ಜೊತೆಯಲ್ಲಿದ್ದವರಿಂದಲೇ ಪ್ರಶಾಂತ ಬರ್ಬರ ಹತ್ಯೆ
ಮೈಸೂರು

ಜೊತೆಯಲ್ಲಿದ್ದವರಿಂದಲೇ ಪ್ರಶಾಂತ ಬರ್ಬರ ಹತ್ಯೆ

January 8, 2019

ಮೈಸೂರು: ಫಾರಂಹೌಸ್‍ನಲ್ಲಿ ಜೊತೆಯಲ್ಲಿದ್ದ ಇಬ್ಬರೇ ಪ್ರಶಾಂತನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಪ್ರಶಾಂತ ಜೊತೆ ಇದ್ದ ಎಂ.ಸಿ.ಹುಂಡಿ ನಿವಾಸಿ ಲೋಕೇಶ ಮತ್ತು ಫಾರಂಹೌಸ್‍ನಲ್ಲಿ ಹಸು ಮೇಯಿಸಿಕೊಂಡಿದ್ದ ಪ್ರಮೋದ ಹತ್ಯೆಗೈದವರಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿ ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಸಮಯದಲ್ಲಿ ಫಾರಂಹೌಸ್‍ನಲ್ಲಿದ್ಧ ಕಿರಣ್ ಎಂಬ ಯುವಕ ಭಾನುವಾರ ರಾತ್ರಿ ನಡೆದ ಘಟನೆಯನ್ನು ನೋಡಿ ದ್ದಾನೆ. ಕೃತ್ಯ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಕಿರಣ್, ಪ್ರಮೋದ ಮತ್ತು ಲೋಕೇಶ, ಪ್ರಶಾಂತ ಅವರನ್ನು ಕೊಚ್ಚಿ ತನ್ನ ಕಣ್ಮುಂದೆಯೇ ಕೊಲೆ ಮಾಡಿ ಪರಾರಿಯಾದರು ಎಂದು ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಲೋಕೇಶ ಕಳೆದ 5 ತಿಂಗಳಿಂದ ಫಾರಂಹೌಸ್‍ನಲ್ಲಿ ಪ್ರಶಾಂತ ಜೊತೆಗಿದ್ದರೆ, ಪ್ರಮೋದ 2 ತಿಂಗಳಿಂದ ಹಸು ಮೇಯಿಸಿಕೊಂಡಿದ್ದ ಎಂದೂ ಕಿರಣ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಹಣಕಾಸು ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಲೋಕೇಶ ಎಂಬಾತ ಪ್ರಮೋದನನ್ನು ಬಳಸಿಕೊಂಡು ಪ್ರಶಾಂತನನ್ನು ಹತ್ಯೆಗೈದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಕರೀಂ ರಾವತರ್ ಅವರು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಪ್ರಶಾಂತ ಅವರು ಮೃತದೇಹವನ್ನು ಸಂಬಂಧಿಕರು ಸ್ವಗ್ರಾಮವಾದ ಕೋಲಾರ ಜಿಲ್ಲೆ, ವರ್ತೂರಿಗೆ ಕೊಂಡೊಯ್ದರು.

