ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು
ಚಾಮರಾಜನಗರ

ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

April 23, 2019

ಗುಂಡ್ಲುಪೇಟೆ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ಹಿಮ ವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿ ಗರ ದಂಡೇ ಹರಿದು ಬರುತ್ತಿದೆ.

ಪ್ರತಿದಿನ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂಡೀಪುರಕ್ಕೆ ಆಗಮಿಸುತ್ತಿ ರುವ ಪ್ರವಾಸಿಗರು ಬೆಳಿಗ್ಗೆ 7.30 ರಿಂದ 9.30 ರವರೆಗೆ ಸಫಾರಿಗೆ ತೆರಳಿ ಹಸಿರು ಸೊಬಗಿನ ಜೊತೆ ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ ಮತ್ತು ನವಿಲು ಸೇರಿದಂತೆ ವನ್ಯ ಮೃಗಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದ್ದು ಪರಿಸರ ಪ್ರೇಮಿಗಳ ಮನಸ್ಸಿಗೆ ನೋವುಂಟು ಮಾಡಿತ್ತು. ಆ ವೇಳೆ ಸಫಾರಿ ವಲಯ ದಲ್ಲಿ ಬೆಂಕಿ ಬಿದ್ದಿರಲಿಲ್ಲ. ಜೊತೆಗೆ ಕಳೆದೆ ರಡು ವಾರಗಳಿಂದ ಸಾಧಾರಣ ಪ್ರಮಾಣದ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಉತ್ತಮವಾಗಿ ಹಸಿರಿನಿಂದ ಕೂಡಿದ ಕಾನನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಇದೇ ರೀತಿ ಸಂಜೆಯ 4.30ರ ಸಫಾರಿಗೂ ತೆರಳಲು ಸಾವಿರಾರು ಪ್ರವಾಸಿ ಗರು ತಮ್ಮ ಮಕ್ಕಳೊಂದಿಗೆ ಬಂಡೀಪುರದ ಸ್ವಾಗತ ಕಚೇರಿ ಮುಂಭಾಗದಲ್ಲಿರುವ ಟಿಕೆಟ್ ಕೌಂಟರ್‍ನ ಮುಂದೆ ನಿಂತಿರುವ ದೃಶ್ಯ ಪ್ರತಿನಿತ್ಯ ಕಂಡು ಬರುತ್ತಿದೆ.

ಸದ್ಯ ಬಂಡೀಪುರದಲ್ಲಿ ಸಾಧಾರಣವಾಗಿ ಮಳೆಯಾಗಿದ್ದು, ಅಲ್ಲಲ್ಲಿ ಹಸಿರು ಸಿರಿ ಮೈದುಂಬಿಕೊಂಡಿದೆ. ಇದರಿಂದಾಗಿ ಇಲ್ಲಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾ ಗಿದೆ. ಎಲ್ಲೆಲ್ಲೂ ಹಚ್ಚ ಹಸಿರಿನ ಮೈಸಿರಿ. ಸಮೃದ್ದಿಯಾಗಿರುವ ತುಂಬಿರುವ ಕೆರೆ ಕಟ್ಟೆಗಳು. ಸ್ವಚ್ಛಂದವಾಗಿ ವಿಹರಿಸುವ ವನ್ಯ ಜೀವಿಗಳು ಮತ್ತು ಪಕ್ಷಿಗಳು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊಸದಾಗಿ ಚಿಗುರಿದ ಹುಲ್ಲನ್ನು ಮೇಯಲು ಬರುವ ಹರಿಣಗಳು ಹಾಗೂ ಆನೆಗಳು ಹಿಂಡು-ಹಿಂಡಾಗಿ ರಸ್ತೆ ಬದಿಯಲ್ಲಿ ಕಂಡು ಬರುತ್ತಿದ್ದು, ಪ್ರವಾಸಿಗರಲ್ಲಿ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕ ರಲ್ಲಿ ಸಂತಸ ಉಂಟು ಮಾಡಿದೆ.

ಪ್ರತಿ ದಿನವೂ ಪ್ರವಾಸಿಗರು ಆಗಮಿಸುವ ಈ ಉದ್ಯಾನವನದಲ್ಲಿ ಎಲ್ಲಿ ನೋಡಿದ ರಲ್ಲಿ ಹಸಿರು ಎದ್ದು ಕಾಣುತ್ತಿದೆ. ಅದರೊಂ ದಿಗೆ ಬೆಳಿಗ್ಗೆ ಹಾಗೂ ಸಂಜೆಯಾಗುತ್ತಿ ದ್ದಂತೆಯೇ ರಸ್ತೆಯ ಬದಿಯಲ್ಲಿ ಬೆಳೆದಿ ರುವ ಹಸಿರು ಹುಲ್ಲನ್ನು ಮೇಯಲು ಆಗಮಿಸುವ ಚುಕ್ಕಿ ಜಿಂಕೆಯನ್ನು ನೋಡಲು ಪ್ರವಾಸಿಗರು ಬಂಡೀಪುರಕ್ಕೆ ಮತ್ತೆ ಮತ್ತೆ ಬರಬೇಕು ಎನ್ನಿಸುವಂತಿದೆ.

ನೂರಾರು ಸಂಖ್ಯೆಯಲ್ಲಿ ರಸ್ತೆಯ ಪಕ್ಕದಲ್ಲೇ ಹಿಂಡು ಹಿಂಡಾಗಿ ಆಗಮಿಸುವ ಚುಕ್ಕೆ ಜಿಂಕೆಗಳ ಅಂದವನ್ನು ಕಣ್ತುಂಬಿ ಸಲು ಹಾಗೂ ತಮ್ಮ ಮೊಬೈಲ್‍ಗಳಲ್ಲಿ ಅವುಗಳ ಫೋಟೋವನ್ನು ಸೆರೆಹಿಡಿಯಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.

ಗೋಪಾಲನ ದರ್ಶನಕ್ಕೂ ಮುಗಿಬಿದ್ದ ಪ್ರವಾಸಿಗರು: ಸಮೀಪದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ದೇವಾಲಯದ ಮುಂಭಾಗ ಸರದಿ ಸಾಲಿನಲ್ಲಿ ನಿಂತು ಹಿಮವದ್ ಗೋಪಾಲ ಸ್ವಾಮಿ ದರ್ಶನ ಪಡೆದು ಪುನೀತರಾದ ಭಕ್ತಾದಿಗಳು, ಕುಟುಂಬ ಸಮೇತರಾಗಿ ಬಂಡೀಪುರ ಮತ್ತು ಮಧುಮಲೈ ಅರಣ್ಯ ಪ್ರದೇಶಗಳ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸೋಮಶೇಖರ್

Translate »