ಬೆಂಗಳೂರು: 6 ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ನ್ಯಾ. ಬಿ.ವಿ.ಪಾಟೀಲ್‍ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಕಾಪೆರ್Çೀರೇಟರ್‍ಗಳಾದ ಶ್ವೇತಾ ವಿಜಯ್, ಪುಷ್ಪಾ ಮಂಜುನಾಥ್ ಸೇರಿ 20 ಮಂದಿ ನ್ಯಾಯಾಲಯದ ಮುಂದೆ ಹಾಜ ರಾಗಿದ್ದರು. ಆದರೆ ಪ್ರಮುಖ ಅರೋಪಿ ಲಿಂಬಾವಳಿ ಮಾತ್ರ ಗೈರಾದ ಹಿನ್ನೆಲೆ ನ್ಯಾಯಾಧೀಶರು, ಹಾಜರಾದ ಎಲ್ಲಾ ಅರೋಪಿಗಳನ್ನ ವಶಕ್ಕೆ ಪಡೆಯಲು ಪೆÇಲೀಸರಿಗೆ ಸೂಚಿನೆ ನೀಡಿದ್ದರು. ಇದರಿಂದಾಗಿ ಒಂದು ಗಂಟೆಯ ಕಾಲ ಕೋರ್ಟ್‍ನಲ್ಲಿ ಆರೋಪಿಗಳನ್ನು ಕೂರಿಸಿದ್ದರು. ನಂತರ ಆರೋಪಿಗಳ ಪರ ವಕೀಲ ಶ್ಯಾಂ ಸುಂದರ್ ಕೋರ್ಟ್‍ಗೆ, ಪುನಃ ತಪ್ಪು ಮರುಕಳಿಸದಂತೆ ಎಲ್ಲಾ ಆರೋಪಿಗಳು ಹಾಜರಾಗ ಲಿದ್ದಾರೆ. ಆರೋಪಿಗಳನ್ನು ಬಂಧಿಸದಂತೆ ಪೆÇಲೀಸರಿಗೆ ಸೂಚಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ನ್ಯಾ. ಬಿ.ವಿ. ಪಾಟೀಲ್ ಮುಂದಿನ ವಿಚಾರಣೆಯ ವೇಳೆ ಖುದ್ದು ಲಿಂಬಾವಳಿ ಹಾಜರಾಗಬೇಕೆಂದು ಖಡಕ್ ಸೂಚನೆ ಮಾಡಿ ಪ್ರಕರಣದ ವಿಚಾರಣೆಯನ್ನ ಜ.22ಕ್ಕೆ ಮುಂದೂಡಿದರು.
ಪ್ರಕರಣದ ಹಿನ್ನೆಲೆ: ಹೆಚ್?ಎಎಲ್ ಪೆÇಲೀಸ್ ಠಾಣೆಯಲ್ಲಿ 2017 ಫೆ. 25 ರಂದು ಪೆÇೀಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್‍ಎಎಲ್ ಠಾಣೆಗೆ ಮುತ್ತಿಗೆ ಹಾಕಿ ಪೆÇಲೀಸರು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ 800 ಮಂದಿ ಕಾರ್ಯಕರ್ತರ ಜೊತೆ ಸೇರಿ ಲಿಂಬಾವಳಿ ಪ್ರತಿಭಟನೆ ಮಾಡಿದ್ದರು. ಈ ಬಗ್ಗೆ ಹೆಚ್‍ಎಎಲ್ ಠಾಣೆ ಪೆÇಲೀಸರು ದೂರು ದಾಖಲಿಸಿದ್ದರು.