ಕಳೆದ ವರ್ಷ ಮೈಸೂರಲ್ಲಿ ಅಪರಾಧ ಪ್ರಕರಣ ಇಳಿಮುಖ
ಮೈಸೂರು: ಪೊಲೀಸರ ಕಾರ್ಯಸಾಧನೆ ಹಾಗೂ ಜನಸ್ನೇಹಿ ಸೇವೆ ಪರಿಣಾಮ 2018ರಲ್ಲಿ ಮೈಸೂರು ನಗರದಾದ್ಯಂತ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 7ರಷ್ಟು ಕಡಿಮೆಯಾ ಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಹೊಸ ಬೀಟ್ ಸಿಸ್ಟಂ, ರಾತ್ರಿ ಗಸ್ತು, ಶುಭೋದಯ, ಆಪರೇಷನ್ ಸನ್‍ಸೆಟ್ ಗಳಂತಹ ಸೇವಾ ನೈಪುಣ್ಯತೆಯಿಂದ ಮನೆ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. 2018ರಲ್ಲಿ 339 ಕಳವು ಪ್ರಕರಣ ಪತ್ತೆಯಾಗಿದ್ದು, 4.10 ಕೋಟಿ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ರೌಡಿ ಆಸಾಮಿಗಳ ಚಟುವಟಿಕೆ ಮೇಲೆ ನಿಗಾ ವಹಿಸಿದ್ದರಿಂದ ಅಪರಾಧ ಪ್ರಕರಣ ಗಳಿಗೆ ಕಡಿವಾಣ ಹಾಕಿದಂತಾಗಿದೆ. ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಒಟ್ಟು 769 ಸೆಕ್ಯೂರಿಟಿ ಕೇಸ್ ದಾಖಲಿಸಿ ಅಕ್ರಮ ಚಟುವಟಿಕೆ ನಿಯಂತ್ರಿಸಲು 265 ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ 9,284 ಪ್ರಕರಣ ದಾಖಲಿಸಿ 9,55,650 ರೂ. ದಂಡ ಸಂಗ್ರಹಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ 8.26 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಬೀಟ್ ಪೊಲೀಸರು ವಿಸಿಟಿಂಗ್ ಕಾರ್ಡ್ ವಿತರಣೆ, ಅಪರಾಧ ತಡೆ ಮಾಸಾ ಚರಣೆ ಮೂಲಕ ಜಾಗೃತಿ, ಆಪರೇಷನ್ ಈಗಲ್, ಆಪರೇಷನ್ ಹಾಕ್, ಆಪರೇ ಷನ್ ಹೌಂಡ್, ಆಪರೇಷನ್ ಚಾಮುಂಡಿ, ಆಪರೇಷನ್ ಡೆಕಾಯ್, ಆಪರೇಷನ್ ಔಲ್ ಕಾರ್ಯಾಚರಣೆಗಳನ್ನು ಪರಿಣಾಮ ಕಾರಿಯಾಗಿ ನಡೆಸಲಾಗುತ್ತಿದೆ.

ವಿಧ್ವಂಸಕ ಕೃತ್ಯಗಳಿಂದ ನಗರ ರಕ್ಷಿಸಲು ಕಮಾಂಡೋ ಟೀಂ ಕಾರ್ಯನಿರತವಾ ಗಿದೆ. ತುರ್ತು ಪರಿಸ್ಥಿತಿ ನಿಯಂತ್ರಿಸಲು ಮೊಬೈಲ್ ಕಮಾಂಡ್ ಕಂಟ್ರೋಲ್ ವಾಹನ ಬಳಸಲಾಗುತ್ತಿದೆ. ವಿದೇಶಿಗರು ಅಕ್ರಮವಾಗಿ ಬೀಡು ಬಿಟ್ಟಿರುವುದನ್ನು ಕಂಡು ಹಿಡಿಯಲು ಆಪರೇಷನ್ ಡಿಫಾರ್ ಮಾಡಲಾಗುತ್ತಿದೆ.

ಮೈಸೂರಲ್ಲಿ ಸುರಕ್ಷತಾ ಸಂಚಾರ ವ್ಯವಸ್ಥೆ ಜಾರಿಗೆ ಸಂಚಾರ ಸಲಹಾ ಸಮಿತಿ ಸಭೆ ನಡೆಸಿ ಜನ ಸ್ನೇಹಿ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರಯಾಣಿ ಕರಿಗೆ ಸೇವೆ ಒದಗಿಸಲು ನಿರಾಕರಿಸುವ ಆಟೋ ಚಾಲಕರ ವಿರುದ್ಧ ಕ್ರಮ ವಹಿಸಲಾಗುತ್ತದೆ.
ಪೊಲೀಸ್ ಆಯುಕ್ತರ ಕಚೇರಿ ಬಳಿಯ ಮಕ್ಕಳ ಉದ್ಯಾನದಲ್ಲಿ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು, ಸಂಚಾರ ಪೊಲೀಸರು ಜನ ಸ್ನೇಹಿಗಳಾಗಲು ಒಙಖಿಖಂ ಯೋಜನೆಯನ್ನು ಜಾರಿಗೊಳಿಸಿ ಮೈಸೂರಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ.

Translate »