ತಂಬಾಕು ಬೆಳೆಗಾರರ ಪ್ರತಿಭಟನೆ
ಮೈಸೂರು

ತಂಬಾಕು ಬೆಳೆಗಾರರ ಪ್ರತಿಭಟನೆ

January 8, 2019

ಮೈಸೂರು: ತಂಬಾಕು ಬೆಳೆಗಾರರ ಸಮಸ್ಯೆ ಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿ ಹುಣಸೂರು ಘಟ ಕದ ವತಿಯಿಂದ ಸೋಮವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸ ಲಾಯಿತು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿಯಿಂದ ತಂಬಾಕು ಬೆಳೆಗಾರರು ಮೆರವಣಿಗೆ ಮೂಲಕ ತಂಬಾಕು ಮಂಡಳಿ ಮೈಸೂರು ಪ್ರಾದೇ ಶಿಕ ವ್ಯವಸ್ಥಾಪಕರ ಕಚೇರಿಗೆ ತೆರಳಿ, ಅಲ್ಲಿ ಪ್ರತಿಭಟನೆ ನಡೆಸಿದರು.
ಹುಣಸೂರು ತಾಲೂಕಿನಲ್ಲಿ ಸುಮಾರು 10 ಸಾವಿರ ತಂಬಾಕು ಬೆಳೆಗಾರರಿದ್ದು, ಲೈಸೆನ್ಸ್ ಹೊಂದಿಲ್ಲದ ಕಾರಣಕ್ಕೆ ಇವರೆಲ್ಲಾ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಲೈಸೆನ್ಸ್ ಹೊಂದಿಲ್ಲದ ಕಾರ್ಡ್ ದಾರರಿಗೆ ಆರಂಭದಲ್ಲಿ 1 ಕೆ.ಜಿ. ತಂಬಾಕಿಗೆ ಶೇ.5ರಷ್ಟು ದಂಡ ವಿಧಿಸಲಾಗುತ್ತಿತ್ತು. ಆದರೆ ಪ್ರಸ್ತುತ ಶೇ.17ರಷ್ಟು ದಂಡ ಸಂಗ್ರಹಿಸು ತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆ ಮುಗಿಯುವ ಹಂತದಲ್ಲಿ ಕಾರ್ಡ್‍ದಾರರ ತಂಬಾಕು ಮಾರಾಟಕ್ಕೆ ಅವಕಾಶ ನೀಡುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಲೈಸೆನ್ಸ್ ಹೊಂದಿ ಲ್ಲದ ಬೆಳೆಗಾರರಿಗೆ ತಂಬಾಕು ಮಂಡಳಿ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಲೈಸೆನ್ಸ್ ಹೊಂದಿಲ್ಲದ ಬೆಳೆಗಾರರಿಂದ ಸಂಗ್ರಹಿಸಿರುವ ದಂಡದ ಹಣವನ್ನು ವಾಪಸ್ಸು ನೀಡಬೇಕು. ಮಾರುಕಟ್ಟೆ ಪ್ರಾರಂಭದ ದಿನಗಳಿಂದಲೇ ಕಾರ್ಡ್‍ದಾರರಿಗೂ ಅವಕಾಶ ಕಲ್ಪಿಸಬೇಕು. ಲೈಸೆನ್ಸ್ ಉಳ್ಳವರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ಕಾರ್ಡ್‍ದಾರ ರಿಗೂ ನೀಡಬೇಕು. ಎಲ್ಲಾ ತಂಬಾಕು ಬೆಳೆಗಾರರಿಗೂ ಲೇಸೆನ್ಸ್ ವಿತರಿಸಬೇಕು. ತಂಬಾಕಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿ ಸಿದ ತಂಬಾಕು ಮಂಡಳಿ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕರು, ಸಂಕ್ರಾಂತಿ ಹಬ್ಬದ ಬಳಿಕ ಲೈಸೆನ್ಸ್ ಹೊಂದಿಲ್ಲದ ಬೆಳೆಗಾರರ ತಂಬಾಕು ಮಾರಾಟಕ್ಕೆ ಅವಕಾಶ ನೀಡುವುದರ ಜೊತೆಗೆ ಇನ್ನಿತರ ಸಮಸ್ಯೆಗಳನ್ನು ಮಂಡಳಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸಿದರು.

Translate »