ಪ್ರಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ
ಚಾಮರಾಜನಗರ

ಪ್ರಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ

April 23, 2019

ಕೊಳ್ಳೇಗಾಲ: ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ತಿಳಿಸಿದರು.
ತಾಲೂಕಿನ ಚೆಲುವನಹಳ್ಳಿಯಲ್ಲಿ ಜೆಎಸ್‍ಬಿ ಪ್ರತಿಷ್ಠಾನ, ತಾಲೂಕು ಕಾನೂನು ಸೇವೆಗಳ ಸಮಿತಿ, ಕೃಷಿ ಇಲಾಖೆ ಮತ್ತು ಚೆಲುವನಹಳ್ಳಿ ರೋಟರಿ ಸಮು ದಾಯ ದಳದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಭೂಮಿ ದಿನದ ಅಂಗವಾಗಿ ಮಣ್ಣಿನ ಸಂರಕ್ಷಣೆ, ತಪಾಸಣೆ ಮತ್ತು ಮಣ್ಣಿನ ಆರೋಗ್ಯ ಚೀಟಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಕೃತಿ ನಮ್ಮೆಲ್ಲರನ್ನು ಪೆÇೀಷಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಯಾಗಬೇಕು. ಅಭಿವೃದ್ಧಿ ಹೆಸರಲ್ಲಿ ಅರಣ್ಯನಾಶ, ಪರಿಸರದ ಮೇಲೆ ನಿರಂತರ ದಬ್ಬಾಳಿಕೆ, ಕೃಷಿ ಭೂಮಿ ಪರಿವರ್ತನೆ ನಡೆಯುತ್ತಿದ್ದು, ಇವೆಲ್ಲವೂ ಜೀವ ವೈವಿಧ್ಯತೆಯ ಸರಪಳಿಗೆ ಪೆಟ್ಟು ನೀಡುತ್ತಿದೆ. ಇವೆಲ್ಲವನ್ನೂ ನಾವು ತಡೆಯಬೇಕಿದೆ. ಇದು ಕೃಷಿಯಿಂದ, ಕೃಷಿಕರಿಂದ ಮಾತ್ರ ಸಾಧ್ಯ. ರಾಸಾಯನಿಕ ಮುಕ್ತ ಕೃಷಿಯ ಕ್ರಾಂತಿಯ ಮೂಲಕ ವಿಶ್ವದ ಹಸಿವನ್ನು ನೀಗಿಸಲು, ವಿಷಮುಕ್ತ ಆಹಾರ ನೀಡಲು ರೈತರೆಲ್ಲರೂ ಪಣ ತೊಡಬೇಕು ಎಂದರು.

ಮಣ್ಣಿನ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಕೃಷಿಕರೂ ಆದ ರಾಜ್ಯ ಪ್ರಶಸ್ತಿ ಪುರಸ್ಕøತ ಶ್ರೀಕೈಲಾಸಮೂರ್ತಿ ಮಾತನಾಡಿ, ಭೂಮಿ ಇರುವುದು ಮಾರಾಟಕ್ಕಲ್ಲ. ಬದಲಿಗೆ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉಳಿಸಿ ಬಳುವಳಿಯಾಗಿ ನೀಡುವುದಕ್ಕೆ ಎಂಬ ವಾಸ್ತವ ಸಂಗತಿ ನಾವೆಲ್ಲರೂ ಅರಿಯಬೇಕಿದೆ ಶುದ್ದ ಗಾಳಿ ನೀರು, ಆಹಾರ ಪದಾರ್ಥಗಳನ್ನು ತಯಾರಿಸಲು ರೈತರಿಗೆ ಮಾತ್ರ ಸಾಧ್ಯವೇ ಹೊರತು ಬೇರಾರಿಂದಲೂ ಸಾಧ್ಯವಿಲ್ಲ ಎಂದರು. ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಿದೆ. 25 ವರ್ಷದಿಂದ ನಾನು ಸಹಜ ಕೃಷಿಯಲ್ಲಿ ಬೆಳೆ ಬೆಳೆಯುತ್ತಿದ್ದೇನೆ. ಯಾವತ್ತೂ ನನಗೆ ಬರದ ಅನುಭವ ಆಗಿಲ್ಲ. ರೈತರು ಯಾವು ದಕ್ಕೂ, ಯಾವ ಕಾರಣಕ್ಕೂ ಬೇರೆಯವರನ್ನು ಅವಲಂಬಿಸಬಾರದು. ಕಳೆ ಯಾವಾಗಲೂ ಬೆಳೆಗೆ ಪೂರಕ. ಕಳೆಯಿಂದಲೇ ನನಗೆ ಭೂಮಿ ಅಭಿವೃದ್ಧಿ ಮಾಡಲು ಸಾಧ್ಯವಾಯಿತು ಎಂದರು.

