ನಾಳೆ ನಂಜನಗೂಡಲ್ಲಿ ಬೃಹತ್ ಉದ್ಯೋಗ ಮೇಳ
ಮೈಸೂರು

ನಾಳೆ ನಂಜನಗೂಡಲ್ಲಿ ಬೃಹತ್ ಉದ್ಯೋಗ ಮೇಳ

October 5, 2018

ನಂಜನಗೂಡು: ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಗರದ ವಿದ್ಯಾವರ್ಧಕ ಮೈದಾನದಲ್ಲಿ ಬೃಹತ್ ಉದ್ಯೊಗ ಮೇಳ ಸಂಸದ ಆರ್.ಧ್ರುವನಾರಾಯಣ್ ಕಳಕಳಿ ಮೇರೆಗೆ ನಡೆಯುತ್ತಿದ್ದು, ತಾಲೂಕಿನ ನಿರುದ್ಯೋಗಿ ಯುವಕ ಯುವತಿಯರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋ ಜನ ಪಡೆದುಕೊಳ್ಳುವಂತೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೋರಿದ್ದಾರೆ.

ಅವರು ನಗರದ ಪತ್ರಕರ್ತರ ಭವನ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದರು. ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾವಂತ ಯುವಕ ಯುವತಿಯರು ಹಾಗೂ ಅಂಗವಿಕಲ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಡಬೇಕೆಂಬ ಪ್ರಯತ್ನದೊಂದಿಗೆ ಉಚಿತ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾ ಗಿದ್ದು, ಈ ಮೇಳದಲ್ಲಿ ಪ್ರಸಿದ್ದ ಬಹು ರಾಷ್ಟ್ರೀಯ ಕಂಪನಿಗಳು, ವಿವಿಧ ಕೈಗಾರಿಕೆ ಗಳು ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳು ಭಾಗವಹಿಸುತ್ತಿವೆ ಎಂದ ಅವರು ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ವನ್ನು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ನಾಗೇಶ್ ರಾಜ್,ಬ್ಲಾಕ್ ಅಧ್ಯಕ್ಷರುಗಳಾದ ಹಗಿನವಾಳು ಮೂಗಶೆಟ್ಟಿ, ಶೆಟ್ಟಹಳ್ಳಿ ಗುರುಸ್ವಾಮಿ, ಪಿ.ಶ್ರೀನಿವಾಸ್, ತಗಡೂರು ರಂಗಸ್ವಾಮಿ, ಕುರಹಟ್ಟಿ ಮಹೇಶ್, ನಗರಸಭಾ ಅಧ್ಯಕ್ಷೆ ಪುಷ್ಪಲತಾ ಕಮ ಲೇಶ್, ಶ್ರೀರಾಂಪುರ ಮಹದೇವು ಇದ್ದರು.

Translate »