ ರಜೆ ಇಲ್ಲ
ಹಾಸನ: ಕಾರ್ಮಿಕ ಸಂಘಟನೆ ಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಜ.8 ಮತ್ತು 9ರಂದು ಭಾರತ್ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿತ್ತು. ಹಾಸನ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

Translate »