ನಾನು ರೈತನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಏಕೆಂದರೆ ನನ್ನ ಭೂಮಿಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಾನು ರೈತ ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಅತೀವ ಹೆಮ್ಮೆ ಇದೆ. ಕಳೆಗಳನ್ನು ತೆಗೆಯಲು ಬಳಸಲಾಗುತ್ತಿರುವ ಕಳೆನಾಶಕಗಳು ನಮ್ಮ ಆರೋಗ್ಯದ ಮೇಲೆ ಬಹಳ ಪ್ರಭಾವ ಬೀರುತ್ತದೆ. ತುಂಬಾ ಗಂಭೀರ ಕಾಯಿಲೆಗಳನ್ನು ತಂದೊಡ್ಡುತ್ತದೆ. ಭೂಮಿಯ ಮೇಲೆ ವಿಷಕಾರಕ ಕ್ರಿಮಿನಾಶಕಗಳನ್ನು ಯಥೇಚ್ಛವಾಗಿ ಬಳಸುತ್ತಾ ಹೋದರೆ, ನಮ್ಮ ಭೂಮಿ ಬಹುಬೇಗ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂಮಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ನಾವು ಕೊಲ್ಲುತ್ತಾ ಹೋದರೆ, ನಮ್ಮ ಭೂಮಿ ಬಹುಬೇಗ ಬಂಜರಾಗಿ ಬರಡಾಗುತ್ತದೆ. ಇದನ್ನೆಲ್ಲಾ ಮನಗಂಡು ನಾವು ಕಾಡುಕೃಷಿ ಮಾದರಿ ಕೃಷಿ ಪದ್ದತಿಯನ್ನು ಅಳವಡಿಸಿ ಕೊಂಡು ವ್ಯವಸಾಯ ಮಾಡಬೇಕಿದೆ. ಮರಗಳ ಬೆಳೆಸುವ ಜೊತೆಗೆ ವ್ಯವಸಾಯ ಮಾಡುವ ಕಲೆಯನ್ನು ಕಲಿಯಬೇಕು. ನಾವು ತಿನ್ನಲು ಭೂಮಿಯ ಮೇಲೆ ಸುಮಾರು 60 ಸಾವಿರ ವಿವಿಧ ಜಾತಿಯ ಸೊಪ್ಪುಗಳಿವೆ. ಇದನ್ನು ಬಿಟ್ಟು ನಾವು ಮಾಂಸಾಹಾರ ಸೇವನೆಯತ್ತ ಹೊರಳಿದ್ದು ವಿಪರ್ಯಾಸವೇ ಸರಿ. ಹೀಗಾಗಿ ನಾವೆಲ್ಲರೂ ಮತ್ತೆ ಮರಳಿ ಸಸ್ಯಹಾರ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಇಂದು ಜನರು ಅನೇಕ ರೀತಿಯ ಮಾನಸಿಕ, ದೈಹಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಮೂಲಕಾರಣ ನಮ್ಮ ಆಧುನಿಕ ಕೃಷಿ ಪದ್ದತಿ. ರಸಾಯನಿಕ ಗೊಬ್ಬರಗಳು, ವಿಷಪೂರಿತ ಕೀಟನಾಶಕ, ಕಳೆನಾಶಕಗಳನ್ನು ಹಾಕುವುದರಿಂದ ನಮ್ಮ ಭೂಮಿ ಹಾಳಾಗಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡೋಣ. ಭೂಮಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡೋಣ. ಏಕಬೆಳೆ ಪದ್ದತಿಯಿಂದ ಬಹುಬೆಳೆ ಪದ್ದತಿ ಅಳವಡಿಸಿಕೊಂಡು, ರಾಸಾಯನಿಕ ಗೊಬ್ಬರದ ಬದಲು ಸಾವಯವ, ದೇಶಿ ಹಸುವಿನ ಗೊಬ್ಬರ ಹಾಕಿ ಬೆಳೆ ಬೆಳೆಯೋಣ. ಆಗ ನಮ್ಮಿಂದ ಆರೋಗ್ಯಯುಕ್ತ, ರೋಗ ಮುಕ್ತ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ವತಿಯಿಂದ ಮಣ್ಣಿನ ಆರೋಗ್ಯ ಚೀಟಿಗಳನ್ನು ಫಲಾನುಭವಿಗಳಿಗೆ ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್. ಮಹದೇವ ವಿತರಿಸಿದರು. ಕೃಷಿ ವಿಜ್ಞಾನಿ ಡಾ.ಈರೇಶ್ ಮಣ್ಣಿನ ತಪಾಸಣಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶ ರಾದ ಶ್ರೀಕಾಂತ್, ಸಂತೋಷ ಕೊಠಾರಿ, ಜೆಎಸ್‍ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಹಿರಿಯ ವಕೀಲರಾದ ವೆಂಕಟಾಚಲ, ಅರಣ್ಯ ಇಲಾಖೆ ಆರ್‍ಎಫ್‍ಓ ಮಹದೇವಸ್ವಾಮಿ, ರೋಟರಿ ಸಂಸ್ಥೆಯ ಗಿರೀಶ್, ಮಹೇಶ್ ಇನ್ನಿತರರಿದ್ದರು.

Translate »