ಬಂದ್‍ಗೆ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲ  ಇಂದು ಪ್ರತಿಭಟನೆ, ಮೆರವಣಿಗೆ
ಮೈಸೂರು

ಬಂದ್‍ಗೆ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲ ಇಂದು ಪ್ರತಿಭಟನೆ, ಮೆರವಣಿಗೆ

January 8, 2019

ಮೈಸೂರು: ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‍ಗೆ ಮೈಸೂರು ವಿಭಾಗದ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿಸಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಜನವರಿ 8ರಂದು ಬೆಳಿಗ್ಗೆ 10 ಗಂಟೆಗೆ ಲಷ್ಕರ್ ಮೊಹಲ್ಲಾದ ಪ್ರಧಾನ ಅಂಚೆ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಅಲ್ಲಿಂದ ಪುರಭವನದವರೆಗೂ ಮೆರವಣಿಗೆ ನಡೆಸ ಲಾಗುವುದು ಎಂದು ವಿಭಾಗದ ಕಾರ್ಯ ದರ್ಶಿ ಸುಂದರಯ್ಯ ತಿಳಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದಲ್ಲಿ 65 ಅಂಚೆ ಕಚೇರಿ ಗಳಿದ್ದು, ಮೈಸೂರು ನಗರದಲ್ಲಿಯೇ 38 ಕಚೇರಿಗಳಿವೆ. ಅವುಗಳಲ್ಲಿ 1500 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಈ ಮುಷ್ಕರ ದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಎರಡು ದಿನ ಅಂಚೆ ಕಚೇರಿಗಳು ಸಂಪೂರ್ಣ ವಾಗಿ ಸ್ಥಗಿತಗೊಳ್ಳಲಿವೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ರಾಜ್ಯಾಧ್ಯಕ್ಷ ಸಿ.ಆರ್.ದೀನ ಬಂಧು ಮಾತನಾಡಿ, ಹಳೆ ಪಿಂಚಣಿ ನೀತಿ ಜಾರಿಯಾಗಬೇಕು. ಕಮಲೇಶ ಚಂದ್ರ ವರದಿಯ ಧನಾತ್ಮಕ ಅಂಶಗಳನ್ನು ಬಲ ಪಡಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿಗೊಳಿಸಬೇಕು. ಸಿಎಸ್‍ಐ ಮತ್ತು ಆರ್‍ಐಸಿಟಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು. ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಸೇರಿದಂತೆ ಹಲವು ಬೇಡಿಕೆ ಗಳನ್ನು ಈಡೇರಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಜೆಸಿಎ ಕಾರ್ಯದರ್ಶಿ ಎನ್.ವನ ಜಾಕ್ಷ, ಪದಾಧಿಕಾರಿಗಳಾದ ಪರಮೇಶ್, ಬಸವ ರಾಜ್, ಮಹದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »