ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ವತಿಯಿಂದ ದಸರಾ ವಸ್ತುಪ್ರದರ್ಶನ-2018ರ ಲಲಿತಕಲಾ ಮತ್ತು ಕರಕುಶಲ ವಿಭಾಗದಿಂದ ನಡೆದ ಸ್ಥಳದಲ್ಲಿಯೇ ಮಣ್ಣಿನ ಕಲಾಕೃತಿ ರಚನೆ ಸ್ಪರ್ಧೆಗೆ ಸುಮಾರು 15 ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸಿದರು.
ಪ್ರೌಢಶಾಲಾ ವಿಭಾಗದಿಂದ ಸೆಂಟ್ ಜೋಸೆಫ್ ಕಾನ್ವೆಂಟ್‍ನ 9 ನೇ ತರಗತಿ ವಿದ್ಯಾರ್ಥಿ ಯೋಗೇಶ್ವರ್ ಪ್ರಥಮ ಸ್ಥಾನ ಹಾಗೂ ಮರಿಮಲ್ಲಪ್ಪ ಪ್ರೌಢಶಾಲೆಯ ಕೃತ್ತಿಕ ದ್ವಿತೀಯ ಸ್ಥಾನ ಪಡೆದಿದ್ದಾರೆ. 16 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಎಂಎಸ್ಸಿ ವಿದ್ಯಾರ್ಥಿ ಶರತ್ ಟಿ.ಎನ್. ಪ್ರಥಮ ಬಹುಮಾನ, ವೈಜಯಂತಿ ಚಿತ್ರಕಲಾ ಶಾಲೆಯ ಅನಿಲ್‍ಕುಮಾರ್ ದ್ವಿತೀಯ ಬಹುಮಾನ, ಆರ್ಕಿಟೆಕ್ಚರ್ ವಿದ್ಯಾರ್ಥಿ ಸುಧಾಕರ್ ಮಲ್ಲು ತೃತೀಯ ಬಹುಮಾನ ಹಾಗೂ ನಾಗರಾಜು ಎಂ, ಸುಮನ್.ಎಸ್ ಹಾಗೂ ರಾಣಿ ಇವರುಗಳು ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.