ಇಂದು, ನಾಳೆ ಮೈಸೂರಿನ ಕೆಲವೆಡೆನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ಮೈಸೂರಿನ ಕೆಲವೆಡೆನೀರು ಸರಬರಾಜಿನಲ್ಲಿ ವ್ಯತ್ಯಯ

June 8, 2019

ಮೈಸೂರು: ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 2ನೇ ಹಾಗೂ 3ನೇ ಹಂತ ಮತ್ತು ಬೆಳಗೊಳ ಯಂತ್ರಾ ಗಾರಕ್ಕೆ ಜೂ.8 ಹಾಗೂ 9ರಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಸರಬ ರಾಜು ನಿಲುಗಡೆ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪಂಪು ಮಾಡಲು ಸಾಧ್ಯವಾಗದೆ ಇರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಜೂನ್ 8 ಹಾಗೂ 9 ರಂದು ವಾರ್ಡ್ ನಂ. 1ರಿಂದ 6, ವಾರ್ಡ್ ನಂ.20, 23, 38, ವಾರ್ಡ್ ನಂ.42 ರಿಂದ45, ವಾರ್ಡ್ ನಂ 47 ಇದಕ್ಕೆ ಸಂಬಂಧಪಟ್ಟ ಡಿ.ಎಂ.ಎ. ಪ್ರದೇಶಗಳಾದ ಹೆಬ್ಬಾಳ, ಕುಂಬಾರಕೊಪ್ಪಲು, ಮಂಜೇಗೌಡನಕೊಪ್ಪಲು, ಕೆ.ಜಿ.ಕೊಪ್ಪಲ್, ಲೋಕನಾಯಕನಗರ, ಬೃಂದಾವನ ಬಡಾ ವಣೆ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ಶಾರದದೇವಿನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ 1, 3ನೇ ಹಂತ, ಗೋಕುಲಂ 1, 2, 3ನೇ ಹಂತ ಹಾಗೂ ಹೊರವಲಯಗಳಾದ ಆರ್.ಎಂ.ಪಿ., ಬಿ.ಇ.ಎಂ.ಎಲ್., ಯಾದವಗಿರಿ, ಬನ್ನಿಮಂಟಪ್ಪ ಎ.ಬಿ.ಸಿ. ಲೇಔಟ್, ಈರನಗರೆ, ಸಿದ್ದಿಖಿ ನಗರ, ಶಿವರಾತ್ರೀಶ್ವರನಗರ, ತಿಲಕ್ ನಗರ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ ಭಾಗಶ: ಎನ್.ಆರ್. ಮೊಹಲ್ಲಾ ಭಾಗಶ: ಪ್ರದೇಶಗಳು, ನಜûರ್‍ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ಕೃಷ್ಣಮೂರ್ತಿಪುರಂ, ಜನತಾನಗರ, ಕೆ.ಹೆಚ್.ಬಿ. ಕಾಲೋನಿ, ಹೂಟಗಳ್ಳಿ, ವಿಜಯನಗರ 2ನೇ ಹಂತ ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೈಸೂರು ನಗರಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಸಿದ್ದಾರೆ.

Translate »